ನಿಯಂತ್ರಿತ ನೆಲಸಮದಿಂದಲೇ ಡಬ್ಲ್ಯೂ ಟಿಸಿ ಕಟ್ಟಡಗಳ ನಾಶ !
ಯುರೋ ಫಿಸಿಕ್ಸ್ ನ್ಯೂಸ್ ವರದಿ

ನ್ಯೂಯಾರ್ಕ್, ಸೆ.15: ಸೆಪ್ಟೆಂಬರ್ 11, 2001ರ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದ ದಾಳಿಯ ಸಂದರ್ಭ ಕೇಂದ್ರದ ಎಲ್ಲಾ ಮೂರು ಕಟ್ಟಡಗಳು ಕುಸಿಯಲು ಅವುಗಳೊಳಗೆ ಉಂಟಾದ ತೀವ್ರ ಶಾಖವೇ ಕಾರಣವೆಂಬುದು ಸರಕಾರದ ವಾದವಾಗಿದ್ದರೆ, ಕಳೆದ 15 ವರ್ಷಗಳಿಂದ ಈ ವಾದವನ್ನುಹಲವಾರು ತಜ್ಞರು ಪ್ರಶ್ನಿಸಿದ್ದುಂಟು.
ಆದರೆ ಈ ಘಟನೆಯ ಬಗ್ಗೆ ಹೊಸ ಫೊರೆನ್ಸಿಕ್ ತನಿಖೆಯೊಂದರ ವಿವರಗಳನ್ನು ಯುರೋಪಿನ ಪ್ರತಿಷ್ಠಿತಫಿಸಿಕ್ಸ್ ನಿಯತಕಾಲಿಕ ಯುರೋ ಫಿಸಿಕ್ಸ್ ನ್ಯೂಸ್ ನಲ್ಲಿ ಪ್ರಕಟಿಸಲಾಗಿದ್ದು ಅದರಲ್ಲಿ ಹೇಳಿದಂತೆ ವಿಶ್ವ ವಾಣಿಜ್ಯ ಕೇಂದ್ರದ ಎಲ್ಲಾ ಮೂರು ಕಟ್ಟಡಗಳು ನಿಯಂತ್ರಿತ ನೆಲಸಮದಿಂದ ವಿನಾಶವಾಯಿತು.
ಬ್ರಿಘ್ಹೆಮ್ ಯಂಗ್ ಯುನಿವರ್ಸಿಟಿ ಇಲ್ಲಿನ ಮಾಜಿ ಭೌತಶಾಸ್ತ್ರ ಪ್ರೊಫೆಸರ್ ಸ್ಟೀವನ್ ಜೋನ್ಸ್,ಕೆನಡಾದ ಒಂಟಾರಿಯೋದ ಮೆಕ್ ಮಾಸ್ಟರ್ ಯುನಿವರ್ಸಿಟಿ ಇಲ್ಲಿನ ಸಿವಿಲ್ ಇಂಜಿನಿಯರಿಂಗ್ ಪ್ರೊಫೆಸರ್ ಎಮೆರಿಟಸ್‌ರಾಬರ್ಟ್ ಕೊರೊಲ್, ಮೆಕ್ಯಾನಿಕಲ್ ಡಿಸೈನ್ ಇಂಜಿನಿಯರ್ಆಂಟನಿ ಝಾಂಬೋಟಿ ಹಾಗೂ ಸ್ಟ್ರೆಟಜಿ ಎಂಡ್ ಡೆವಲೆಪ್ಮೆಂಟ್ ಫಾರ್ ಆರ್ಕಿಟೆಕ್ಟ್ಸ್ ಎಂಡ್ ಇಂಜಿನಿಯರ್ಸ್ ಫಾರ್ 9/11 ಟ್ರುತ್ ಎಂಬ ಸಂಘಟನೆಯ ನಿರ್ದೇಶಕ ಟೆಡ್ ವಾಲ್ಟರ್ ಈ ಅಧ್ಯಯನ ನಡೆಸಿದ್ದರು.
ಈ ತಜ್ಞರ ಪ್ರಕಾರ ಕಟ್ಟಡಗಳು ಅಷ್ಟೊಂದು ವೇಗವಾಗಿ ಹಾಗೂ ಒಂದೇ ರೀತಿಯಲ್ಲಿ ಅದು ಕೂಡ ಒಮ್ಮೆಗೇ ಕುಸಿದಿರುವುದರಿಂದ ಅದಕ್ಕೆ ಸೂಕ್ತ ವಿವರಣೆ ನೀಡಲು ಕಷ್ಟಸಾಧ್ಯ. ಈ ಮೂಲಕ ಯಾವುದೇ ನಿರೋಧ ಶಕ್ತಿಯಿಲ್ಲದೆ ಕಟ್ಟಡಗಳು ಕುಸಿದವು ಎಂಬ ವಿವರಣೆಯನ್ನು ಅಲ್ಲಗಳೆಯುವ ಯತ್ನಗಳನ್ನು ಅದು ಪ್ರಶ್ನಿಸಿದೆ.
ಈ ಹೊಸ ವರದಿಯು ವಿಶ್ವ ವಾಣಿಜ್ಯ ಕೇಂದ್ರ ಕುಸಿಯಲು ನಿಜವಾದ ಕಾರಣಗಳೇನು ಎಂಬ ಬಗ್ಗೆ ನಿಷ್ಪಕ್ಷಪಾತಿ ಮರು ತನಿಖೆ ನಡೆಸಲು ಹೆಚ್ಚುತ್ತಿರುವ ಬೇಡಿಕೆಯನ್ನು ಮತ್ತಷ್ಟು ಬಲಪಡಿಸಿದೆ.





