ಕಾವೇರಿ ವಿವಾದ: ಕರ್ನಾಟಕ, ಕೇರಳದಲ್ಲಿಯ ತಮಿಳರ ರಕ್ಷಣೆಗಾಗಿ ಸುಪ್ರೀಮ್‌ಗೆ ಮೊರೆ

ಚೆನ್ನೈ,ಸೆ.15: ಕಾವೇರಿ ವಿವಾದದ ಕುರಿತು ಕರ್ನಾಟಕದಲ್ಲಿ ತಮಿಳರ ಮೇಲಿನ ಇತ್ತೀಚಿನ ದಾಳಿಗಳು ಮತ್ತು ಕೇರಳದಲ್ಲಿ ತಮಿಳುನಾಡು ಪಿಡಬ್ಲುಡಿ ಅಧಿಕಾರಿಗಳ ಮೇಲಿನ ಹಲ್ಲೆಯ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳಲ್ಲಿನ ತಮಿಳರನ್ನು ರಕ್ಷಿಸುವಂತೆ ಕೇಂದ್ರಕ್ಕೆ ನಿರ್ದೇಶನವನ್ನು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಉಭಯ ರಾಜ್ಯಗಳಲ್ಲಿ ತಮಿಳರ ಸುರಕ್ಷತೆಯು ಪ್ರಶ್ನಾರ್ಥಕ ಚಿಹ್ನೆಯಾಗಿದೆ ಎಂದು ಹೇಳಿರುವ ಅರ್ಜಿದಾರ, ಎನ್‌ಜಿಒವೊಂದನ್ನು ನಡೆಸುತ್ತಿರುವ ಕೆ.ಕೆ.ರಮೇಶ ಅವರು, ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ತಮಿಳರು ಮತ್ತು ಅವರ ಉದ್ಯಮಗಳ ಮೇಲೆ ದಾಳಿ ನಡೆದಿದ್ದರೆ, ಸೆ.12ರಂದು ಕೇರಳದ ಪರಂಬಿಕುಳಂ ಅಣೆಕಟ್ಟು ನಿವೇಶನಕ್ಕೆ ಭೇಟಿ ನೀಡಿದ್ದ ತಮಿಳುನಾಡಿನ ಪಿಡಬ್ಲುಡಿ ಅಧಿಕಾರಿಗಳ ಮೇಲೆ ಕೇರಳ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
Next Story





