ಯುವತಿಯನ್ನು ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಕೇರಳ, ಸೆ.15: ಯುವಕನಿಂದ ಇಂಜಿನಿಯರಿಂಗ್ ಪದವೀಧರೆ ಕೊಲೆಯಾದ ಘಟನೆ ಕೊಯಮತ್ತೂರ್ ನಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಕೊಲೆಯಾದ ಯುವತಿಯನ್ನು ಇಂಜಿನಿಯರಿಂಗ್ ಪದವೀಧರೆ ಧನ್ಯಾ ಎಂದು ಗುರುತಿಸಲಾಗಿದೆ. ಈಕೆ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಇತ್ತೀಚೆಗೆ ಒಂದು ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದಳು. ಹತ್ತು ದಿನಗಳ ಹಿಂದೆ ಬೇರೊಬ್ಬರೊಂದಿಗೆ ಅವಳಿಗೆ ನಿಶ್ಚಿತಾರ್ಥವಾಗಿತ್ತು. ಅನ್ನೂರ್ ಪ್ರದೇಶದ ಮನೆಯಲ್ಲಿ ಒಬ್ಬಳೇ ಇದ್ದಾಗ ಮನೆಗೆ ರಾತ್ರಿ ಸುಮಾರು 8 ಗಂಟೆಗೆ ನುಗ್ಗಿದ ಝಹೀರ್, ಚಾಕುವಿನಿಂದ ಆಕೆಯನ್ನು ಇರಿದು ಪರಾರಿಯಾಗಿದ್ದ.
ಧನ್ಯಾಳ ತಾಯಿ, ಶಾರದಾ ಮನೆಗೆ ಬಂದಾಗ ಮಗಳ ದೇಹ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಧನ್ಯಾಳ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಝಹೀರ್ ತಿಪಟೂರಿನ ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಮೃತ ಧನ್ಯಾ ವಾಸವಿದ್ದ ಅದೇ ಕಾಲನಿಯಲ್ಲಿ ಆತನೂ ವಾಸವಾಗಿದ್ದ. ಕೊಲೆಗೈದು ತನ್ನ ಮೂಲಸ್ಥಳವಾದ ಕೇರಳದ ಪಲಕ್ಕಾಡ ಜಿಲ್ಲೆಗೆ ಪರಾರಿಯಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಆತನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ರಾತ್ರಿಯೇ ಕೊಯತ್ತೂರಿನ ಪೊಲೀಸ್ ತಂಡ ಆರೋಪಿಯನ್ನು ಹಿಡಿಯಲು ಧಾವಿಸಿತ್ತು.







