Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮಹಾಬಲಿಯನ್ನು ಮತ್ತೆ ಬಲಿಕೊಡುವ ಸಂಚು

ಮಹಾಬಲಿಯನ್ನು ಮತ್ತೆ ಬಲಿಕೊಡುವ ಸಂಚು

ವಾರ್ತಾಭಾರತಿವಾರ್ತಾಭಾರತಿ14 Sept 2016 11:54 PM IST
share
ಮಹಾಬಲಿಯನ್ನು ಮತ್ತೆ  ಬಲಿಕೊಡುವ ಸಂಚು

ಓಣಂ ಹಬ್ಬ ಕೇರಳೀಯರ ಪಾಲಿಗೆ ರಾಷ್ಟ್ರೀಯ ಹಬ್ಬವಿದ್ದ ಹಾಗೆ. ಪುರಾಣ ಮತ್ತು ಇತಿಹಾಸಗಳೆರಡನ್ನೂ ಬೆಸೆದುಕೊಂಡಿರುವ ಈ ಹಬ್ಬ ಕೇರಳ ಮಾತ್ರವಲ್ಲ, ಇಡೀ ದಕ್ಷಿಣ ಭಾರತದ ದ್ರಾವಿಡ ಸಂಸ್ಕೃತಿಯ ಜೊತೆಗೆ ಅವಿನಾಭಾವವಾಗಿ ಬೆರೆತುಕೊಂಡಿದೆ. ಈ ನೆಲದ ಜನರ ಜೊತೆಗೆ ನಡೆದ ವಂಚನೆ, ದ್ರೋಹದ ಕತೆಯನ್ನೂ ಸಾರುತ್ತದೆ. ಜೊತೆ ಜೊತೆಗೇ ಸಾಂಸ್ಕೃತಿಕ ಸೌಹಾರ್ದವೂ ಈ ಹಬ್ಬದೊಳಗೆ ಬೆಸೆದುಕೊಂಡಿದೆ. ಕೇರಳೀಯರಂತೂ ಜಾತಿ, ಧರ್ಮಗಳನ್ನು ಮರೆತು ಈ ಹಬ್ಬದ ಸಂಭ್ರಮಗಳನ್ನು ಹಂಚಿಕೊಳ್ಳುತ್ತಾರೆ. ಈ ಹಬ್ಬದ ಹಿನ್ನೆಲೆ ಅತ್ಯಂತ ವಿಶಿಷ್ಟವಾದುದು. ಮಹಾಬಲಿಯ ಸ್ಮರಣೆಯೇ ಈ ಹಬ್ಬದ ಉದ್ದೇಶ. ಬಲಿ ಚಕ್ರವರ್ತಿ ಅತ್ಯಂತ ಶ್ರೇಷ್ಠ ಆಡಳಿತವನ್ನು ನೀಡಿದ ರಾಕ್ಷಸ ಸಮುದಾಯದ ರಾಜನಾಗಿದ್ದ. ಇವನ ಆಡಳಿತದಲ್ಲಿ ನಾಡಿನಲ್ಲಿ ಸಮೃದ್ಧಿ ನೆಲೆಸಿತ್ತು. ಆದರೆ ವೈದಿಕ ಜನರು ಇವನ ರಾಜ್ಯವನ್ನು ಕುಟಿಲತನದಿಂದ ತಮ್ಮದಾಗಿಸಿಕೊಂಡರು. ವಾಮನ ಎನ್ನುವ ಬ್ರಾಹ್ಮಣ ವಟುವಿನ ನೇತೃತ್ವದಲ್ಲಿ ಬಲಿಯ ರಾಜ್ಯವನ್ನು ತಮ್ಮದಾಗಿಸಿ ಆತನನ್ನು ಪಾತಾಳಕ್ಕೆ ತಳ್ಳಿದರು. ಅರ್ಥಾತ್ ಅವನ ರಾಜ್ಯದಿಂದಲೇ ಗಡಿಪಾರು ಮಾಡಿದರು.

ಆದರೆ ಜನ ಸಾಮಾನ್ಯರಿಗೆ ಈತ ಶ್ರೇಷ್ಠ ರಾಜನಾಗಿದ್ದ. ಜನರ ಆಕ್ರೋಶಕ್ಕೆ ಮಣಿದ ವೈದಿಕರು, ಬಲಿಚಕ್ರವರ್ತಿಗೆ ವರ್ಷಕ್ಕೊಮ್ಮೆ ಅವನ ರಾಜ್ಯವನ್ನು ಭೇಟಿ ಮಾಡುವ ಅವಕಾಶವನ್ನು ನೀಡಿದರು. ಈ ಬಲಿಚಕ್ರವರ್ತಿ ವರ್ಷಕ್ಕೊಮ್ಮೆ ತನ್ನ ಜನರನ್ನು ಭೇಟಿ ಮಾಡಲು ಬರುವ ದಿನವೇ ಓಣಂ ಸಂಭ್ರಮವಾಗಿ ಪರಿವರ್ತನೆಗೊಂಡಿತು. ಜನರು ಆ ದಿನ, ಬಲಿಚಕ್ರವರ್ತಿಯನ್ನು ಸ್ವಾಗತಿಸಲು ನಡೆಸುವ ಸಿದ್ಧತೆಯಾಗಿದೆ ಓಣಂ ಹಬ್ಬ. ವಿಪರ್ಯಾಸವೆಂದರೆ, ಈ ಹಬ್ಬದ ಉದ್ದೇಶವನ್ನೇ ತಿರುಚುವ ಯತ್ನವನ್ನು ಮಾಡಿ, ಬಿಜೆಪಿಯ ನಾಯಕ ಅಮಿತ್ ಶಾ ತೀವ್ರ ಮುಖಭಂಗಕ್ಕೊಳಗಾಗಿದ್ದಾರೆ. ಮಹಾಬಲಿಯ ನೆನಪಿಗಾಗಿ ಆಚರಿಸುವ ಓಣಂನ್ನು ‘ವಾಮನ ಜಯಂತಿ’ ಎಂದು ಆಚರಿಸಲು ಯತ್ನಿಸಿ, ಅಮಿತ್ ಶಾ ಜನರಿಂದ ತೀವ್ರ ಟೀಕೆ ಹಾಗೂ ವ್ಯಂಗ್ಯಕ್ಕೊಳಗಾದರು. ಮಹಾಬಲಿಯನ್ನು ವಂಚಿಸಿ, ಆತನ ರಾಜ್ಯವನ್ನು ಕಿತ್ತುಕೊಂಡವನೇ ವಾಮನ. ಈತ ವೈದಿಕ ವೌಲ್ಯಗಳ ಸಂಕೇತವಾಗಿದ್ದಾನೆ. ಇದೀಗ ಅಮಿತ್ ಶಾ, ಓಣಂ ದಿವಸ ಬಲಿಯನ್ನು ತಿರಸ್ಕರಿಸಿ, ಎಲ್ಲರಿಗೂ ‘ವಾಮನ ಜಯಂತಿ’ಯ ಶುಭಾಶಯಗಳನ್ನು ತಿಳಿಸಿದರು. ಅಷ್ಟೇ ಅಲ್ಲ, ಇತ್ತೀಚಿನ ಆರೆಸ್ಸೆಸ್ ಮುಖವಾಣಿ ಪತ್ರಿಕೆಯಲ್ಲೂ ಇದನ್ನೇ ಪ್ರತಿಪಾದಿಸಲಾಯಿತು.

‘‘ಓಣಂ ಆಚರಣೆಯಲ್ಲಿ ನಾವು ಸ್ಮರಿಸಬೇಕಾಗಿರುವುದು ವಾಮನನನ್ನೇ ಹೊರತು, ಮಹಾಬಲಿಯನ್ನಲ್ಲ’’ ಎಂಬ ಲೇಖನವೂ ಕೇರಳಾದ್ಯಂತ ತೀವ್ರ ಟೀಕೆಗೆ ಗುರಿಯಾಯಿತು. ಈ ಮೂಲಕ, ಆರೆಸ್ಸೆಸ್ ಮತ್ತು ಬಿಜೆಪಿ ಪ್ರತಿಪಾದಿಸುತ್ತಿರುವ ವೌಲ್ಯಗಳು ಯಾವುವು ಎನ್ನುವುದು ಬಯಲಾಗಿದೆ. ಕೇರಳದಲ್ಲಿ ವೈದಿಕ ಶಕ್ತಿಗಳು ಇತ್ತೀಚೆಗೆ ಬೇರೆ ಬೇರೆ ರೂಪದಲ್ಲಿ ಬಲಾಢ್ಯವಾಗುತ್ತಿದೆಯಾದರೂ, ವಿಧಾನಸಭೆಯಲ್ಲಿ ಒಂದೇ ಒಂದು ಸ್ಥಾನವನ್ನು ತನ್ನದಾಗಿಸಲು ಅಸಾಧ್ಯವಾಗಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಕೇರಳದಲ್ಲಿ ವಾಮನನಂತೆ ತನ್ನ ಒಂದು ಹೆಜ್ಜೆಯನ್ನು ಊರಿದೆ. ಬಲಿ ಚಕ್ರವರ್ತಿಯ ಬಳಿ ವಾಮನನ ನೇತೃತ್ವದಲ್ಲಿ ಆಶ್ರಯಕ್ಕೆ ಬಂದ ವೈದಿಕರು ಮೊದಲು ಕೇಳಿದ್ದು ಮೂರು ಹೆಜ್ಜೆಯಷ್ಟು ಭೂಮಿ. ಬಳಿಕ ಇಡೀ ಬಲಿ ಚಕ್ರವರ್ತಿಯ ರಾಜ್ಯವನ್ನೇ ಮೋಸದಿಂದ ಕಬಳಿಸಿ, ಆತನನ್ನು ರಾಜ್ಯದಿಂದ ಹೊರ ಹಾಕುತ್ತಾರೆ. ಹಾಗೆಯೇ ಕೇರಳವನ್ನೂ ಸಂಪೂರ್ಣ ಬಲಿ ಹಾಕುವುದರ ಭಾಗವಾಗಿ, ಓಣಂ ಹಬ್ಬವನ್ನು ಆರೆಸ್ಸೆಸ್ ತಿರುಚಲು ಮುಂದಾಗಿದೆ. ಆ ಸಂಚಿನ ಭಾಗವಾಗಿಯೇ ಅಮಿತ್ ಶಾ ಅವರು, ಮಹಾಬಲಿಗೆ ಶುಭಾಶಯಗಳನ್ನು ಕೋರದೆ, ವಾಮನನ ಜಯಂತಿಯಾಗಿ ಆಚರಿಸಲು ಓಣಂನ್ನು ಬಳಸಿಕೊಂಡರು. ಜನರು ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ ಬೆನ್ನಿಗೇ ತನ್ನ ಹೇಳಿಕೆಯನ್ನು ಅಮಿತ್ ಶಾ ಹಿಂದೆಗೆದುಕೊಂಡಿದ್ದಾರೆ.

ಕೇರಳದಲ್ಲಿ ಇಂದು ಆರೆಸ್ಸೆಸ್‌ನ ಜನರು ಯಾವ ಪ್ರಯತ್ನಕ್ಕೆ ಇಳಿದಿದ್ದಾರೆಯೋ ಆ ಪ್ರಯತ್ನ ದೇಶಾದ್ಯಂತ ನಡೆದಿದೆ. ಕರ್ನಾಟಕದಲ್ಲಿ ವೈದಿಕ ಶಕ್ತಿಗಳು ಭಾಗಶಃ ಇದರಲ್ಲಿ ಯಶಸ್ವಿಯಾಗಿವೆ. ಮೈಸೂರಿನ ಅರಸನಾದ ಮಹಿಷಾಸುರನ ದುರಂತವೇ ಇದಕ್ಕೆ ಅತ್ಯುತ್ತಮ ಉದಾಹರಣೆ. ಕೇರಳದಲ್ಲಿ ವಾಮನನನ್ನು ಬಳಸಿಕೊಂಡು ಬಲಿ ಚಕ್ರವರ್ತಿಯನ್ನು ಬಲಿ ಹಾಕಿದಂತೆಯೇ, ಮೈಸೂರಿನಲ್ಲಿ ಮಹಿಷಾಸುರನನ್ನು ಬಲಿ ಹಾಕಲಾಯಿತು. ಇಂದಿಗೂ ಅಲ್ಲಿನ ಬುಡಕಟ್ಟು ಜನರು ಮಹಿಷಾಸುರನನ್ನು ಆರಾಧಿಸುತ್ತಾರೆ. ಇಡೀ ಮೈಸೂರಿಗೆ ಆತನ ಹೆಸರೇ ಬಳಕೆಯಲ್ಲಿದೆ ಎನ್ನುವುದೇ ಆತನ ಶ್ರೇಷ್ಠತೆಗೆ ಉದಾಹರಣೆಯಾಗಿದೆ. ಆದರೆ ದುರಂತವೆಂದರೆ, ವೈದಿಕ ಶಕ್ತಿಗಳು ಮಹಿಷಾಸುರನನ್ನು ಖಳನಾಗಿ ಬಿಂಬಿಸುವಲ್ಲಿ ಈಗಾಗಲೇ ಯಶಸ್ವಿಯಾಗಿವೆ. ಆತನನ್ನು ಕೊಂದು ಹಾಕಿದ ಶಕ್ತಿಗಳ ಆರಾಧನೆ ಮೈಸೂರಿನಲ್ಲಿ ನಡೆಯುತ್ತಿದೆ. ಬುಡಕಟ್ಟು ಸಂಸ್ಕೃತಿಯ ಪ್ರತಿನಿಧಿಯಾಗಿರುವ, ನಮ್ಮ ನೆಲದ ಮಹಿಷಾಸುರನನ್ನು ನಾವೇ ದ್ವೇಷಿಸುವಂತಹ ವಾತಾವರಣವನ್ನು ಸೃಷ್ಟಿ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಇದೇ ರೀತಿಯಲ್ಲಿ ತುಳುನಾಡಿನಲ್ಲೂ ವೈದಿಕ ಶಕ್ತಿಗಳು ಇತಿಹಾಸವನ್ನು ತನಗೆ ಪೂರಕವಾಗಿ ತಿರುಚುತ್ತಿದೆ. ಅದಕ್ಕೆ ಅತ್ಯುತ್ತಮ ಉದಾಹರಣೆಯೇ ಕೊರಗಜ್ಜನಂತಹ ಹಿರಿಯರ ದೈವ ಸ್ಥಾನಗಳು. ಕೊರಗಜ್ಜ ತುಳುವರ ಆರಾಧ್ಯ ದೈವವಾಗಿದೆ. ಇಲ್ಲಿ, ಕೊರಗಜ್ಜನ ಹಿನ್ನೆಲೆಯನ್ನು ತಡಕಿದರೆ, ಮತ್ತೆ ವೈದಿಕ ಶಕ್ತಿಗಳ ಮೋಸ ಬಹಿರಂಗವಾಗುತ್ತದೆ. ಕೊರಗಜ್ಜ ಜಾತೀಯ ಶಕ್ತಿಗಳ ವಿರುದ್ಧ ಧ್ವನಿಯೆತ್ತಿದ್ದರು. ದೇವಸ್ಥಾನದೊಳಗೆ ಪ್ರವೇಶವಿಲ್ಲ ಎಂದಾಗ ಕೊರಗಜ್ಜ ಕೇಳುತ್ತಾರೆ ‘‘ನಾವು ತರುವ ತರಕಾರಿಗಳೆಲ್ಲ ನಿಮಗೆ ಬೇಕು. ಆದರೆ ನಾವು ಮಾತ್ರ ಬೇಡವೇ?’’ ಎಂದು. ಹೀಗೆಯೇ ಒಂದು ದಿನ ಕೊರಗಜ್ಜ, ದೇವಸ್ಥಾನದ ಅಂಗಳಕ್ಕೆ ಚಾಚಿರುವ ಮರದ ಹಣ್ಣನ್ನು ಕೊಯ್ಯುವಾಗ ಕೊರಗಜ್ಜನ ನೆರಳು ದೇವಸ್ಥಾನದ ಮೇಲೆ ಬೀಳುತ್ತದೆಯಂತೆ. ದೇವಸ್ಥಾನದೊಳಗಿರುವ ವೈದಿಕ ದೇವಿ ಸಿಟ್ಟು ಮಾಡಿ ಅವರನ್ನು ಮಾಯ ಮಾಡುತ್ತಾಳಂತೆ.

ಅಂದರೆ, ಪರೋಕ್ಷವಾಗಿ ಇಲ್ಲಿ ನಡೆದಿರುವುದು ಏನು ಎನ್ನುವುದನ್ನು ಯಾರೂ ಊಹಿಸಬಹುದಾಗಿದೆ. ವೈದಿಕರು ಕೊರಗಜ್ಜನ್ನು ಥಳಿಸಿ ಕೊಂದು ಹಾಕುತ್ತಾರೆ. ಮುಂದೆ ಅವರೇ ದೈವವಾಗಿ ತುಳುವ ಜನರಿಂದ ಆರಾಧಿಸಲ್ಪಡುತ್ತಾರೆ. ದುರಂತವೇನೆಂದರೆ, ಯಾವ ಜಾತೀಯತೆಯ ಶಕ್ತಿಗೆ ಕೊರಗಜ್ಜರು ಬಲಿಯಾದರೋ, ಅದೇ ಜಾತೀಯ ಶಕ್ತಿಗಳು ಇಂದು ಕೊರಗಜ್ಜನ ದೈವಸ್ಥಾನವನ್ನು ಬಲಿಹಾಕಲು ಸಿದ್ಧವಾಗಿವೆ. ಇಂದು ಇಂತಹ ದೈವಸ್ಥಾನದಲ್ಲಿ ಆರೆಸ್ಸೆಸ್ ಸಹಿತ ವೈದಿಕ ಶಕ್ತಿಗಳು ಮೆಲ್ಲಗೆ ತೂರಿಕೊಂಡಿವೆ. ಪಾಡ್ದನ ಜಾಗದಲ್ಲಿ ಭಜನೆಗಳನ್ನು ತುರುಕಿಸಲು ಯಶಸ್ವಿಯಾಗಿವೆ. ಡೋಲು ವಾದ್ಯಗಳ ಜಾಗದಲ್ಲಿ ತಮ್ಮ ಜಾಗಟೆಗಳನ್ನು ತೂರಿಸುವ ಪ್ರಯತ್ನದಲ್ಲೂ ಯಶಸ್ವಿಯಾಗುತ್ತಿವೆ. ಹಾಗೆಯೇ ತುಳು ದೈವಸ್ಥಾನಕ್ಕೆ ಸಂಬಂಧವೇ ಇಲ್ಲದ ಕೇಸರಿ ಬಾವುಟಗಳೂ ಈ ದೈವಸ್ಥಾನದ ಮೇಲೆ ಹಾರಲಾರಂಭಿಸಿವೆ. ಇಂದು ತುಳುನಾಡಿನ ಬಹುತೇಕ ದೈವಸ್ಥಾನಗಳನ್ನು ವೈದಿಕಶಕ್ತಿಗಳು ಇದೇ ರೀತಿಯಲ್ಲಿ ಆಕ್ರಮಿಸಿಕೊಂಡಿವೆ. ಪರಿಣಾಮವಾಗಿಯೇ ಜಿಲ್ಲೆಯಲ್ಲಿ ಜಾತೀಯತೆ ಹೆಚ್ಚುತ್ತಿವೆ. ಜೊತೆಗೆ, ಇವರ ಸಂಚಿಗೆ ಬಲಿಯಾದ ಕೆಳಜಾತಿಯ ಜನರು ದುಷ್ಕೃತ್ಯಗಳಲ್ಲಿ ಗುರುತಿಸಿಕೊಂಡು ಜೈಲು ಪಾಲಾಗುತ್ತಿದ್ದಾರೆ. ಒಂದು ಕಾಲದಲ್ಲಿ ಕರಾವಳಿಯಲ್ಲಿ ಬೇರು ಬಿಟ್ಟಿದ್ದ ಬೌದ್ಧ ಮತ್ತು ಜಿನ ಆಲಯಗಳನ್ನು ಸರ್ವನಾಶ ಮಾಡಿದವರೇ ಇಂದು ತುಳು ದೈವಗಳ ವೌಲ್ಯಗಳನ್ನು ಅಪವೌಲ್ಯಗೊಳಿಸಿ ಅಲ್ಲಿ ವೈದಿಕ ವೌಲ್ಯಗಳನ್ನು ತುರುಕಿಸುತ್ತಿದ್ದಾರೆ. ದೇಶಾದ್ಯಂತ ಇದು ಬೇರೆ ಬೇರೆ ರೂಪಗಳಲ್ಲಿ ಜರಗುತ್ತಲೇ ಇದೆ. ಇಂದು ಮೈಸೂರಿನಲ್ಲಿ ಮಹಿಷಾಸುರನ ವೌಲ್ಯಗಳನ್ನು ಮೇಲೆತ್ತುವ ಕೆಲಸಗಳು ಮತ್ತೆ ನಡೆಯುತ್ತಿವೆ.

ಇದು ಇನ್ನಷ್ಟು ವ್ಯಾಪಕವಾಗಿ ನಡೆಯಬೇಕಾಗಿದೆ. ಕೇರಳದಲ್ಲಿ ಹೇಗೆ ದ್ರಾವಿಡ ವೌಲ್ಯಗಳು ಜಾಗೃತವಾಗಿದೆಯೋ ಅದು ನಾಡಿನ, ದೇಶದ ಉದ್ದಗಲಕ್ಕೂ ಜರಗಬೇಕಾಗಿದೆ. ಈ ದೇಶದ ತಳಮಟ್ಟದ ಜನರಿಗೆ ವೈದಿಕ ಶಕ್ತಿಗಳು ಮಾಡಿರುವ ವಂಚನೆ, ಮೋಸಗಳು ಬಯಲಾಗಿ, ನಮ್ಮ ನಿಜ ಸಂಸ್ಕೃತಿಯ ಕಡೆಗೆ ನಾವು ಮರಳಬೇಕಾಗಿದೆ. ತಳಮಟ್ಟದ ಜನರಿಗೆ ಸಾಮಾಜಿಕ ನ್ಯಾಯವನ್ನು ನೀಡಲು ಶ್ರಮಿಸಿದ ಜ್ಯೋತಿಬಾ ಫುಲೆ, ನಾರಾಯಣಗುರು, ಅಂಬೇಡ್ಕರ್ ಮೊದಲಾದವರು ನಮಗೆ ಆದರ್ಶವಾಗಬೇಕೇ ಹೊರತು, ಆರೆಸ್ಸೆಸ್‌ನ ಗೋಳ್ವಾಲ್ಕರ್‌ನಂತಹ ಜಾತೀವಾದಿಗಳಲ್ಲ. ಜ್ಯೋತಿಬಾ ಫುಲೆ, ನಾರಾಯಣಗುರು ಮೊದಲಾದವರನ್ನು ಮರೆತರೆ ನಾವೇ ನಮ್ಮನ್ನು ಮತ್ತೆ ಪಾರತಂತ್ರಕ್ಕೆ ಒಪ್ಪಿಸಿಕೊಂಡಂತೆ. ಮುಂದೊಂದು ದಿನ, ಜ್ಯೋತಿಬಾ ಫುಲೆ, ಅಂಬೇಡ್ಕರ್‌ರಂತಹವರನ್ನೇ ನಮ್ಮ ಶತ್ರುಗಳಾಗಿ ಇವರು ಬಿಂಬಿಸಿದರೂ ಅಚ್ಚರಿಯಿಲ್ಲ. ಅದಕ್ಕೆ ಮೊದಲು ನಾವು ಎಚ್ಚೆತ್ತುಕೊಳ್ಳಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X