ಕಾವೇರಿ ಹಿಂಸಾಚಾರ ದುಃಖ ಉಂಟುಮಾಡಿದೆ: ಮೋದಿ

ಹೊಸದಿಲ್ಲಿ, ಸೆ.13: ಕಾವೇರಿ ನೀರು ಹಂಚಿಕೆಯ ವಿಚಾರದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ದಂಗೆ ‘ದುಃಖದಾಯಕವಾಗಿದೆ’. ಕರ್ನಾಟಕ ಮತ್ತು ತಮಿಳುನಾಡು ಈ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ವಿರೋಧಿಸಿ ಸೋಮವಾರ ಬೆಂಗಳೂರಿನಲ್ಲಿ ಪ್ರತಿಭಟನಕಾರರು ಹಲವು ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸ್ ಗೋಲಿಬಾರಿಗೆ ಒಬ್ಬ ಬಲಿಯಾಗಿದ್ದಾನೆ.
ಕಾವೇರಿ ನೀರು ಹಂಚಿಕೆಯ ವಿವಾದದ ಫಲವಾಗಿ ಕರ್ನಾಟಕ ಹಾಗೂ ತಮಿಳುನಾಡುಗಳಲ್ಲಿ ಉದ್ಭವಿಸಿರುವ ಪರಿಸ್ಥಿತಿ ದುಃಖಕರವಾಗಿದೆ. ಈ ಸಮಸ್ಯೆಯನ್ನು ಕೇವಲ ಕಾನೂನು ಪರಿಧಿಯೊಳಗೆ ಬಗೆಹರಿಸಲು ಸಾಧ್ಯ. ಕಾನೂನು ಭಂಗವು ಅದಕ್ಕೆ ಸರಿಯಾದ ಪರ್ಯಾಯವಲ್ಲವೆಂದು ಮೋದಿ ಟ್ವೀಟಿಸಿದ್ದಾರೆ.
Next Story





