ಪಣಂಬೂರು ಬೀಚ್‌ನಲ್ಲಿ ವಿದ್ಯಾರ್ಥಿ ನೀರುಪಾಲು

ಮಂಗಳೂರು, ಸೆ.13: ಪಣಂಬೂರು ಬೀಚ್‌ಗೆ ಸ್ನಾನಕ್ಕೆಂದು ತೆರಳಿದ್ದ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಓರ್ವ ನೀರು ಪಾಲಾಗಿರುವ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.
ವಿದ್ಯಾರ್ಥಿಯನ್ನು ಕೊಡಗು ಜಿಲ್ಲೆ ಶನಿವಾರ ಸಂತೆ ನಿವಾಸಿ ಪ್ರಫುಲ್ (20) ಎಂದು ಗುರುತಿಸಲಾಗಿದೆ.
ಪ್ರಫುಲ್, ರತನ್ ಹಾಗೂ ಇತರ ನಾಲ್ವರು ಸ್ನೇಹಿತರು ಇಂದು ಪಂಣಂಬೂರು ಬೀಚಿಗೆ ಆಗಮಿಸಿದ್ದರು. ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ ಪ್ರಫುಲ್ ಈಜಲೆಂದು ಸಮುದ್ರ ಕಿನಾರೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಕೋಸ್ಟ್ ಗಾರ್ಡ್‌ನರು ಪ್ರಫುಲ್‌ನನ್ನು ಸಮುದ್ರಕ್ಕೆ ಧುಮುಕದಂತೆ ಎಚ್ಚರಿಕೆ ನೀಡಿದ್ದಾರೆನ್ನಲಾಗಿದೆ. ಆದರೂ ಪ್ರಫುಲ್ ಸಮುದ್ರಕ್ಕೆ ಇಳಿದ ಪರಿಣಾಮ ಅಲೆಗಳ ಸೆಳೆತಕ್ಕೆ ಒಳಗಾಗಿ ನೀರು ಪಾಲಾಗಿದ್ದಾರೆ.
ಈ ಬಗ್ಗೆ ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





