Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ತಾಳ್ಮೆಯಿದ್ದರೆ ಸಂಘರ್ಷಕ್ಕೆ...

ತಾಳ್ಮೆಯಿದ್ದರೆ ಸಂಘರ್ಷಕ್ಕೆ ಅವಕಾಶವಿರುವುದಿಲ್ಲ: ಸಚಿವ ಖಾದರ್

ಉಳ್ಳಾಲ ದರ್ಗಾದಲ್ಲಿ ಈದ್ ಸ್ನೇಹ ಸಮ್ಮಿಲನ ಕಾರ್ಯಕ್ರಮ

ವಾರ್ತಾಭಾರತಿವಾರ್ತಾಭಾರತಿ15 Sept 2016 6:21 PM IST
share
ತಾಳ್ಮೆಯಿದ್ದರೆ ಸಂಘರ್ಷಕ್ಕೆ ಅವಕಾಶವಿರುವುದಿಲ್ಲ: ಸಚಿವ ಖಾದರ್

ಉಳ್ಳಾಲ, ಸೆ.15: ಮನುಷ್ಯನಿಗೆ ತಾಳ್ಮೆಯ ಕೊರತೆ ಎದುರಾಗುತ್ತಿದ್ದು, ತಾಳ್ಮೆ ಸಂಘರ್ಷಕ್ಕೆ ಅವಕಾಶ ನೀಡುವುದಿಲ್ಲ. ತಾಳ್ಮೆಯ ಕೊರತೆಯಿಂದ ಉಳ್ಳಾಲದಲ್ಲಿ ಕೆಲವೊಮ್ಮೆ ಶಾಂತಿಗೆ ಧಕ್ಕೆಯುಂಟಾಗುವ ಘಟನೆಗಳು ನಡೆಯುತ್ತಿವೆ. ಕೋಮು ಭಾವನೆಯನ್ನು ಸೃಷ್ಟಿಸುವುದು ಸಂಸ್ಕೃತಿಯಲ್ಲ. ನಮ್ಮದು ಮಣ್ಣಿನ ಸಂಸ್ಕೃತಿಯಾಗಿದೆ. ನ್ಯಾಯ ಅನ್ಯಾಯದ ವಿಚಾರದಲ್ಲಿ ಗಲಾಟೆ ಆಗಿದೆಯೇ ಹೊರತು ಧಾರ್ಮಿಕ ವಿಚಾರದಲ್ಲಿ ಆದದ್ದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.

ಅವರು ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸೈಯದ್ ಮದನಿ ದರ್ಗಾ ಸಮಿತಿ ಆಶ್ರಯದಲ್ಲಿ ಗುರುವಾರ ದರ್ಗಾ ವಠಾರದಲ್ಲಿ ನಡೆದ ಈದ್ ಸ್ನೇಹಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸೈಯದ್ ಮದನಿ ಅರಬಿಕ್ ಕಾಲೇಜು ಮುದರ್ರಿಸ್ ಹಾಜಿ ಅಹ್ಮದ್ ಬಾವ ಮುಸ್ಲಿಯಾರ್ ದುಆಗೈದರು.

ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುರ್ರಶೀದ್ ಉಳ್ಳಾಲ್ ಮಾತನಾಡಿ, ಸಣ್ಣಪುಟ್ಟ ವಿಚಾರಗಳಿಗೆ ಉಳ್ಳಾಲದಲ್ಲಿ ಸಮಾಜದಿಂದ ಹೊರಗುಳಿದವರ ನಡುವೆ ಮಾತು, ಸಂಘರ್ಷ ನಡೆದರೆ ಗಲಾಟೆಗೆ ಕಾರಣ ಸಾಕಾಗುತ್ತದೆ. ಅಂತಹ ಕಳಂಕ ವಾತವರಣದಿಂದ ಉಳ್ಳಾಲ ಮುಕ್ತವಾಗಬೇಕೆಂದು ನಮ್ಮ ಬಯಕೆ, ಜಾತಿ ಧರ್ಮ ಎಲ್ಲವನ್ನು ಬಿಟ್ಟು ನಾವು ಒಂದಾಗಿ ಶಾಂತಿ ನೆಲೆಸುವ ಕಾರ್ಯವನ್ನು ಸರ್ವಧರ್ಮದವರು ಒಟ್ಟಾಗಿ ನಿರ್ಮಾಣ ಮಾಡಬೇಕು ಎಂದರು.

ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ, ಉಳ್ಳಾಲ ಈಗ ದೇಶದಲ್ಲಿ ಹೆಸರುಪಡೆದಿದೆ. ಕಡಲ್ಕೊರೆತ, ರಾಣಿ ಅಬ್ಬಕ್ಕ, ಉಳ್ಳಾಲ ದರ್ಗಾ ಮುಂತಾದ ಹೆಸರುಗಳಿಂದ ಪ್ರಸಿದ್ಧಿ ಪಡೆದಿದೆ. ಉಳ್ಳಾಲ ದರ್ಗಾವನ್ನು ದಕ್ಷಿಣ ಭಾರತದ ಅಜ್ಮೀರ್ ಎಂದು ಕರೆಯುತ್ತಾರೆ. ಇಲ್ಲಿ ನಾವು ಒಟ್ಟಾಗಿ ಜೀವಿಸುವ ಕಾರ್ಯ ಮಾಡಬೇಕಾಗಿದೆ. ನಮಗೆ ನಾವಿರುಷ್ಟು ಕಾಲ ಶಾಂತಿ, ಸೌಹಾರ್ದತೆ ಬೇಕು. ಎಲ್ಲಾದರೂ ಒಂದು ಘಟನೆ ನಡೆದರೆ ಅದಕ್ಕೆ ಪ್ರತೀಕಾರ ತೀರಿಸುವ ಕೆಲಸ ನಮ್ಮದಾಗದಿರಲಿ ಎಂದರು.

ತೊಕ್ಕೊಟ್ಟು ನಿತ್ಯಾಧರ್ ಚರ್ಚ್‌ನ ಧರ್ಮಗುರು ಫಾ.ಎಲಿಯಸ್ ಡಿಸೋಜ ಮಾತನಾಡಿ, ಉಳ್ಳಾಲವನ್ನು ಗಲಭೆಮುಕ್ತ ಪ್ರದೇಶವನ್ನಾಗಿ ಮಾಡಬೇಕೆಂಬ ಗುರಿ ನಮ್ಮೆಲ್ಲರದ್ದು. ಕೋಮು ಸಾಮರಸ್ಯಕ್ಕೆ ಎಲ್ಲರ ಬಲ ಸಿಗಬೇಕು. ಯಾರೋ ಏನೋ ಮಾಡಿದ್ದಾರೆ ಎಂಬ ಗಾಳಿ ಮಾತಿಗೆ ಕಿವಿಗೊಟ್ಟು ಅದಕ್ಕೆ ಪ್ರತೀಕಾರ ತೀರಿಸುವ ಕೆಲಸ ಬೇಡ ಎಂದರು.

ಜಿ.ಪಂ. ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಉಳ್ಳಾಲ ನಗರಸಭೆಯ ಅಧ್ಯಕ್ಷ ಕುಂಞಿಮೋನು, ಮುಖ್ಯಾಧಿಕಾರಿ ರೇಖಾ ಶೆಟ್ಟಿ, ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಉಳ್ಳಾಲ ಪೋಲೀಸ್ ಠಾಣಾಧಿಕಾರಿ ಶಿವಪ್ರಕಾಶ್, ನರಸಿಂಹ ದೇವಸ್ಥಾನದ ಅಧ್ಯಕ್ಷ ಯು, ಶ್ರೀಕರ ಕಿಣಿ, ಕೊಲ್ಯ ಬಿಲ್ಲವ ಸೇವಾ ಸಮಾಜದ ವೇಣುಗೋಪಾಲ, ಜಿ.ಪಂ. ಸದಸ್ಯೆ ಧನಲಕ್ಷ್ಮೀ ಗಟ್ಟಿ, ಮಳಯಾಲ ಚಾಮುಂಡೇಶ್ವರಿ ದೇವಸ್ಥಾನ ಆಡಳಿತ ಮುಕ್ತೇಶರ ಎಚ್. ಶ್ರೀದರ, ಬಾಳಪ್ಪ ಪೂಜಾರಿ, ಸೋಮೇಶ್ವರ ದೇವಸ್ಥಾನ ಪ್ರತಿನಿಧಿ ರಮಾನಾಥ ಬಂಗೇರ, ಪುದಿಯಂಗಡಿ ಕ್ಷೇತ್ರ ಒಂಬತ್ತುಕೆರೆ ಪ್ರತಿನಿಧಿ ಹರೀಶ್ ಕುಮಾರ್, ಅಕ್ಕರೆಕರೆ ಮಸೀದಿ ಅಧ್ಯಕ್ಷ ಹುಸೈನ್, ವಿಶ್ವನಾಥಗಟ್ಟಿ ವಗ್ಗ, ತೊಕ್ಕೊಟು ಶಿವಾಜಿ ಫ್ರೆಂಡ್ಸ್ ಸರ್ಕಲ್ ಮುಖಂಡರಾದ ಮಾಧವ ಗಟ್ಟಿ, ರೋಹನ್ ತೊಕ್ಕೋಟು ರವಿ ಭಟ್ನಗರ, ತೊಕ್ಕೊಟು ಸಾರ್ವಜನಿಕ ಗಣೇಶೋತ್ಸವ ಸೇವಾ ಸಮಿತಿ ಮುಖಂಡ ಶರತ್ ಕುಮಾರ್ ತೊಕ್ಕೊಟು, ಕೊಲ್ಯ ಮಠ ಅಧ್ಯಕ್ಷರಾದ ಮಧುಸೂದನ್ ಐ.ಆರ್., ವಾಸುಕಿ ಸೇವಾ ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ, ತೊಕ್ಕೊಟ್ಟು ವಾಸುಕಿ ಸೇವಾ ಸಂಘದ ಮುಖಂಡ ಅಜಿತ್ ಕುಮಾರ್ ಉಳ್ಳಾಲ್, ತೊಕ್ಕೊಟ್ಟು ಕೊರಗಜ್ಜ ಸೇವಾ ಸಮಿತಿಯ ಮುಖಂಡ ತಾರಾನಾಥ್, ಕೊರಗಜ್ಜ ಸೇವಾ ಸಮಿತಿಯ ಮುಖಂಡ ಸುದೇಶ್, ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರ ಮುಖಂಡ ಯು.ಲಕ್ಷಣ್, ಆನಂದ ಉಳಿಯ, ರಾಜೇಂದ್ರ ಬಂಡಸಾಲೆ, ಯು.ಎಂ. ಜೈನುದ್ದೀನ್, ಅಬ್ಬಕ್ಕನಗರ ರಾಹುಗುಳಿಗ ಬನದ ಅಧ್ಯಕ್ಷ ಯು.ಲಕ್ಷಣ್, ಮಾಜಿ ಪುರಸಭಾಧ್ಯಕ್ಷ ಯು.ಎ. ಇಸ್ಮಾಯೀಲ್, ನಗರಸಭೆಯ ಸದಸ್ಯ ಮುಸ್ತಫಾ ಅಬ್ದುಲ್ಲಾ, ಸುಂದರ ಉಳಿಯ, ಮುಹಮ್ಮದ್ ಮುಕ್ಕಚ್ಚೇರಿ, ಹನೀಪ್, ಪೊಡಿಮೋನು, ರಾಮಚಂದ್ರ ತೊಕ್ಕೋಟು, ಕೋಟೆಪುರ ಮಸೀದಿ ಉಪಾಧ್ಯಕ್ಷ ಅನ್ವರ್, ಕೋಡಿ ಮಸೀದಿ ಕಾರ್ಯದರ್ಶಿ ಯು.ಅಹ್ಮದ್ ಬಾವ, ಉಳ್ಳಾಲ ಅಬ್ಬಕ್ಕ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ್, ಸಾಮಾಜಿಕ ಮುಖಂಡರಾದ ಬಾಬು ಬಂಗೇರ, ರವೀಂದ್ರ ಶೆಟ್ಟಿ ಉಳಿದೊಟ್ಟು, ವಿಶ್ವನಾಥ ವಗ್ಗ, ಯು. ಕೃಷ್ಟ ಜಿ.ಕೆ., ಕೆ.ಕೆ. ಭುಜಂಗ ಮಾಸ್ತಿಕಟ್ಟೆ, ಭಗವಾನ್ ದಾಸ್ ತೊಕ್ಕೊಟ್ಟು, ಕೆ.ಸೀತಾರಾಮ ಬಂಗೇರ, ಮುನೀರ್ ಬಾವ, ರಾಮ ಪೂಜಾರಿ ಕೊಲ್ಯ, ಪಿ.ಕೆ ರಾಜು ಜೆಟ್ಟಿಯಾರ್ ತೊಕ್ಕೊಟು, ಅಲ್ಪರ್ಟ್ ಡಿಸೋಜ ತೊಕ್ಕೊಟ್ಟು, ರಾಜೀವ್ ಮೆಂಡನ್, ಪ್ರಮೋದ್, ಕೆ.ಎ. ಮುಹಮ್ಮದ್ ಮುನೀರ್, ರೋಹಿತ್ ಉಳ್ಳಾಲ್, ರಾಮಚಂದ್ರ ಪಿಲಾರ್, ವಿದ್ಯಾಧರ್ ಶೆಟ್ಟಿ, ಸತೀಶ್ ಉಳ್ಳಾಲ್, ಮೆಲ್ವಿನ್ ಡಿಸೋಜ ಕಲ್ಲಾಪು, ರಿಚರ್ಡ್ ವೇಗಸ್, ಬೊಟ್ಟು ಮಸೀದಿ ಅಧ್ಯಕ್ಷ ಹಸೈನಾರ್ ಕಾರ್ಯದರ್ಶಿ ಉಮರ್ ಫಾರೂಕ್ ಬೊಟ್ಟು, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ದರ್ಗಾ ಉಪಾಧ್ಯಕ್ಷ ಯು.ಕೆ. ಮೋನು, ಬಾವ ಮುಹಮ್ಮದ್, ಕೋಶಾಧಿಕಾರಿ ಯು.ಕೆ ಇಲ್ಯಾಸ್, ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಹಾಜಿ ಎ.ಕೆ ಮೊಹಿಯದ್ದೀನ್ ಕೋಟೆಪುರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ ಹಾಜಿ ವಂದಿಸಿದರು. ರಸೂಲ್ ಖಾನ್ ಕಾರ್ಯಕ್ರಮ ನಿರೂಪಿಸಿ, ಡಿ.ಬಿ. ಮೊಯ್ದಿನ್ ಈದ್ ಸಂದೇಶವನ್ನು ನೀಡಿದರು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X