ಭೀಕರ ಬರಗಾಲ :ದ. ಆಫ್ರಿಕದ ಉದ್ಯಾನದಲ್ಲಿ 350 ಪ್ರಾಣಿಗಳ ವಧೆ

ಜೊಹಾನ್ಸ್‌ಬರ್ಗ್, ಸೆ. 14: ಭೀಕರ ಬರಗಾಲದ ಪರಿಣಾಮಗಳನ್ನು ಕಡಿಮೆ ಮಾಡುವ ಪ್ರಯತ್ನವಾಗಿ ದಕ್ಷಿಣ ಆಫ್ರಿಕದ ಅತ್ಯಂತ ದೊಡ್ಡ ವನ್ಯಜೀವಿ ಉದ್ಯಾನದ ಅಧಿಕಾರಿಗಳು ಸುಮಾರು 350 ನೀರು ಕುದುರೆಗಳು ಮತ್ತು ಕೋಣಗಳನ್ನು ವಧಿಸಲು ಮುಂದಾಗಿದ್ದಾರೆ.
ಕ್ರೂಗರ್ ರಾಷ್ಟ್ರೀಯ ಉದ್ಯಾನದಲ್ಲಿರುವ ನೀರು ಕುದುರೆಗಳು ಮತ್ತು ಕೋಣಗಳ ಸಂಖ್ಯೆ ಕ್ರಮವಾಗಿ 7,500 ಮತ್ತು 47,000. ಇದು ಈವರೆಗಿನ ಇತಿಹಾಸದಲ್ಲೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ.
ವಧಿಸಲಾದ ಪ್ರಾಣಿಗಳ ಮಾಂಸವನ್ನು ಉದ್ಯಾನದ ವ್ಯಾಪ್ತಿಯಲ್ಲಿ ಬರುವ ಬಡ ಸಮುದಾಯಗಳಿಗೆ ವಿತರಿಸಲು ನಿರ್ಧರಿಸಿದ್ದಾರೆ.
ಹಲವಾರು ದೇಶಗಳಲ್ಲಿ ತಲೆದೋರಿರುವ ಭೀಕರ ಬರಗಾಲದಿಂದಾಗಿ ಲಕ್ಷಾಂತರ ಜನರು ಆಹಾರಕ್ಕಾಗಿ ಹಾತೊರೆಯುತ್ತಿದ್ದಾರೆ.
ನೀರು ಕುದುರೆಗಳು ಮತ್ತು ಕೋಣಗಳು ಅಗಾಧ ಪ್ರಮಾಣದಲ್ಲಿ ಸಸ್ಯಗಳನ್ನು ತಿನ್ನುತ್ತವೆ ಹಾಗೂ ಹೆಚ್ಚಿನ ಪ್ರಾಣಿಗಳು ಬರಗಾಲದಿಂದಾಗಿ ಸಾಯುತ್ತವೆ ಎಂದು ಉದ್ಯಾನದ ವಕ್ತಾರರೊಬ್ಬರು ಹೇಳುತ್ತಾರೆ.
Next Story





