ಈ ಬಾರಿಯ ಹಜ್ ಯಾತ್ರಿಗಳ ಸಂಖ್ಯೆ 18 ಲಕ್ಷ

ಮಕ್ಕಾ, ಸೆ. 13: ಈ ವರ್ಷ ಒಟ್ಟು 18,62,909 ಮಂದಿ ಹಜ್ ಯಾತ್ರೆ ಕೈಗೊಂಡಿದ್ದಾರೆ ಹಾಗೂ ಅವರ ಪೈಕಿ 13,25,372 ಮಂದಿ ಸೌದಿ ಅರೇಬಿಯದ ಹೊರಗಿನಿಂದ ಬಂದವರು ಎಂದು ಸೌದಿ ಅರೇಬಿಯದ ಅಂಕಿಸಂಖ್ಯೆಗಳ ಪ್ರಾಧಿಕಾರ ತಿಳಿಸಿದೆ.
ಸೌದಿ ರಾಷ್ಟ್ರೀಯರೇತರ ಯಾತ್ರಿಗಳ ಸಂಖ್ಯೆ 16,92,417 ಆದರೆ, ಸೌದಿ ರಾಷ್ಟ್ರೀಯ ಯಾತ್ರಿಗಳ ಸಂಖ್ಯೆ 1,70,492 ಎಂದು ಪ್ರಾಧಿಕಾರ ಹೇಳಿದೆ.
ಈ ವರ್ಷದ ಪುರುಷ ಯಾತ್ರಿಗಳ ಸಂಖ್ಯೆ 10,82,228 ಆದರೆ, ಮಹಿಳಾ ಯಾತ್ರಿಗಳ ಸಂಖ್ಯೆ 7,80,681 ಎಂದು ಸೌದಿ ಪ್ರೆಸ್ ಏಜನ್ಸಿ ತಿಳಿಸಿದೆ.
Next Story





