ಭಾರತೀಯ-ಅಮೆರಿಕನ್ ವೈದ್ಯ ಅಬ್ರಹಾಂ ವರ್ಗೀಸ್‌ಗೆ ಮಾನವತಾ ಪ್ರಶಸ್ತಿ

ವಾಶಿಂಗ್ಟನ್, ಸೆ.15: ಭಾರತೀಯ ಅಮೆರಿಕನ್ ವೈದ್ಯ ಹಾಗೂ ಲೇಖಕ ಅಬ್ರಹಾಂ ವರ್ಗೀಸ್, 2015ರ ಪ್ರತಿಷ್ಠಿತ ರಾಷ್ಟ್ರೀಯ ಮಾನವತಾ ಪದಕಕ್ಕೆ ಆಯ್ಕೆಯಾಗಿದ್ದಾರೆಂದು ಶ್ವೇತಭವನವು ಪ್ರಕಟಿಸಿವೆ. ಅವರು ಔಷಧೀಯ ವಲಯದಲ್ಲಿ ಅಪಾರ ಕೆಲಸ ಮಾಡಿದ್ದಾರೆ.
ಸೆ.21ರಂದು ನಡೆಯಲಿರುವ ಸಮಾರಂಭದಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ವರ್ಗೀಸ್‌ರಿಗೆ ಈ ಪ್ರಶಸ್ತಿಯನ್ನು ಪ್ರದಾನಿಸಲಿದ್ದಾರೆ. ಇತರ 11 ಮಂದಿಗೆ 2015ರ ರಾಷ್ಟ್ರೀಯ ಕಲಾ ಪದಕಗಳನ್ನೂ ಇದೇ ಸಮಾರಂಭದಲ್ಲಿ ಪ್ರದಾನಿಸಲಾಗುವುದು.
ಪ್ರಕೃತ, ಸ್ಟಾಂಡರ್ಡ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಔಷಧ ಶಾಸ್ತ್ರ ಪ್ರೊಫೆಸರ್ ಆಗಿರುವ 61ರ ಹರೆಯದ ವರ್ಗೀಸ್, ‘ಮೈ ಓನ್ ಕಂಟ್ರಿ’ ಹಾಗೂ ‘ಕಟ್ಟಿಂಗ್ ಫಾರ್ ಸ್ಟೋನ್’ ಸಹಿತ ಅನೇಕ ಜನಪ್ರಿಯ ಪುಸ್ತಕಗಳನ್ನು ಬರೆದಿದ್ದಾರೆ.
ರೋಗಿಯೇ ಔಷಧಿ ಉದ್ಯಮದ ಕೇಂದ್ರವೆಂದು ‘ತಮಗೆ’ ಜ್ಞಾಪಿಸುತ್ತಿರುವುದಕ್ಕಾಗಿ ವರ್ಗೀಸ್‌ರಿಗೆ ಈ ಪ್ರಶಸ್ತಿ ನೀಡಲಾಗಿದೆಯೆಂದು ನಿನ್ನೆ ಶ್ವೇತಭವನವು ಹೇಳಿಕೆಯೊಂದರಲ್ಲಿ ತಿಳಿಸಿತ್ತು.
Next Story





