ಬಂಟಕಲ್: ಇಂಜಿನಿಯರ್ಸ್-ಶಿಕ್ಷಕರ ದಿನಾಚರಣೆ
ಶಿರ್ವ, ಸೆ.14: ಬಂಟಕಲ್ಲಿನ ಶ್ರೀಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲ ಯದಲ್ಲಿ ಶಿಕ್ಷಕರ ಮತ್ತು ಇಂಜಿನಿಯರ್ಸ್ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಮುಂಬೈ ಮೆರಿಟೈಮ್ ಸಂಸ್ಥೆಯ ನಿಕಟಪೂರ್ವ ಪ್ರಾಂಶುಪಾಲ ತೆಕ್ಕೆಕೆರೆ ನಾರಾಯಣ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ವಹಿಸಿದ್ದರು. ಪ್ರಾಂಶುಪಾಲ ಪ್ರೊ.ತಿರು ಮಲೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ರಸಾಯನಶಾಸ್ತ್ರ ವಿಭಾಗದ ಸುಬ್ಬಲಕ್ಷ್ಮೀ ಕಾರಂತ್, ಮೆಕ್ಯಾನಿಕಲ್ ಇಂಜಿಯರಿಂಗ್ ವಿಭಾಗದಆದಿತ್ಯ ಕುಡ್ವ, ಸಿವಿಲ್ ಇಂಜಿನಿಯ ರಿಂಗ್ ವಿಭಾಗದ ದೀಪಿಕಾ ಬಿ.ವಿ. ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಗಣಕಯಂತ್ರ ವಿಭಾಗದ ರಮ್ಯಾ ಶೆಟ್ಟಿ ಮತ್ತು ಮನೋಜ್‌ರನ್ನು ವಿದ್ಯಾರ್ಥಿಗಳ ಉತ್ತಮ ಮಾರ್ಗದರ್ಶಿ ಶಿಕ್ಷಕರಾಗಿ ಗೌರವಿಸಲಾಯಿತು. ಗಣಕ ಯಂತ್ರ ವಿಭಾಗದ ಮುಖ್ಯಸ್ಥ ಪ್ರೊ.ಡಾ.ವಾಸುದೇವ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಅಖಿಲಾ ರಾವ್ ವಂದಿಸಿದರು. ವಿಕಾಸ್ ಉಡುಪ ಕಾರ್ಯಕ್ರಮ ನಿರೂಪಿಸಿದರು.





