ಸುಪ್ರೀಂ ಬಜಾಜ್ ಶೋ ರೂಂ ಹಾಗೂ ಸೇವಾ ಕೇಂದ್ರ ಉದ್ಘಾಟನೆ

ಮಂಗಳೂರು, ಸೆ. 14: ತೊಕ್ಕೊಟ್ಟು ಸಮೀಪದ ಪಂಡಿತ್ ಹೌಸ್‌ನಲ್ಲಿ ದ್ವಿಚಕ್ರ ವಾಹನ ವಿತರಕ ಸಂಸ್ಥೆ ಸುಪ್ರೀಂ ಬಜಾಜ್ ಶೋ ರೂಂ ಹಾಗೂ ಸರ್ವಿಸ್ ಸೆಂಟರ್ ಇಂದು ಶುಭಾರಂಭಗೊಂಡಿತು.
ನೂತನ ಶೋಂ ರೂಂನ ಉದ್ಘಾಟಿಸಿ ಮಾತನಾಡಿದ ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಞಿ ಮೋನು, ನೂತನ ಶೋ ರೂಂಗೆ ಶುಭ ಹಾರೈಸಿದರು.
ಮಾಯಾದೀಪ ಗ್ರೂಪ್‌ನ ಪಾಲುದಾರ ಪಿ.ರಾಮಚಂದ್ರ ಕಾಮತ್ ಸರ್ವಿಸ್ ಸೆಂಟರ್‌ನ್ನು ಉದ್ಘಾಟಿಸಿದರು. ಉಳ್ಳಾಲ ನಗರಸಭಾ ಕೌನ್ಸಿಲರ್ ಭಾರತಿ ಎಂ. ಬಿಡಿಭಾಗ ಉಪಕರಣಗಳ ವಿಭಾಗವನ್ನು ಉದ್ಘಾಟಿಸಿದರು.
ಮಾಯಾದೀಪ ಗ್ರೂಪ್‌ನ ಪಾಲುದಾರ ಹರೀಶ್ ಕಾಮತ್, ಸುಪ್ರೀಂ ಬಜಾಜ್‌ನ ಜನರಲ್ ಮ್ಯಾನೇಜರ್ ಸುದರ್ಶನ್ ಭಟ್, ಮ್ಯಾನೇಜರ್ ಅಹ್ಮದ್ ಸಿದ್ದೀಕ್, ಸರ್ವಿಸ್ ವಿಭಾಗದ ಡಿಜಿಎಂ ಗುರುಪ್ರಸಾದ್ ಉಪಸ್ಥಿತರಿದ್ದರು.
ಸುಪ್ರೀಂ ಬಜಾಜ್‌ನ ನಿರ್ದೇಶಕ ಆರೂರು ಅರ್ಜುನ್ ರಾವ್ ಸ್ವಾಗತಿಸಿದರು. ಹರಿಶ್ಚಂದ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Next Story





