ಲಾರಿ ಮಗುಚಿ ಬಿದ್ದು ಇಬ್ಬರಿಗೆ ಗಾಯ
ಉಪ್ಪಿನಂಗಡಿ, ಸೆ.13: ಇಲ್ಲಿನ ಮಠ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಮಗುಚಿ ಬಿದ್ದ ಘಟನೆ ಎಂಬಲ್ಲಿ ಸೋಮವಾರ ನಸುಕಿನ ಜಾವ ಸಂಭವಿಸಿದೆ. ಅಪಘಾತದಿಂದ ಲಾರಿ ಚಾಲಕ ಅರುಣ್(29) ಹಾಗೂ ಪ್ರೇಮ್(24)ಗಾಯಗೊಂಡಿದ್ದು, ಗಾಯಾಳುಗಳನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೋಳದ ಮೂಟೆಗಳನ್ನು ಹೇರಿಕೊಂಡು ಹಾಸನದಿಂದ ಮಂಗಳೂರಿಗೆ ಬರುತ್ತಿದ್ದ ಲಾರಿಯ ಹಿಂಭಾಗದ ಟಯರ್ ಮಠದ ಮಸೀದಿ ಬಳಿ ಸಿಡಿದಿದ್ದು, ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಗೆ ಉರುಳಿ ಬಿದ್ದಿದೆ. ಲಾರಿಯಲ್ಲಿದ್ದ ಜೋಳದ ಮೂಟೆಗಳೆಲ್ಲಾ ಕೆಳಗೆ ಬಿದ್ದಿವೆ.
Next Story





