ರಾಜೀವ್ ಗಾಬಾಗೆ ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿಯ ಹೆಚ್ಚುವರಿ ಹೊಣೆಗಾರಿಕೆ
ಹೊಸದಿಲ್ಲಿ, ಸೆ.14: ನಗರಾಭಿವೃದ್ಧಿ ಕಾರ್ಯದರ್ಶಿ ರಾಜೀವ್ ಗಾಬಾ ಅವರು ಸೆ.25ರವರೆಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಯಾಗಿ ಹೆಚ್ಚುವರಿ ಹೊಣೆಗಾರಿಕೆಯನ್ನು ನಿರ್ವಹಿಸಲಿದ್ದಾರೆ.
ವಾರ್ತಾ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿ ಅಜಯ್ ಮಿತ್ತಲ್ ಅವರು ವೈದ್ಯಕೀಯ ರಜೆಯಲ್ಲಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಈ ಆದೇಶವನ್ನು ಹೊರಡಿಸಿದೆ.
ಪ್ರತ್ಯೇಕ ಆದೇಶದಲ್ಲಿ ಸಂಪುಟದ ನೇಮಕಾತಿ ಸಮಿತಿಯು ಯೆಲ್ಲಪಂತುಲ ಮಲ್ಲಿಕಾರ್ಜುನ ಅವರನ್ನು ವಾರ್ತಾ ಮತ್ತು ಪ್ರಸಾರ ಸಚಿವ ಎಂ.ವೆಂಕಯ್ಯ ನಾಯ್ಡು ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಿಸಿದೆ. ಅವರು 2019,ಮಾ.26ರವರೆಗೆ ಈ ಹುದ್ದೆಯಲ್ಲಿರುತ್ತಾರೆ.
Next Story





