‘ಮಾನವೀಯ ವೌಲ್ಯಗಳ ಬಗ್ಗೆ ಮಂಥನ ನಡೆಸಿ’
ಉಡುಪಿ, ಸೆ.14: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಾನವಿಕ ಮೌಲ್ಯಕುಸಿಯುತ್ತಿದ್ದು, ಮನುಷ್ಯ ಸ್ವಾರ್ಥ ಬದುಕನ್ನುನಡೆಸುತ್ತಿದ್ದಾನೆ. ಆದುದ ರಿಂದ ವಿದ್ಯಾರ್ಥಿ ಜೀವನದಲ್ಲಿ ಮಾನವೀಯಮೌಲ್ಯಗಳ ಕುರಿತು ಚಿಂತನೆ ನಡೆಸ
ೇಕಾಗಿದೆ ಎಂದು ತೆಂಕನಿಡಿಯೂರುಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಮಹೇಶ್ ಕುಮಾರ್ ಹೇಳಿದ್ದಾರೆ.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಮಾನವಿಕ ಸಂಘದ ಚಟುವಟಿಕೆಗಳನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಮಾನವಿಕ ವಿಭಾಗದ ಡೀನ್ ಪ್ರೊ.ಮೆಲ್ವಿನ್ ಸಿ.ರೇಗೊ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕಿ ರೇಶ್ಮಾ, ವಿದ್ಯಾರ್ಥಿ ಮುಖಂಡರಾದ ರಿಕ್ಸನ್, ಕೃತಿಕಾ ಉಪಸ್ಥಿತರಿದ್ದರು. ಶಾಂತಿ ಸ್ವಾಗತಿಸಿ, ಸರಿತಾ ವಂದಿಸಿದರು. ಪೂಜಾ ಕಾರ್ಯಕ್ರಮ ನಿರೂಪಿಸಿದರು.
Next Story





