ಪುತ್ತೂರು: ಲ್ಯಾಪ್‌ಟಾಪ್, ಮೊಬೈಲ್‌ಗಳನ್ನು ಕದ್ದ ಆರೋಪಿ ಸೆರೆ

ಪುತ್ತೂರು, ಸೆ.13: ಇಲ್ಲಿನ ಪುರುಷರಕಟ್ಟೆಯ ಮೊಬೈಲ್ ಅಂಗಡಿಯೊಂದಕ್ಕೆ ನುಗ್ಗಿ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳನ್ನು ಕದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
ವಿಟ್ಲ ಕೊಡುಂಗಾಯಿ ಸಮೀಪದ ನಿವಾಸಿ ಬಶೀರ್ ರಾದುಕಟ್ಟೆ ಬಂಧಿತ ಆರೋಪಿ. ಈ ಪ್ರಕರಣದಲ್ಲಿ ಬಶೀರ್‌ನ ಸಹೋದರ ಅಶ್ರಫ್ ಎಂಬಾತನನ್ನು ವಾರದ ಹಿಂದೆಯೇ ಬಂಧಿಸಲಾಗಿತ್ತು.
ಆಗಸ್ಟ್ 22ರಂದು ಪುರುಷರ ಕಟ್ಟೆಯಲ್ಲಿ ಅಬ್ದುಲ್ ಸಹಾನ್ ಎಂಬವರ ಅಂಗಡಿಯಿಂದ ಕಳವಾಗಿತ್ತು. ಅಂಗಡಿಯ ಮಾಡಿನ ಶೀಟ್ ಕೊರೆದು ಒಳಗೆ ಇಳಿದು, ಒಂದು ಲ್ಯಾಪ್‌ಟಾಪ್ ಮತ್ತು 3 ಮೊಬೈಲ್ ಫೋನ್‌ಗಳನ್ನು ಕಳವು ಮಾಡಲಾಗಿತ್ತು.
ಕದ್ದ ಮಾಲುಗಳನ್ನು ಮಾರಲು ಬಂದ ಸಂದರ್ಭ ಕಬಕದಲ್ಲಿ ಅಶ್ರಫ್‌ನನ್ನು ಬಂಧಿಸಲಾಗಿತ್ತು. ಇದೀಗ ಕಳವು ಕೃತ್ಯದ ಪ್ರಮುಖ ಆರೋಪಿ ಸೆರೆ ಸಿಕ್ಕಿದ್ದಾನೆ. ಬಶೀರ್ ಸೊತ್ತುಗಳನ್ನು ಕದ್ದು ತರುವುದು. ಅಶ್ರಫ್ ಅವುಗಳನ್ನು ಮಾರುವುದು ಇವರ ಕಸುಬಾಗಿತ್ತು.
Next Story





