ಬಲೂಚಿಸ್ತಾನ್ ಸ್ವಾತಂತ್ರ್ಯವನ್ನು ಬೆಂಬಲಿಸಲಾರೆ: ಅಮೆರಿಕ ಹೇಳಿಕೆ

ವಾಷಿಂಗ್ಟನ್, ಸೆಪ್ಟಂಬರ್ 13: ಪಾಕಿಸ್ತಾನದ ಐಕ್ಯ ಮತ್ತು ಸಮಗ್ರತೆಯನ್ನು ಗೌರವಿಸಲಾಗುವುದು. ಬಲೂಚಿಸ್ತಾನದ ಸ್ವಾತಂತ್ರ್ಯವಾದವನ್ನು ತಾನು ಬೆಂಬಲಿಸಲಾರೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ. ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಇಲಾಖೆ ವಕ್ತಾರ ಜಾನ್ ಕಿರ್ಬಿ ಬಲೂಚಿಸ್ತಾನ ಕುರಿತ ಅಮೆರಿಕದ ನಿಲುವನ್ನು ಸ್ಪಷ್ಟಪಡಿಸಿದ್ದು, ಅವರು ಬಲೂಚಿಸ್ತಾನದೊಳಗೆ ಮತ್ತುಹೊರಗೆ ಪಾಕ್ ಸೈನ್ಯ ನಡೆಸುತ್ತಿರುವ ಮಾನವಹಕ್ಕುಗಳ ಉಲ್ಲಂಘನೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆಂದು ವರದಿಯಾಗಿದೆ.
ಈಸಲದ ಭಾರತ ಸ್ವಾತಂತ್ರ್ಯದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರಮೋದಿ ಪಾಕ್ ಅಧೀನ ಕಾಶ್ಮೀರ, ಗಿಲ್‌ಜಿತ್, ಬಲೂಚಿಸ್ತಾನ್‌ಗಳಲ್ಲಿರುವ ಸ್ಥಿತಿಗತಿಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಇದನ್ನು ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟ ನಾಯಕರು ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದ್ದರು ಎಂದು ವರದಿ ತಿಳಿಸಿದೆ.
Next Story





