ಮಕ್ಕಳ ಒತ್ತಡವನ್ನು ನಿವಾರಿಸುವ ಉಸಿರಾಟದ ವ್ಯಾಯಾಮಗಳು
ಮಕ್ಕಳ ಆರೋಗ್ಯ ಸಲಹೆಗಳು
ಬುಸ್ ಬುಸ್ ಉಸಿರಾಟ..!
ದೀರ್ಘವಾಗಿ ಮೂಗಿನ ಮೂಲಕ ಉಸಿರನ್ನು ಎಳೆದುಕೊಳ್ಳಿ. ಅದನ್ನು ಬಾಯಿಯ ಮೂಲಕ ಬುಸ್ ಬುಸ್ ಅನ್ನುವ ರೀತಿ ಹೊರಗೆ ಬಿಡಿ. ಉಸಿರು ಬಿಡುವ ಸಮಯವು ಉಸಿರೆಳುದುಕೊಳ್ಳುವುದಕ್ಕಿಂತ ದೀರ್ಘವಾಗಿರಬೇಕು. ದೀರ್ಘ ಉಸಿರಾಟವು ನಿಮ್ಮ ಮಗುವಿನ ಮನಸ್ಸನ್ನು ಶಾಂತ ಮಾಡುತ್ತದೆ. ಇದು ಮಗುವಿನ ಆತಂಕ ಮತ್ತು ಒತ್ತಡಗಳನ್ನು ನಿವಾರಿಸುತ್ತದೆ.
ಕರಡಿ ಉಸಿರಾಟ
ದೀರ್ಘವಾಗಿ ಮೂಗಿನ ಮೂಲಕ ಉಸಿರನ್ನು ಎಳೆದುಕೊಳ್ಳಿ. ಅದನ್ನು 1 ರಿಂದ 2 ರವರೆಗೆ ನಿಲ್ಲಿಸಿಕೊಳ್ಳಿ, ನಂತರ ಮತ್ತೆ ಉಸಿರುಬಿಡಿ, ಬಿಡುವಾಗ ಸಹ ಸ್ವಲ್ಪ ಅಂದರೆ 1 ರಿಂದ 2 ಕ್ಷಣ ನಿಲ್ಲಿಸಿ. ಇದಕ್ಕಾಗಿ ನಿಮ್ಮ ಬೆರಳುಗಳ ಸಹಾಯ ಪಡೆಯಿರಿ. ಇದನ್ನು 4-5 ಬಾರಿ ಪುನರಾವರ್ತಿಸಿ. ಇದು ನಿಮ್ಮ ಮಗುವಿನ ಮನಸ್ಸನ್ನು ಶಾಂತ ಮಾಡಲು ಸಹಾಯ ಮಾಡುತ್ತದೆ.
ಜೇನು ನೊಣದ ಉಸಿರಾಟ
ನಿಮ್ಮ ಮಗುವನ್ನು ಮೊಣಕಾಲುಗಳ ಮೇಲೆ ಕುಳಿತುಕೊಳ್ಳಲು ತಿಳಿಸಿ. ಮೂಗಿನ ಮೂಲಕ ದೀರ್ಘವಾಗಿ ಉಸಿರಾಟವನ್ನು ತೆಗೆದುಕೊಳ್ಳಲಿ, ಇದು ಅವರ ಹೊಟ್ಟೆಯನ್ನು ತುಂಬಿಸಲಿ. ಈಗ ಮಗು ತಮ್ಮ ಹಣೆಯನ್ನು ನೆಲಕ್ಕೆ ಬಾಗಿಸಿ ಉಸಿರನ್ನು ಬಿಡಲಿ, ಬಿಡುವಾಗ ಜೇನುನೊಣದ ಸದ್ದಿನಂತೆ ಗುಂಯ್ ಎಂಬ ಸದ್ದನ್ನು ಮಾಡುತ್ತಾ, ಉಸಿರನ್ನು ಬಿಡಲಿ. ಜೇನು ನೊಣದ ಉಸಿರಾಟದ ರೀತಿಯ ಉಸಿರಾಟವು ನಿಮ್ಮ ಮಗುವಿನ ಬೆನ್ನು,ನರವ್ಯೆಹ ಮತ್ತು ಕುತ್ತಿಗೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ಉಸಿರಾಟದ ಪ್ರಕ್ರಿಯೆಗಳನ್ನು ನಿಮ್ಮ ಮಗುವಿಗೆ ಅಭ್ಯಾಸ ಮಾಡಿಸಿ, ಇದರಿಂದ ನಿಮ್ಮ ಮಗುವಿಗೆ ಅತಿ ಹೆಚ್ಚು ಪ್ರಯೋಜನಗಳು ಆಗುತ್ತವೆ.