ಇತರ ಧರ್ಮೀಯರ ಹಬ್ಬಗಳಲ್ಲಿ ಪಾಲ್ಗೊಳ್ಳಬೇಕು: ಪ್ರೊ. ಕೆ. ಆಲಿಕುಟ್ಟಿ ಮುಸ್ಲಿಯಾರ್

ಕೋಝಿಕ್ಕೋಡ್, ಸೆಪ್ಟಂಬರ್ 14: ಪರಸ್ಪರ ಪ್ರೀತಿ ಸೌಹಾರ್ದವನ್ನು ಹಂಚಿಕೊಳ್ಳುವುದು ಹಬ್ಬಗಳ ಉದ್ದೇಶವಾಗಿದೆ. ಓಣಂ-ವಿಷು ಮುಂತಾದ ಹಬ್ಬಗಳ ಸಂತೋಷಗಳಲ್ಲಿ ಪಾಲ್ಗೊಳ್ಳಬೇಕೆಂದು ಸಮಸ್ತ ಕೇರಳ ಜಮ್‌ಇಯ್ಯತುಲ್ ಉಲಮ ಪ್ರಧಾನ ಕಾರ್ಯದರ್ಶಿ ಫ್ರೋ. ಕೆ. ಆಲಿಕುಟ್ಟಿ ಮುಸ್ಲಿಯಾರ್ ಹೇಳಿದ್ದಾರೆಂದು ವರದಿಯೊಂದು ತಿಳಿಸಿದೆ.
ಇತರ ಧರ್ಮೀಯರ ಹಬ್ಬಗಳಲ್ಲಿ ಪಾಲ್ಗೊಳ್ಳಬಾರದೆಂದು ಹೇಳುವ ಧರ್ಮಉಪದೇಶಕರನ್ನು ನಿರುತ್ತೇಜಿಸಬೇಕು. ಸೌಹಾರ್ದ ಮುಂದುವರಿಯಲು ಉದ್ಭೋದೆ ನಡೆಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ದರ್ಶನ ಟಿವಿಗಾಗಿ ಮುಸ್ಲಿಮ್ ಯೂತ್ ಲೀಗ್ ಅಖಿಲಭಾರತ ಕನ್ವೀನರ್ ಪಿ.ಕೆ. ಫಿರೋಝ್ ರವರು ಆಲಿಕುಟ್ಟಿಮುಸ್ಲಿಯಾರ್‌ರ ಸಂದರ್ಶನ ನಡೆಸಿದ್ದಾರೆ. ಹಿಂದಿನ ಕಾಲದಿಂದಲೂ ಹಿಂದೂಗಳ ಕಾರ್ಯಸ್ಥರಾಗಿ ಮುಸ್ಲಿಂ ಇರುತ್ತಿದ್ದರು. ಮುಸ್ಲಿಮರ ಬಲಗೈ ಆಗಿ ಹಿಂದೂಗಳು ಧಾರಾಳವಾಗಿ ಕಾರ್ಯವೆಸಗಿದ್ದಾರೆ. ಇದರಲ್ಲಿ ಯಾವ ಸಮಸ್ಯೆಯೂ ಆಗಿಲ್ಲ.
ಮಲಪ್ಪುರಂ ಕಳಿಯಾಟ್ಟ ಮಹೋತ್ಸವಕ್ಕೆ ಮಂಬುರಂ ತಂಙಳ್ ತಾರೀಕು ನಿಗದಿಗೊಳಿಸಿಕೊಡುತ್ತಿದ್ದರು. ಆದರೆ ಈಗ ಮುಸ್ಲಿಮರು ಇತರ ಧರ್ಮೀಯರೊಂದಿಗೆ ಸೌಹಾರ್ದದಿಂದ ಮಾತಾಡಬಾರದು. ಅವರನ್ನು ಪ್ರೈವೇಟ್ ಸೆಕ್ರಟರಿ ಮಾಡಬಾರದು ಇತ್ಯಾದಿ ವಿಷಯಗಳು ಕೆಲವು ಕೇಂದ್ರಗಳಿಂದ ಹೊರಬರುತ್ತಿವೆ. ಇದನ್ನು ಅಂಗೀಕರಿಸಲು ಸಾಧ್ಯವಿಲ್ಲ. ಇದಕ್ಕೆ ಧರ್ಮದ ಬೆಂಬಲವಿಲ್ಲ. ಇಂತಹ ಪ್ರಚಾರಗಳನ್ನು ಸಮುದಾಯ ತಳ್ಳಿಹಾಕಬೇಕೆಂದು ಅವರು ವಿನಂತಿಸಿದ್ದಾರೆ. ಬಕ್ರೀದ್ ಬಲಿಪ್ರಾಣಿ ಮಾಂಸ ಪೋಲಾಗದಿರಲುಮತ್ತು ಅದನ್ನು ಹೆಚ್ಚು ಅರ್ಹರಿಗೆ ತಲುಪಿಸಲು ಯೋಜನೆ ರೂಪಿಸಬೇಕು.
ಮಹತ್ತಾದ ಒಂದು ಉದ್ದೇಶವನ್ನು ಬಲಿಕರ್ಮಗಳ ಮೂಲಕ ಇಸ್ಲಾಮ್ ಆದೇಶಿಸಿಸುತ್ತಿದೆ. ಭಿನ್ನ ಲಿಂಗಿಗಳ ವ್ಯಕ್ತಿತ್ವವನ್ನೂ ಇಸ್ಲಾಮ್ ಅಂಗೀಕರಿಸುತ್ತಿದೆ. ಅವರಿಗೆ ಇತರರಂತೆ ಆಸ್ತಿಹಕ್ಕು ಇದೆ. ಅವರನ್ನು ದೂರ ಇರಿಸುವ ನಿಲುವು ಇಸ್ಲಾಮಿನಲ್ಲಿಲ್ಲ. ಶತಮಾನಗಳ ಹಿಂದೆಯೇ ಈವಿಷಯದಲ್ಲಿ ಇಸ್ಲಾಮಿಕ್ ಕರ್ಮಶಾಸ್ತ್ರ ವಿದ್ವಾಂಸರು ಸ್ಪಷ್ಟಪಡಿಸಿದ್ದಾರೆಂದು ಅವರು ತಿಳಿಸಿದ್ದಾರೆಂದು ವರದಿಯಾಗಿದೆ.







