ತ್ಯಾಜ್ಯ ವಿಲೇವಾರಿಗಾಗಿ ಅ.2ರಂದು ಉಪವಾಸ ಸತ್ಯಾಗ್ರಹ
ಮಂಗಳೂರು, ಸೆ.14: ಸೋಮೇಶ್ವರ, ತಲಪಾಡಿ ಹಾಗೂ ಕೋಟೆಕಾರು ಈ ಮೂರು ಗ್ರಾಪಂಗಳಲ್ಲಿ ಪ್ರತಿದಿನವೂ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಬೇಕು ಎಂದು ಆಗ್ರಹಿಸಿ ಕೊಂಡಾಣದಲ್ಲಿ ಅ.2ರಂದು 24 ಗಂಟೆಗಳ ಉಪವಾಸ ಧರಣಿ ಮಾಡಲಾಗುವುದು ಎಂದು ನಾಗರಿಕ ಸಮಿತಿ ಯುವ ವೇದಿಕೆಯ ಅಧ್ಯಕ್ಷ ಪ್ರಮೋದ್ ಉಚ್ಚಿಲ್ ಹೇಳಿದರು.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಈ ಮೂರು ಗ್ರಾಪಂಗಳಿಗೆ ತ್ಯಾಜ್ಯ ವಿಲೇವಾರಿ ಮಾಡುವ ಕುರಿತು ಮನವಿ ನೀಡಲಾಗಿದೆ. ಇದರ ಜತೆಯಲ್ಲಿ ಸಂಬಂಧಪಟ್ಟವರಿಗೆ ಸಾಕಷ್ಟು ಬಾರಿ ಮನವಿ ನೀಡಲಾಗಿದೆ. ಆದರೆ ಯಾರೂ ಕೂಡ ಈ ಸಮಸ್ಯೆಗೆ ಪರಿಹಾರ ನೀಡಲು ಮುಂದೆ ಬರುತ್ತಿಲ್ಲ. ಆದುದರಿಂದ ಹಲವು ಸಂಘಸಂಸ್ಥೆಗಳು ಸೇರಿಕೊಂಡು 24 ಗಂಟೆಗಳ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭ ಶಂಸುದ್ದೀನ್ ಉಚ್ಚಿಲ್, ಬಶೀರ್ ಸಂಕೊಳಿಗೆ, ನಝೀರ್ ಉಚ್ಚಿಲ್, ರಝಾಕ್ ಮತ್ತಿತರರು ಉಪಸ್ಥಿತರಿದ್ದರು.
Next Story





