Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕೋರ್ಟ್ ತೀರ್ಪಿನ ಪೂರ್ವಾಪರ ಬಗ್ಗೆ ತಲೆ...

ಕೋರ್ಟ್ ತೀರ್ಪಿನ ಪೂರ್ವಾಪರ ಬಗ್ಗೆ ತಲೆ ಕೆಡಿಸಿಕೊಳ್ಳದ ಪೊಲೀಸರು

ಜಯಶ್ರೀ ಬಜೋರಿಯಾಜಯಶ್ರೀ ಬಜೋರಿಯಾ14 Sept 2016 11:02 PM IST
share
ಕೋರ್ಟ್ ತೀರ್ಪಿನ ಪೂರ್ವಾಪರ ಬಗ್ಗೆ ತಲೆ ಕೆಡಿಸಿಕೊಳ್ಳದ ಪೊಲೀಸರು

ಆರೆಸ್ಸೆಸ್ ಮುಖ್ಯಸ್ಥರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನಕರವಾಗಿ ಹೇಳಿಕೆ ನೀಡಿದ ಆರೋಪದಲ್ಲಿ ಕಳೆದ ನವೆಂಬರ್‌ನಲ್ಲಿ ಮಧ್ಯಪ್ರದೇಶದ ಶಿವಪುರದಲ್ಲಿ, 25 ವರ್ಷದ ಸತ್ತಾರ್ ಖಾನ್ ಎಂಬಾತನನ್ನು ಬಂಸಿದರು. ಉದ್ರಿಕ್ತ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಕ್ರಿಮಿನಲ್ ಪ್ರಕರಣ ದಾಖಲಿಸಿದರು. ಆದರೆ ಕೆಲ ತಿಂಗಳಲ್ಲಿ ಪೊಲೀಸರು ಪೇಚಿಗೆ ಸಿಲುಕಿದರು. ‘‘ಪ್ರಕರಣದಲ್ಲಿ ಹೇಗೆ ಮುಂದುವರಿಯಬೇಕು ಎಂದು ತಿಳಿಯುತ್ತಿಲ್ಲ. ಏಕೆಂದರೆ, ಭಾರ ತೀಯ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ ಎನ್ನುವುದು ಆ ಬಳಿಕ ನಮಗೆ ತಿಳಿಯಿತು’’ ಎಂದು ಪೊಲೀಸ್ ಅಕಾರಿಯೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಪೊಲೀಸ್ ಅಕಾರಿಯ ಈ ದ್ವಂದ್ವವು ನ್ಯಾಯಾಂಗದ ತೀರ್ಪುಗಳ ಬಗ್ಗೆ ಅದನ್ನು ಅನುಷ್ಠಾನಗೊಳಿಸುವ ಹೊಣೆ ಹೊತ್ತಿರುವ ಪೊಲೀಸ್ ಇಲಾಖೆ ಯಾವ ಪರಿಜ್ಞಾನವನ್ನೂ ಹೊಂದಿಲ್ಲ ಎನ್ನುವುದನ್ನು ತೋರಿಸುತ್ತದೆ. ಖಾನ್‌ನನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಎ ಅನ್ವಯ ಬಂಸುವ ಕೆಲ ತಿಂಗಳುಗಳ ಮುನ್ನ ಅಂದರೆ 2015ರ ಮಾರ್ಚ್‌ನಲ್ಲಿ, ಸುಪ್ರೀಂಕೋರ್ಟ್ ತೀರ್ಪು ನೀಡಿ, ಈ ಸೆಕ್ಷನ್ ಸಂವಿಧಾನಬಾಹಿರ ಎಂದು ಅದನ್ನು ತಳ್ಳಿಹಾಕಿತ್ತು.
ಸೆಕ್ಷನ್ 66ಎ ವಿಸ್ತೃತವಾಗಿ, ಕಂಪ್ಯೂಟರ್ ಅಥವಾ ಎಲೆಕ್ಟ್ರಾನಿಕ್ ಸಂವಹನ ಸಾಧನವನ್ನು ಬಳಸುವವರನ್ನು ನಿಯಂತ್ರಿಸುವ ಅಂಶವನ್ನು ಒಳಗೊಂಡಿದೆ. ಇದು ಅಪರಾಧಾತ್ಮಕ ಅಥವಾ ಚಾರಿತ್ರ್ಯ ಹನನ ಮಾಡುವಂಥ ಅಂಶಗಳನ್ನು ನಿಷೇಸುತ್ತದೆ. ಇದನ್ನು ಉಲ್ಲಂಸುವವರಿಗೆ ಮೂರು ವರ್ಷದ ಜೈಲು ಶಿಕ್ಷೆ ವಿಸಲು ಅವಕಾಶವಿದೆ.
ಈ ಕಾನೂನನ್ನು ಸುಪ್ರೀಂಕೋರ್ಟ್ ತಳ್ಳಿಹಾಕುವ ಮುನ್ನ ಸರಕಾರದ ನೀತಿಗಳನ್ನು ಹಾಗೂ ರಾಜಕಾರಣಿಗಳನ್ನು ಶಾಂತಿಯುತವಾಗಿ ಟೀಕಿಸುವವರನ್ನು ಬಂಸುವ ಅಸವಾಗಿ ಬಳಸಿಕೊಳ್ಳಲಾಗುತ್ತಿತ್ತು. ಉದಾಹರಣೆಗೆ ಸಾಮಾಜಿಕ ಜಾಲತಾಣಗಳ ಮೂಲಕ ರಾಜಕೀಯ ಮುಷ್ಕರಗಳ ಬಗ್ಗೆ ಟೀಕಿಸಿದ್ದ ಇಬ್ಬರು ವಿದ್ಯಾರ್ಥಿ ಗಳನ್ನು ಬಂಸಲಾಗಿತ್ತು.
ಸುಪ್ರೀಂಕೋರ್ಟ್‌ನ ಈ ಕ್ರಮಕ್ಕೆ ಭಾರತ ಹಾಗೂ ವಿಶ್ವಾದ್ಯಂತ ವ್ಯಾಪಕ ಸ್ವಾಗತ ವ್ಯಕ್ತವಾಗಿತ್ತು. ಇದು ಆನ್‌ಲೈನ್‌ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದೊರಕಿದ ಅಮೋಘ ಜಯ ಎಂದು ಬಣ್ಣಿಸಲಾಗಿತ್ತು.

ಸಂವಹನ ಕೊರತೆ
ಆದರೆ ಸರಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ವಾರ್ಷಿಕ ಅಪರಾಧದ ಅಂಕಿ ಅಂಶ ವರದಿಯನ್ನು ಪರಿಶೀಲಿಸಿದಾಗ, ಈ ಅಸಂವಿಧಾನಿಕ ಕಾನೂನು ಇನ್ನೂ ಬಳಕೆಯಲ್ಲಿದೆ ಎಂಬ ಬಗ್ಗೆ ತೀವ್ರ ಆತಂಕವನ್ನು ಹುಟ್ಟಿಸುತ್ತದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದ (ಎನ್‌ಸಿಆರ್‌ಬಿ) ಅಂಕಿ ಅಂಶಗಳ ಪ್ರಕಾರ, 2015ರಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ಅನ್ವಯ 4,154 ಪ್ರಕರಣಗಳು ದೇಶದಲ್ಲಿ ದಾಖಲಾಗಿದ್ದು, ಇದುವರೆಗೆ 3,137 ಮಂದಿಯನ್ನು ಬಂಸಲಾಗಿದೆ. ಇದು ಇಡೀ ವರ್ಷದ ಮಾಹಿತಿಯಾಗಿದ್ದು, ಇದರಲ್ಲಿ ತಿಂಗಳುವಾರು ಪ್ರತ್ಯೇಕ ಮಾಹಿತಿ ಲಭ್ಯವಿಲ್ಲ. ಆದರೆ ಈ ಕಾನೂನನ್ನು ಸುಪ್ರೀಂಕೋರ್ಟ್ ತಳ್ಳಿಹಾಕುವ ಮುನ್ನ ಅಂದರೆ 2015ರ ಮಾರ್ಚ್ ತಿಂಗಳಿಗಿಂತ ಮುನ್ನ ಇಷ್ಟೊಂದು ಪ್ರಕರಣಗಳು ದಾಖಲಾಗಿರುವ ಸಾಧ್ಯತೆ ವಿರಳ. ಏಕೆಂದರೆ 2014ರಲ್ಲಿ ಇಡೀ ವರ್ಷದಲ್ಲಿ 4,192 ಪ್ರಕರಣಗಳು ದಾಖಲಾಗಿದ್ದು, 2,423 ಮಂದಿಯನ್ನು ಬಂಸಲಾಗಿತ್ತು.
ಎನ್‌ಸಿಆರ್‌ಬಿ ಅಕಾರಿಯೊಬ್ಬರು ಹ್ಯೂಮನ್ ರೈಟ್ಸ್ ವಾಚ್‌ಗೆ ಹೇಳಿಕೆ ನೀಡಿ, ‘‘ಈ ಅಂಕಿ ಅಂಶಗಳು ಸೆಕ್ಷನ್ 66 ಹಾಗೂ 66ಎ ಯನ್ನು ಒಳಗೊಂಡಿದೆ. ಮುದ್ರಣ ದೋಷದಿಂದಾಗಿ ಈ ವರದಿಯಲ್ಲಿ 66 ಎ ಎಂದಷ್ಟೇ ನಮೂದಿಸಲಾಗಿದೆ. ಆದರೆ ಪೊಲೀಸರು ಇನ್ನು ಕೂಡಾ ಸೆಕ್ಷನ್ 66 ಎ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳುವ ಎಲ್ಲ ಸಾಧ್ಯತೆಗಳೂ ಇವೆ’’ ಎಂದು ಸ್ಪಷ್ಟಪಡಿಸುತ್ತಾರೆ. ‘‘ಎಲ್ಲ ನ್ಯಾಯಾಲಯ ತೀರ್ಪುಗಳು ಪೊಲೀಸ್ ಠಾಣೆಯ ಮಟ್ಟಕ್ಕೆ ತಲುಪುವುದೇ ಇಲ್ಲ’’ ಎಂದು ಅವರು ಹೇಳುತ್ತಾರೆ.
 ಸರಕಾರಿ ಅಂಕಿ ಅಂಶಗಳ ಪ್ರಕಾರ, 1,200 ಮಂದಿ 2015ರ ಅಂತ್ಯದ ವೇಳೆಗೆ ಕಸ್ಟಡಿಯಲ್ಲಿ ವಿಚಾರಣಾೀನ ಕೈದಿಗಳಾಗಿಯೇ ಉಳಿದಿದ್ದಾರೆ.

ಇವರ ವಿರುದ್ಧ ತನಿಖೆ ಹಾಗೂ ವಿಚಾರಣೆ ಇನ್ನೂ ನಡೆದಿಲ್ಲ. ಸುಪ್ರೀಂಕೋರ್ಟ್ ತೀರ್ಪು ಬಂದ ಎರಡು ವಾರಗಳ ಬಳಿಕ ಅಂದರೆ 2015ರ ಏಪ್ರಿಲ್‌ನಲ್ಲಿ ನರೇಂದ್ರ ಮೋದಿಯವರ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಟೀಕಿಸಿದ್ದಾರೆ ಎಂಬ ಕಾರಣಕ್ಕೆ ಮುಂಬೈ ಪೊಲೀಸರು ಸೆಕ್ಷನ್ 66ಎ ಅನ್ವಯ, ವ್ಯಕ್ತಿಯೊಬ್ಬರನ್ನು ಬಂಸಿದರು. 2016ರ ಮಾರ್ಚ್‌ನಲ್ಲಿ ಆರೆಸ್ಸೆಸ್ ಮುಖ್ಯಸ್ಥರ ವಿರುದ್ಧ ಅವಹೇಳನಕಾರಿ ಪೋಸ್ಟಿಂಗ್ ಮಾಡಿದ ಆರೋಪದಲ್ಲಿ ಮಧ್ಯಪ್ರದೇಶ ಪೊಲೀಸರು ಮುಹಮ್ಮದ್ ಡ್ಯಾನಿಷ್ ಎಂಬ ವ್ಯಕ್ತಿಯನ್ನು ಬಂಸಿದ್ದರು.
ಸುಪ್ರೀಂಕೋರ್ಟ್ ತೀರ್ಪಿನ ಬಳಿಕ, ಉತ್ತರ ಪ್ರದೇಶ, ಮುಂಬೈ, ಛತ್ತೀಸ್‌ಗಢ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಪೊಲೀಸರು 66ಎ ಪ್ರಕಾರ ಬಾಕಿ ಉಳಿದಿದ್ದ ಪ್ರಕರಣಗಳ ಪರಾಮರ್ಶೆಗೆ ಮುಂದಾಗಿ ದ್ದವು. ಇದಾಗಿ ಒಂದೂವರೆ ವರ್ಷಗಳ ಬಳಿಕ ಕೂಡಾ ಈ ಪರಾಮರ್ಶೆ ಬಗ್ಗೆ ಯಾವ ಮಾಹಿತಿಯೂ ಲಭ್ಯವಿಲ್ಲ ಹಾಗೂ ಇತರ ರಾಜ್ಯಗಳ ಬಾಕಿ ಪ್ರಕರಣಗಳ ಸ್ಥಿತಿಗತಿ ಬಗ್ಗೆಯೂ ಮಾಹಿತಿ ಇಲ್ಲ.

ಭಾರತದ ಪೊಲೀಸರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಸುವ ಕಾನೂನುಗಳನ್ನು ಬಳಸುವ ಬಗ್ಗೆ ತೀರಾ ಕಳಪೆ ಗುಣಮಟ್ಟದ ತರಬೇತಿ ನೀಡಲಾಗುತ್ತಿದೆ ಎನ್ನುವುದನ್ನು ತೋರಿಸುವ ಹಲವು ನಿದರ್ಶನಗಳು ಕಾಣಸಿಗುತ್ತವೆ. ಉದಾಹರಣೆಗೆ ದೇಶದ್ರೋಹದ ಕಾನೂನಿನಡಿ ಪ್ರಕರಣಗಳನ್ನು ದಾಖಲಿಸುವ ವೇಳೆ ಪೊಲೀಸರು ಸಾಮಾನ್ಯವಾಗಿ ಸುಪ್ರೀಂಕೋರ್ಟ್ ಮಾರ್ಗಸೂಚಿಯನ್ನು ಗಾಳಿಗೆ ತೂರುತ್ತವೆ. ವಾಸ್ತವವಾಗಿ ಇಂಥ ಪ್ರಕರಣಗಳನ್ನು ವ್ಯಕ್ತಿಯೊಬ್ಬನ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಬೇಕಿದ್ದರೆ, ಆತ ಜನತೆಯನ್ನು ಹಿಂಸೆಗೆ ಪ್ರಚೋದಿಸುವಂಥ ಕೃತ್ಯ ಎಸಗಿರುವುದಕ್ಕೆ ಪುರಾವೆ ಹೊಂದಿರಬೇಕು ಎಂದು ಸುಪ್ರೀಂಕೋರ್ಟ್ ಮಾರ್ಗಸೂಚಿ ಹೇಳುತ್ತದೆ. ಇತ್ತೀಚೆಗೆ ಸುಪ್ರೀಂಕೋರ್ಟ್ ಒಂದು ಮಹತ್ವದ ತೀರ್ಪಿನಲ್ಲಿ, ‘‘ಸರಕಾರಗಳು ದೇಶದ್ರೋಹ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಜನರಲ್ಲಿ ಭೀತಿ ಹುಟ್ಟಿಸಲು ಮತ್ತು ಭಿನ್ನ ಅಭಿಪ್ರಾಯಗಳನ್ನು ಹತ್ತಿಕ್ಕಲು ಅಸವಾಗಿ ಬಳಸಿಕೊಳ್ಳುತ್ತವೆ’’ ಎಂದು ಹೇಳಿದೆ. ಉದಾಹರಣೆಗೆ ‘‘ಒಬ್ಬ ವ್ಯಕ್ತಿ ಸರಕಾರವನ್ನು ಟೀಕಿಸಿದ ಎಂಬ ಮಾತ್ರಕ್ಕೆ ಅದು ದೇಶದ್ರೋಹ ಅಥವಾ ಮಾನಹಾನಿ ಆಗುವುದಿಲ್ಲ’’ ಎಂದು ಸರಕಾರಕ್ಕೆ ಚುರುಕು ಮುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು, ವಕೀಲರು ಹಾಗೂ ನ್ಯಾಯಾಂಗ ವ್ಯವಸ್ಥೆಗೆ ಸೂಕ್ತವಾದ ತರಬೇತಿ, ಶಾಂತಿಯುತ ಹಾಗೂ ಹಿಂಸಾತ್ಮಕ ಮಾರ್ಗದ ಮೂಲಕ ಭಿನ್ನಮತವನ್ನು ಅಭಿವ್ಯಕ್ತಪಡಿಸುವ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡುವ ಅಗತ್ಯವಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಸ್ವತಂತ್ರ ಪರಾಮರ್ಶೆ ಸಮಿತಿ ಗಳನ್ನು ರಚಿಸಿ, ಸೆಕ್ಷನ್ 66 ಎ ಅಡಿಯಲ್ಲಿ ದಾಖಲಾಗಿ ಬಾಕಿ ಇರುವ ಎಲ್ಲ ಪ್ರಕರಣಗಳನ್ನೂ ಪರಿಶೀಲಿಸಿ, ಪಾರದರ್ಶಕವಾಗಿ ಸಾರ್ವಜನಿಕರಿಗೆ ವರದಿ ನೀಡುವುದು ಅಗತ್ಯ.
ಕಳೆದ ವರ್ಷ ಸುಪ್ರೀಂಕೋರ್ಟ್, ಭಾರತದ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪ್ರಮುಖ ಮಾನದಂಡವನ್ನು ನಿಗದಿಪಡಿಸಿದೆ. ಆದರೆ ಅಕಾರಿಗಳು ಇಂಥ ಕೆಟ್ಟ ಕಾನೂನನ್ನು ಇನ್ನು ಮುಂದೆ ಬಳಸುವುದಿಲ್ಲ ಎಂದು ಪ್ರಾಮಾಣಿಕವಾಗಿ ನಿರ್ಧಾರಕ್ಕೆ ಬಾರದಿದ್ದರೆ, ಇದಕ್ಕೆ ಯಾವ ಅರ್ಥವೂ ಇರುವುದಿಲ್ಲ.
 

share
ಜಯಶ್ರೀ ಬಜೋರಿಯಾ
ಜಯಶ್ರೀ ಬಜೋರಿಯಾ
Next Story
X