ಪೌರಸನ್ಮಾನ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ಬಿ.ಎ.ಮೊಹಿದಿನ್
ಸೌಹಾರ್ದಕ್ಕಾಗಿ ಸಹನೀಯರಾಗಿ:

ಮಂಗಳೂರು, ಸೆ.15: ಪ್ರತಿಷ್ಠಿತ ದೇವರಾಜ ಅರಸು ಪ್ರಶಸ್ತಿಗೆ ಪಾತ್ರರಾದ ಹಿನ್ನೆಲೆಯಲ್ಲಿ ಪೌರಸನ್ಮಾನ ಸ್ವೀಕರಿಸಿದ ಹಿರಿಯ ರಾಜಕೀಯ ಮುತ್ಸದ್ದಿ, ಬಿ.ಎ. ಮೊಹಿದಿನ್ ಅವರು, ಜಿಲ್ಲೆಯಲ್ಲಿ ಸಹನೀಯ ವಾತಾವರಣವನ್ನು ಮೂಡಿಸಿ ಎಂದು ಕಣ್ಣೀರಿಟ್ಟರು.
ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ನಮ್ಮ ಕರಾವಳಿ ಜನರ ಮುಖ ಕೊಂಕಣ, ಮೈಲಾರ ಎಂಬ ರೀತಿಯಲ್ಲಿದೆ. ಯುವಕರು ಜಿಲ್ಲೆಯನ್ನು ಸಹನೀಯವಾಗಿ ಮಾಡಿ. ಎಲ್ಲರೂ ಕೂಡ ಸಂತೋಷದಿಂದ ಓಡಾಡುವಂತೆ, ಎಲ್ಲ ಹೆಣ್ಣುಮಕ್ಕಳು ಭಯವಿಲ್ಲದೆ ಓಡಾಡುವಂತಹ ವಾತವರಣವನ್ನು ನಿರ್ಮಿಸಿ. ಇದಕ್ಕಿಂತ ನನಗೆ ದೊಡ್ಡ ಸನ್ಮಾನವಿಲ್ಲ ಎಂದು ಕಣ್ಣೀರಿಟ್ಟರು.
ಜಾತಿ, ಹಣದಿಂದ ರಾಜಕೀಯ ಮಾಡಲು ಸಾಧ್ಯವಿಲ್ಲ. ಅರಸು ಅವರು ತಮ್ಮ ಕಾರ್ಯದಿಂದ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ. ಮುಂದಿನ ಪೀಳಿಗೆಗೂ ಇದು ಸ್ಫೂರ್ತಿಯಾಗಲಿ ಎಂದರು.
Next Story





