ಗಾಂಜಾ ಪತ್ತೆ: ಆರೋಪಿ ಸೆರೆ
ಮಂಗಳೂರು, ಸೆ.13: ಇಲ್ಲಿನ ಅತ್ತಾವರದಲ್ಲಿ ವ್ಯಕ್ತಿಯೋರ್ವರ ಬಳಿ 900 ಗ್ರಾಂ ಗಾಂಜಾ ಪತ್ತೆಯಾದ ಪ್ರಕರಣ ದಾಖಲಾಗಿದೆ. ಮಾರಾಟ ಮಾಡುವ ಉದ್ದೇಶದಿಂದ ಗಾಂಜಾವನ್ನು ತಂದಿದ್ದ ಎನ್ನಲಾಗಿದೆ. ಆರೋಪಿಯನ್ನು ಕೇರಳ ಮೂಲದ ಪತಿಯಂಕರ ನಿವಾಸಿ ರಂಜಿತ್ ಯಾನೆ ರತನ್ ಎಂದು ಗುರುತಿಸಲಾಗಿದೆ. ಈತನ ಬಳಿ ಸುಮಾರು 45,000 ರೂ.ಮೌಲ್ಯದ ಗಾಂಜಾ ಪತ್ತೆಯಾಗಿದೆ.ಅಬಕಾರಿ ಉಪನಿರೀಕ್ಷಕ ಕೆ. ಮೋಹನ್
ರಾವ್ ಮೊಕದ್ದಮೆ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





