ಗುಲ್ವಾಡಿ: ಕೃಷಿ ಕೂಲಿಕಾರರ ಸಂಘಕ್ಕೆ ಆಯ್ಕೆ
ಕುಂದಾಪುರ, ಸೆ.14: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಗುಲ್ವಾಡಿ ಗ್ರಾಮ ಸಮಿತಿಯ ವಿಸ್ತೃತ ಸಭೆಯು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಜರಗಿತು. ಸಭೆಯಲ್ಲಿ ಕೃಷಿಕೂಲಿಕಾರರ ಸಂಘದ ಗುಲ್ವಾಡಿ ಗ್ರಾಮ ಸಮಿತಿಗೆ ಅಧ್ಯಕ್ಷರಾಗಿ ಎ.ಐ.ಉಸ್ಮಾನ್ ಸಾಹೇಬ್, ಕಾರ್ಯದರ್ಶಿಯಾಗಿ ರಮೇಶ ಪೂಜಾರಿ ಗುಲ್ವಾಡಿ, ಉಪಾಧ್ಯಕ್ಷರಾಗಿ ಜಿ.ಡಿ. ಪಂಜು, ಪಂಜು ಪೂಜಾರಿ, ಯಶೋಧಾ, ರುಕ್ಕು, ಜತೆ ಕಾರ್ಯದರ್ಶಿಗಳಾಗಿ ಶೋಭಾ ಗುಲ್ವಾಡಿ, ಬೇಬಿ ಗುಲ್ವಾಡಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ರವಿಕಲಾ ಗುಲ್ವಾಡಿ, ಸುಶೀಲಾ ಕರ್ಕಿ, ಚೆಂದು, ರತ್ನಾ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
Next Story





