ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ
ಉಡುಪಿ, ಸೆ.13: ಗೋವಾಕ್ಕೆ ಮೀನಿನ ಲಾರಿಯಲ್ಲಿ ಕೆಲಸಕ್ಕೆಂದು ಆ.31ರಂದು ಹೋದ ಮಲ್ಪೆ ಕ್ರಾಸ್‌ರೋಡ್ ಸಂತೆಕಟ್ಟೆಯ ನಿವಾಸಿ ಅಶೋಕ್(26) ಎಂಬ ಯುವಕ ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಮಲ್ಪೆಯಲ್ಲಿ ವಿಚಾರಿಸಿದಾಗ ಮೀನಿನ ಲಾರಿಯಲ್ಲಿ ಕೆಲಸಕ್ಕೂ ಹೋಗದೆ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ನಲ್ಲೂರು ಗ್ರಾಮದ ಕಲತ್ರಪಾದೆಯಲ್ಲಿರುವ ಆಶ್ರಯ್(14) ಎಂಬ ಬಾಲಕ ಸೋಮವಾರ ಬೆಳಗ್ಗೆ ಮನೆಯಲ್ಲಿ ತಾನು ಮನೆ ಬಿಟ್ಟು ಹೋಗುವುದಾಗಿ ಬರೆದಿಟ್ಟು ನಾಪತ್ತೆಯಾಗಿರುವುದಾಗಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





