ಸಚಿವ ಯು.ಟಿ. ಖಾದರ್ ಪ್ರವಾಸ
ಮಂಗಳೂರು, ಸೆ.14: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಯು.ಟಿ.ಖಾದರ್ ಸೆ.15 ಮತ್ತು 16ರಂದು ಮಂಗಳೂರಿನಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಸೆ.15ರಂದು ಬೆಳಗ್ಗೆ 8.30ಕ್ಕೆ ಗೃಹಕಚೇರಿ ಬೆಂದೂರ್‌ವೆಲ್‌ನಲ್ಲಿ ಸಾರ್ವಜನಿಕ ಭೇಟಿ ಹಾಗೂ ಅಹವಾಲು ಸ್ವೀಕಾರ. ಬೆಳಗ್ಗೆ 9ಕ್ಕೆ ಇಂಡಿಯಾನ ಆಸ್ಪತ್ರೆ ಪಂಪ್‌ವೆಲ್‌ನಲ್ಲಿ ಕಾರ್ಯಕ್ರಮ. 11 ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಸಚಿವರ ಪ್ರಗತಿ ಪರಿಶೀಲನಾ ಸಭೆ, ಸಂಜೆ 4ಕ್ಕೆ ಪುರಭವನದಲ್ಲಿ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಮಾಜಿ ಸಚಿವ ಬಿ.ಎ.ಮೊದಿನ್ ಅವರ ಅಭಿನಂದನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸೆ.16ರಂದು ಬೆಳಗ್ಗೆ 9.30ಕ್ಕೆ ಸೈಂಟ್ ಆಗ್ನೆಸ್ ಕಾಲೇಜ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 10:30ಕ್ಕೆ ಕುದ್ರೋಳಿಯಲ್ಲಿ ನಾರಾಯಣ ಗುರು ಜಯಂತಿ ಕಾರ್ಯಕ್ರಮ, ಪೂರ್ವಾಹ್ನ 11ಕ್ಕೆ ಕೊಲ್ಯದಲ್ಲಿ ನಾರಾಯಣ ಗುರು ಜಯಂತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.
Next Story





