ಸಂಖ್ಯೆಯಲ್ಲಿ ಹೆಚ್ಚಳ ಪರಿಹಾರವಲ್ಲ, ಕೆಲಸ ಮಾಡುವ ನ್ಯಾಯಾಧೀಶರು ಬೇಕು
ಕಾನೂನು ಆಯೋಗದ ಅಧ್ಯಕ್ಷ
ಹೊಸದಿಲ್ಲಿ,ಸೆ.14: ನ್ಯಾಯಾಂಗದ ಪ್ರಸ್ತುತ ಬೇಡಿಕೆಗಳನ್ನು ಈಡೇರಿಸಲು ಭಾರತಕ್ಕೆ ‘ಕೆಲಸ ಮಾಡುವ ನ್ಯಾಯಾಧೀಶರ ’ಅಗತ್ಯವಿದೆ, ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವುದು ಪರಿಹಾರವಲ್ಲ ಎಂದು ಕಾನೂನು ಆಯೋಗದ ಅಧ್ಯಕ್ಷ ಹಾಗೂ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ಬಲ್ಬೀರ್ ಸಿಂಗ್ ಚೌಹಾಣ್ ಅವರು ಹೇಳಿದ್ದಾರೆ. ಜನರಿಗೆ ತಮ್ಮ ಹಕ್ಕುಗಳ ಬಗ್ಗೆ ಹೆಚ್ಚಿನ ತಿಳುವಳಿಕೆಯಿದೆ ಎಂದು ಪತ್ರಿಕಾ ಸಂದರ್ಶನವೊಂದರಲ್ಲಿ ಬೆಟ್ಟು ಮಾಡಿದ ಅವರು, ಸಾರ್ವಜನಿಕರ ವಿಶ್ವಾಸವನ್ನು ಎತ್ತಿ ಹಿಡಿಯಲು ಮತ್ತು ‘ಸ್ವಾತಂತ್ರದ ವಿಸ್ತರಣೆ ’ಗಾಗಿ ನ್ಯಾಯಾಂಗ ವ್ಯವಸ್ಥೆಯು ಪ್ರಮುಖ ಪಾತ್ರವನ್ನು ವಹಿಸಬೇಕಾಗಿದೆ ಎಂದು ಹೇಳಿದ್ದಾರೆ.
Next Story





