Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕಠಿಣ ಶಿಕ್ಷೆಗೂ ಅಪರಾಧ ತಡೆಗೂ ಸಂಬಂಧ...

ಕಠಿಣ ಶಿಕ್ಷೆಗೂ ಅಪರಾಧ ತಡೆಗೂ ಸಂಬಂಧ ಇದೆಯೇ?

ಸಾಕ್ಷಿಸಾಕ್ಷಿ15 Sept 2016 10:59 PM IST
share
ಕಠಿಣ ಶಿಕ್ಷೆಗೂ ಅಪರಾಧ ತಡೆಗೂ ಸಂಬಂಧ ಇದೆಯೇ?

ಅಪರಾಧ ಹಾಗೂ ಶಿಕ್ಷೆಗೆ ಸಂಬಂಧವಿದೆ ಎನ್ನುವುದು ಮೇಲ್ನೋಟಕ್ಕೆ ಸಿನಿಕತನ ಎನಿಸುತ್ತದೆ. ಶಿಕ್ಷೆಯ ಸೈದ್ಧಾಂತಿಕ ಪ್ರತಿಪಾದಕರು, ಅಪರಾಧಕ್ಕೆ ಪ್ರತಿಯಾಗಿ ಅವರಿಗೆ ಕಠಿಣ ಶಿಕ್ಷೆ ವಿಸುವ ಪ್ರತೀಕಾರದಿಂದ ಹಿಡಿದು, ನಿರೋಧಕ ಕ್ರಮಗಳ ವರೆಗಿನ ಶಿಕ್ಷೆಗಳನ್ನು ಸಮರ್ಥಿಸಿಕೊಳ್ಳುತ್ತಾರೆ.

ಸಮಾಜದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಪರಿಣಾಮಕಾರಿ ಹಾಗೂ ಪ್ರತಿಕ್ರಿಯಾತ್ಮಕ ಶಿಕ್ಷೆ ಇರಬೇಕು ಎನ್ನುವುದನ್ನು ಒಪ್ಪಿಕೊಳ್ಳಬಹುದು. ಸಮಾಜದಲ್ಲಿ ಯಾವುದೇ ಕಾನೂನುಬಾಹಿರ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕಾದ ಹೊಣೆಗಾರಿಕೆ ಸರಕಾರದ ಮೇಲಿರುವುದರಿಂದ ಕಠಿಣ ಶಿಕ್ಷೆಗಳಿಗೆ ಸಮರ್ಥನೆ ಇರುತ್ತದೆ.
ಆದಾಗ್ಯೂ ಇಂಥ ಅಪರಾಧ ತಡೆ ಕ್ರಮವಾಗಿ ಶಿಕ್ಷೆಯನ್ನು ವಿಸುವುದಕ್ಕೆ ಇರುವ ಸಮರ್ಥನೆಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಪ್ರಸ್ತುತ ಇರುವ ನಮ್ಮ ಅಪರಾಧ ನ್ಯಾಯ ವ್ಯವಸ್ಥೆಯ ಮೇಲೆ ಸೂಕ್ಷ್ಮ ದೃಷ್ಟಿ ಬೀರಿದಾಗ, ಹಾಲಿ ಅಸ್ತಿತ್ವದಲ್ಲಿರುವ ಅಪರಾಧ ಕಾನೂನುಗಳು, ಅಪರಾಧಗಳ ಬಗ್ಗೆ ಮತ್ತು ಶಿಕ್ಷೆಯ ಬಗ್ಗೆ ಇರುವ ನಮ್ಮ ತಿಳುವಳಿಕೆಯ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅಪರಾೀಕರಣ ಹಾಗೂ ಅದರ ಪರಿಣಾಮವಾಗಿ ಕೆಲ ಕೃತ್ಯಗಳಿಗೆ ಶಿಕ್ಷೆ ವಿಸುವ ಬಗೆಗಿನ ಸಮರ್ಥನೆಯ ಮೌಲ್ಯವನ್ನೇ ತನಿಖಾತ್ಮಕ ದೃಷ್ಟಿಯಿಂದ ನೋಡಬೇಕಾಗುತ್ತದೆ.

ಶಿಕ್ಷೆಯ ಸಿದ್ಧಾಂತಗಳ ಬಗ್ಗೆ ತನಿಖೆ ಕೈಗೊಳ್ಳುವುದು ಅದರಲ್ಲೂ ಮುಖ್ಯವಾಗಿ ನಿರೋಧಾತ್ಮಕ ಮೌಲ್ಯದ ಬಗ್ಗೆ ಇಂಥ ತನಿಖೆ ನಡೆಸುವ ಆಸಕ್ತಿ ಆಕಸ್ಮಿಕವೂ ಅಲ್ಲ; ಉದ್ದೇಶಪೂರ್ವಕವೂ ಅಲ್ಲ. ಸೈದ್ಧಾಂತಿಕವಾಗಿ ಆಸಕ್ತಿ ಹುಟ್ಟಿಸುವ ಕೆಲ ಪ್ರಶ್ನೆಗಳ ಕಾರಣ ದಿಂದ ಹುಟ್ಟಿಕೊಂಡಿರುವುದು. ನರೋಟಿಕ್ ಡ್ರಗ್ಸ್ ಆ್ಯಂಡ್ ಸೈಕೊಟ್ರೋಫಿಕ್ ಸಬ್ಸಿಸ್ಟೆನ್ಸ್ ಕಾಯ್ದೆ- 1985 ಅಥವಾ ಎನ್‌ಡಿಪಿಎಸ್ ಕಾಯ್ದೆಯ ಬಗ್ಗೆ ಎದ್ದ ಪ್ರಶ್ನೆಗಳ ಹಿನ್ನೆಲೆಯಲ್ಲಿ ಈ ಆಸಕ್ತಿ ಬೆಳೆಯಿತು.
ಆರಂಭದಲ್ಲಿ ಎನ್‌ಡಿಪಿಎಸ್ ಕಾಯ್ದೆ ಪಂಜಾಬ್‌ನ ಮೇಲೆ ಬೀರಿದ ಪರಿಣಾಮವನ್ನು ನಾನು ಅಧ್ಯಯನ ಮಾಡತೊಡಗಿದೆ. ಇದರಲ್ಲಿ ವಿಚಾರಣೆಗೆ ಒಳಪಡಿಸಿದ ಪ್ರಾಥಮಿಕ ಅಂಶಗಳೆಂದರೆ, ಅಪರಾಧ ಶಾಸನಗಳ ಯಶಸ್ವಿ ಅಂಶಗಳು ಯಾವುವು ಹಾಗೂ ನಿರೋಧಾತ್ಮಕ ಕ್ರಮಗಳು ಅಂಥ ಯಶಸ್ಸಿಗೆ ಸೂಚಕವೇ? ಎನ್ನು ವುದು. ಹೌದು ಎಂದಾಗಿದ್ದರೆ. ಇಂಥ ನಿರೋಧಾತ್ಮಕ ಅಂಶಗಳಲ್ಲಿ ಯಾವುದು ಸೇರುತ್ತದೆ ಹಾಗೂ ಅದನ್ನು ಅಳೆಯುವುದು ಹೇಗೆ ಎಂಬ ಬಗ್ಗೆ ಮತ್ತಷ್ಟು ಆಳವಾದ ತನಿಖೆ ಕೈಗೊಳ್ಳುವುದು.
ದುರದೃಷ್ಟವಶಾತ್ ಕಾನೂನು ಪ್ರಕ್ರಿಯೆಯ ಅಸಂಬದ್ಧತೆ ಗಳಿಂದಾಗಿ, ಅದರಲ್ಲೂ ಮುಖ್ಯವಾಗಿ ಸಂಶೋಧನೆಯ ವಾಸ್ತವತೆಗಳ ಅಸಂಬದ್ಧತೆಯಿಂದಾಗಿ ಕೆಲ ಪ್ರಶ್ನೆಗಳನ್ನು ಕೈಬಿಡಬೇಕಾಯಿತು. ಆದರೆ ಕಾಲಕ್ರಮೇಣ, ಎನ್‌ಡಿಪಿಎಸ್ ಕಾಯ್ದೆಯನ್ನು ಮಾತ್ರ ಕೆಲ ನಿರ್ದಿಷ್ಟ ಅಪರಾಧ ಕೃತ್ಯಗಳನ್ನು ತಡೆಯುವ ನಿರೋಧಾತ್ಮಕ ಉದ್ದೇಶದಿಂದಲೇ ತಂದಿರುವುದು ನನಗೆ ಖಚಿತವಾಗಿ ತಿಳಿದುಬಂತು.

ಆದರೆ ನಿರೀಕ್ಷಿತ ಲಿತಾಂಶವನ್ನು ನೀಡುವಲ್ಲಿ ಇದು ವಿಲವಾಗಿರುವುದು ನನಗೆ ಆಸಕ್ತಿ ಹುಟ್ಟಿಸಿತು. ಇಂಥ ನಿರೋಧಾತ್ಮಕ ಕ್ರಮದ ಇತಿಮಿತಿಯನ್ನು ತೋರಿಸಿಕೊಟ್ಟಿತಲ್ಲದೇ, ಇಂಥ ಕ್ರಮದ ಸೈದ್ಧಾಂತಿಕ ತಿಳಿವಳಿಕೆಯ ಶೂನ್ಯತೆಯನ್ನೂ ಬಹಿರಂಗಗೊಳಿಸಿದೆ.
ಇತ್ತೀಚೆಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಭಾರತದಲ್ಲಿ 2015ರಲ್ಲಿ ಸಂಭವಿಸಿದ ಅಪರಾಧಗಳ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿತು. ಎಲ್ಲ ವರ್ಗದ ಅಪರಾಧಗಳಡಿ ಬಂಧನ ಹೆಚ್ಚಿರುವುದು ಕಂಡುಬರುತ್ತದೆ. ಒಟ್ಟು ಪ್ರಕರಣಗಳ ಸಂಖ್ಯೆಯೂ ಹೆಚ್ಚಿದ್ದು, ವಿವಿಧ ಅಕಾರಿಗಳು ಸ್ವಾೀನಪಡಿಸಿಕೊಂಡ ವಸ್ತುಗಳೂ ಹೆಚ್ಚಿವೆ. ಪಂಜಾಬ್ ಬಗ್ಗೆ ರಾಜ್ಯವಾರು ಅಂಕಿ ಅಂಶ ಲಭ್ಯವಿಲ್ಲವಾದರೂ, ದಾಖಲಾದ ಎನ್‌ಡಿಪಿಎಸ್ ಪ್ರಕರಣಗಳ ಸರಾಸರಿ ಸಂಖ್ಯೆ ಹೆಚ್ಚಿದೆ.
2015ರಲ್ಲಿ ಈ ಕಾಯ್ದೆಯಡಿ ವರದಿಯಾದ ಪ್ರಕರಣಗಳ ಸಂಖ್ಯೆ 50,976. ಈ ಪ್ರಮಾಣ 2014ರಲ್ಲಿ 46,923 ಇತ್ತು. 2015ರಲ್ಲಿ 59,625 ಮಂದಿಯನ್ನು ಬಂಸಲಾಗಿದೆ. ಇದು ಹಿಂದಿನ ವರ್ಷ ಕ್ಕಿಂತ 3,516 ಹೆಚ್ಚು. ಅದಾಗ್ಯೂ ಒಟ್ಟು ಶಿಕ್ಷೆ ಪ್ರಮಾಣ ಕೂಡಾ 2014ರಲ್ಲಿ 22,893 ಇದ್ದುದು, 2015ರಲ್ಲಿ 29,679ಕ್ಕೆ ಹೆಚ್ಚಿದೆ.
ಎನ್‌ಡಿಪಿಎಸ್ ಕಾಯ್ದೆ ಇತರ ಹಲವು ಕಾನೂನುಗಳ ಪೈಕಿ ಅತ್ಯಕ ಶಿಕ್ಷೆ ಪ್ರಮಾಣವನ್ನು ಹೊಂದಿದೆ. ಅಂದರೆ ಶೇ.77.2ರಷ್ಟು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. ಅಂತೆಯೇ ಗರಿಷ್ಠ ಬಾಕಿ ಇರುವ ಪ್ರಕರಣ ಕೂಡಾ ಈ ಕಾಯ್ದೆಯಡಿ ಅತ್ಯಕ ಎಂದರೆ ಶೇಕಡ 80.6ರ ಪ್ರಮಾಣದಲ್ಲಿದೆ. ಆದರೆ ಈ ಅಂಕಿ ಸಂಖ್ಯೆಗಳು, ಇಂಥ ನಿರೋಧಾತ್ಮಕ ಕಾನೂನುಗಳು ಕಳೆದ ಮೂರು ದಶಕಗಳ ಬಳಿಕ ಕೂಡಾ ವಿಲವಾಗಿರುವ ಬಗ್ಗೆ ಚಿಂತನೆಗೆ ಹಚ್ಚುತ್ತವೆ.

ಕಾನೂನಿನ ಶಾಸನಾತ್ಮಕ ಇತಿಹಾಸ
ಭಾರತದಲ್ಲಿ ಅಪರಾಧಶಾಸ ಸಿದ್ಧಾಂತಗಳ ಬಗ್ಗೆ ಅಧ್ಯಯನ ಶಿಷ್ಯವೇತನಗಳು ತೀರಾ ವಿರಳ. ಈ ಕಾರಣದಿಂದ ಅಪರಾಧ ಹಾಗೂ ಶಿಕ್ಷೆ ಕುರಿತ ಹೆಚ್ಚಿನ ಎಲ್ಲ ವ್ಯಾಖ್ಯಾನಗಳು ಪಾಶ್ಚಾತ್ಯ ಶೈಕ್ಷಣಿಕ ಬರಹಗಳನ್ನು ಆಧರಿಸಿದವು. ಇವು ನಮ್ಮ ಸಾಮಾಜಿಕ- ಆರ್ಥಿಕ ಪರಿಸ್ಥಿತಿಯಿಂದ ಕಿತ್ತುಹಾಕಿದವುಗಳು. ಈ ಸಿದ್ಧಾಂತಗಳ ಮೌಲ್ಯದ ಬಗೆಗಿನ ಚರ್ಚೆಗಳು ಹಾಗೂ ಅಪರಾಧ ಹಾಗೂ ಶಿಕ್ಷೆ ಬಗೆಗಿನ ಸಮರ್ಥನೆಗಳು ವಾಸ್ತವಕ್ಕಿಂತ ದೂರ ಇರುವಂಥವು
ಕಾಯ್ದೆಯ ಮೂಲ, ಕೆಲ ಅಂಶಗಳ ಬಗೆಗಿನ ಆಯ್ಕೆ ಮತ್ತಿತರ ಅಂಶಗಳ ಬಗ್ಗೆ ಸಂಸದೀಯ ಚರ್ಚೆಗೆ ಕಾರಣವಾಗಿತ್ತು. ಇದು ಇಂಥ ಶಾಸನ ರೂಪಿಸುವವರಿಗೆ ಇದ್ದ ಮೂಲ ಕಲ್ಪನೆಯ ಬಗ್ಗೆ ನಮಗೆ ಒಳನೋಟಗಳನ್ನು ನೀಡುತ್ತದೆ.

ಎನ್‌ಡಿಪಿಎಸ್ ಕಾಯ್ದೆಯ ಶಾಸನಾತ್ಮಕ ಇತಿಹಾಸವನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಅವಕಾಶ ನನಗೆ ದೊರೆಯಿತು. ಈ ಕಾಯ್ದೆಯ ಮೂಲ ಉದ್ದೇಶವನ್ನು ನಿರ್ಧರಿಸುವಾಗ ನಿರೋಧಾತ್ಮಕ ಕ್ರಮವಾಗಿ ಕಂಡುಕೊಳ್ಳಲಾಯಿತು. ಅಕ್ರಮ ಆರ್ಥಿಕತೆಯ ಸಮಸ್ಯೆಗಳನ್ನು ತಡೆಯುವ ಸಲುವಾಗಿ ಕಟ್ಟುನಿಟ್ಟಿನ ಶಿಕ್ಷೆಯನ್ನು ವಿಸಲು ನಿರ್ಧರಿಸಲಾಗಿತ್ತು.
ಈ ಮಸೂದೆ ಆಂಗೀಕಾರದ ವೇಳೆ ನಡೆದ ಸಂಸದೀಯ ಚರ್ಚೆಯನ್ನು ಅವಲೋಕಿಸಿದಾಗ, ಅದರಲ್ಲಿ ಬಳಸಿದ ಭಾಷೆಯ ಬಗ್ಗೆ ಆಸಕ್ತಿ ಭಗ್ನವಾಗುತ್ತದೆ. ಇಡೀ ಕಾಯ್ದೆಯುದ್ದಕ್ಕೂ ನಿರೋಧಾತ್ಮಕ ಪರಿಣಾಮ ಎಂಬ ಪದವನ್ನು ಪದೇ ಪದೇ ಬಳಸಲಾಗಿದೆ. ಕಟ್ಟುನಿಟ್ಟಿನ ಶಿಕ್ಷಾ ಕ್ರಮಗಳ ಮೂಲಕ ಅಕ್ರಮ ಕಳ್ಳಸಾಗಣೆ ದಂಧೆ ಅಥವಾ ಜಾತಿ ಆಧರಿತ ಹಿಂಸೆ ತಡೆಯುವ ಉದ್ದೇಶವನ್ನು ವ್ಯಕ್ತಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂಥ ಅಪರಾಧ ಕಾನೂನು ರೂಪಿಸುವ ವೇಳೆ ಪ್ರಮುಖವಾಗಿ ಈ ಮೂರು ಅಂಶಗಳನ್ನು ಪರಿಗಣಿಸಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಬೇಕಾಗುತ್ತದೆ. ಅವುಗಳೆಂದರೆ ಅಪರಾಧದ ತೀವ್ರತೆ, ನಿರ್ದಿಷ್ಟತೆ ಹಾಗೂ ಶಿಕ್ಷೆಯ ವೇಗ. ಅಂದರೆ ಈ ಕಾಯ್ದೆಯ ಪರಿಣಾಮವಾಗಿ ಅಂಥ ಕೃತ್ಯದಿಂದ ವಿಮುಖರಾಗುತ್ತಾರೆಯೇ? ಕೆಲವು ಕಠಿಣ ಶಿಕ್ಷೆಯ ಮೂಲಕ ತಡೆಯುವಂಥದ್ದಾದರೆ, ಮತ್ತೆ ಕೆಲವು ಅವುಗಳ ಸಮರ್ಪಕ ಅನುಷ್ಠಾನದ ಮೂಲಕ ನಿರೋಸುವಂಥದ್ದು.

ಉದಾಹರಣೆಗೆ 1985ರಲ್ಲಿ ನಡೆದ ಸಂಸದೀಯ ಚರ್ಚೆಯಲ್ಲಿ, ದೇಶದಲ್ಲಿ ಮಾದಕ ವಸ್ತು ಕಳ್ಳಸಾಗಣೆಯನ್ನು ತಡೆಯಬೇಕಾದರೆ ಕಠಿಣ ಶಿಕ್ಷೆ ವಿಸಬೇಕು ಎಂದು ಪ್ರತಿಪಾದಿಸಿದರು. ಅಚ್ಚರಿಯ ವಿಷಯವೆಂದರೆ ಈ ಕಾಯ್ದೆಯನ್ನು ಜಾರಿಗೊಳಿಸಿದ್ದು ದೇಶದಲ್ಲಿ ಡ್ರಗ್ಸ್ ದಂಧೆ ವ್ಯಾಪಕವಾಗಿಲ್ಲದ ಅವಯಲ್ಲಿ. ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು. ಈ ಕಾನೂನು ವೈಯಕ್ತಿಕ ಗ್ರಾಹಕರನ್ನು ಹಾಗೂ ಅಲ್ಪಾವಯಿಂದ ಅನುಸರಿಸುವವರನ್ನು ಶಿಕ್ಷಿಸುತ್ತದೆ. ಅಷ್ಟೇ ಪ್ರಬಲವಾದ ಶಿಕ್ಷೆ ಅವರಿಗೂ ಅನ್ವಯವಾಗುತ್ತದೆಯೇ ಎನ್ನುವುದು ಇದರಲ್ಲಿ ಸ್ಪಷ್ಟವಾಗಿಲ್ಲ.

ತೀವ್ರತೆ ಅಥವಾ ನಿಶ್ಚಿತತೆ
ಎನ್‌ಡಿಪಿಎಸ್ ಕಾಯ್ದೆಯ ಸನ್ನಿವೇಶದಲ್ಲಿ, ನಿರೋಧಾತ್ಮಕತೆಯ ಎರಡು ಪ್ರಮುಖ ಆಯಾಮಗಳ ಸುತ್ತ ಗೊಂದಲ ಸುತ್ತುತ್ತದೆ. ಒಂದು ಶಿಕ್ಷೆಯ ತೀವ್ರತೆ; ಇನ್ನೊಂದು ನಿಶ್ಚಿತತೆ. ದುರದೃಷ್ಟವಶಾತ್, ಕಾನೂನು ಜಾರಿಗೆ ಬಂದು ಮೂರು ದಶಕಗಳಾಧರೂ, ಈ ಪ್ರಶ್ನೆಗಳನ್ನು ಇನ್ನೂ ಬಗೆಹರಿಸಿಲ್ಲ ಅಥವಾ ಯಾವ ವಿಧದಲ್ಲಿ ಮತ್ತು ಏನನ್ನು ತಡೆಯಲು ಶಾಸನ ಉದ್ದೇಶಿಸಿದೆ ಎನ್ನುವ ಅಂಶದ ಬಗ್ಗೆ ಬೆಳಕು ಚೆಲ್ಲಿಲ್ಲ.
ಎನ್‌ಡಿಪಿಎಸ್ ಕಾಯ್ದೆ ಕಳ್ಳಸಾಗಣೆ ದಂಧೆಯನ್ನು ತಡೆಯಲು ಹೊರಟಿದೆಯೇ ಅಥವಾ ಕೆಲ ಬಗೆಯ ಡ್ರಗ್ಸ್ ಬಳಕೆಯನ್ನು ತಡೆಯಲು ಹೊರಟಿದೆಯೇ ಎನ್ನುವುದು ಅಸ್ಪಷ್ಟ. ಅಪರಾಧ ಕಾಯ್ದೆ ಚೌಕಟ್ಟಿನಲ್ಲಿ ನಡೆಯುವ ಮಾದಕ ವ್ಯಸನದ ಬಗ್ಗೆ ಇದು ಗಮನ ಹರಿಸಿಲ್ಲ. ಯಾವ ಸಾಮಾಜಿಕ-ಆರ್ಥಿಕ ವಾತಾವರಣದಲ್ಲಿ ಡ್ರಗ್ಸ್ ದಂಧೆ ಬೆಳೆಯುತ್ತದೆ ಎನ್ನುವುದನ್ನೂ ಇದು ನಿರ್ಲಕ್ಷಿಸಿದೆ. ಈ ಕಾರಣದಿಂದ ಮಾದಕ ವಸ್ತು ದಂಧೆ ಭಾರತದ ಕೆಲ ಪ್ರದೇಶಗಳಲ್ಲಿ ಮುಂದುವರಿದಿದೆ. ಇವು ಸಾಮಾನ್ಯವಾಗಿ ಬಂಧನ ಹಾಗೂ ಮಾದಕವಸ್ತು ವಶಪಡಿಸಿಕೊಂಡ ಅಂಕಿ ಅಂಶಗಳನ್ನು ತಿರುಚುತ್ತವೆ.
ಇತ್ತೀಚಿನ ಎನ್‌ಸಿಆರ್‌ಬಿ ಅಂಕಿ ಅಂಶಗಳ ಪ್ರಕಾರ, ಮಾದಕ ವಸ್ತು ಬಳಕೆ ವ್ಯಾಪಕವಾಗಿರುವ ಕೆಲ ನಿರ್ದಿಷ್ಟ ಪ್ರದೇಶಗಳಾದ ಪಂಜಾಬ್ ಅಥವಾ ಈಶಾನ್ಯ ರಾಜ್ಯಗಳಲ್ಲಿ ಕೂಡಾ ಅಪರಾಧ ಸಂಖ್ಯೆ ನಿಗದಿತ ಪ್ರಮಾಣದಲ್ಲೇ ಇದೆ ಅಥವಾ ತೀರಾ ಅಲ್ಪ ಏರಿಕೆ ಕಂಡಿದೆ. ಮಾದಕ ವಸ್ತು ನಿಯಂತ್ರಣ ಬ್ಯೂರೊ ಕೂಡಾ ಇದಕ್ಕೆ ತಾಳೆಯಾಗುತ್ತವೆ.

ನಿರೋಧಾತ್ಮಕ ಕ್ರಮಗಳು
ಈ ಕಾಯ್ದೆಯ ನಿರೋಧಾತ್ಮಕ ಪರಿಣಾಮಗಳ ಬಗ್ಗೆ ಮೌಲ್ಯಮಾಪನಕ್ಕೆ ನಿಖರವಾದ ಮಾನದಂಡಗಳ ಬಗ್ಗೆ ಒಮ್ಮತ ಇಲ್ಲದಿರುವುದು ದುರದೃಷ್ಟಕರ. ಅಕ ಪ್ರಮಾಣದ ಪ್ರಕರಣಗಳಲ್ಲಿ ಶಿಕ್ಷೆಯಾಗುವುದು ನಿರೋಧಾತ್ಮಕ ಕ್ರಮವನ್ನು ಅಳೆಯುವ ಮಾನದಂಡವಾಗಿದ್ದರೂ, ಶಾಸನದ ಯಶಸ್ಸನ್ನು ಅವು ಬಿಂಬಿಸುವುದಿಲ್ಲ. ಉದಾಹರಣೆಗೆ ಎನ್‌ಡಿಪಿಎಸ್ ಕಾಯ್ದೆಯಡಿ, ಅಂಕಿ ಅಂಶಗಳಿಗೆ ಕೊರತೆ ಇಲ್ಲ. ಈ ಕಾಯ್ದೆಯ ಬಳಕೆಯಿಂದ ಎಷ್ಟು ಮಂದಿಗೆ ಪ್ರಯೋಜನವಾಗಿದೆ, ಪ್ರಸ್ತುತ ವೇದಿಕೆಗಳಲ್ಲಿ ಎಷ್ಟರ ಮಟ್ಟಿಗೆ ಇದು ಯಶಸ್ವಿಯಾಗಿ ಮೌಲ್ಯಮಾಪನವಾಗಿದೆ ಎನ್ನುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಅತ್ಯಂತ ಕಠಿಣ ಸವಾಲು ಎಂದರೆ, ಅಂಥ ಕಾನೂನುಗಳ ಪರಿಣಾಮವನ್ನು ತಿಳಿಯುವುದು. ಮೇಲೆ ಉಲ್ಲೇಖಿಸಿರುವ ಅಂಶಗಳು ವಾಸ್ತವ ಅಂಶಗಳ ಅನ್ವಯ ಮಾಪನ ಮಾಡುವುದು ಸಾಧ್ಯವಿಲ್ಲವಾದದ್ದರಿಂದ, ನಿರೋಧಾತ್ಮಕ ಅಂಶವನ್ನು ಸಮರ್ಥಿಸುವುದನ್ನು ಮುಂದುವರಿಸಬೇಕೇ ಎಂಬ ಬಗ್ಗೆ ಮರು ಚಿಂತನೆ ನಡೆಸುವ ಅಗತ್ಯತೆ ಇದೆ.
ಇನ್ನೊಂದು ಪ್ರಮುಖ ಅಂಶವೆಂದರೆ, ಕಠಿಣ ಕಾನೂನು ಹಾಗೂ ಕಠಿಣ ಶಿಕ್ಷೆ, ಸಾಮಾಜಿಕ ನಡವಳಿಕೆಯನ್ನು ಬದಲಿಸುತ್ತದೆ ಎನ್ನುವ ಕಾಯ್ದೆಯ ಮೂಲಭೂತ ದೃಷ್ಟಿಕೋನವನ್ನೇ ಬುಡಮೇಲು ಮಾಡುವಂಥದ್ದು. ಕಾಯ್ದೆಯನ್ನು ವಿನ್ಯಾಸಗೊಳಿಸುವ ಮೂಲ ಉದ್ದೇಶವೇ ಬದಲಾವಣೆಯನ್ನು ತರುವುದು. ಸನಿಹದ ಮನೋರಂಜನೆಗಾಗಿ ಅಪರಾಧ ಎಸಗುವುದನ್ನು ದೂರ ಅಂತರದ ಅಪಾಯ ಮರೆಮಾಚುತ್ತದೆ ಎಂಬ ಕಾರಣಕ್ಕೆ ಪ್ರಮುಖವಾಗಿ ನಿರೋಧಾತ್ಮಕ ಅಂಶವನ್ನು ಸೈದ್ಧಾಂತಿಕವಾಗಿ ಬಳಸುವುದನ್ನೇ ಟೀಕಿಸಲಾಗುತ್ತದೆ. ಅಂದರೆ ವೈಯಕ್ತಿಕ ಕೃತ್ಯಗಳ ಪರಿಗಣನೆಯು ಕಾನೂನಿನ ನಡಾವಳಿಯ ಅಂಶಗಳಾಗಬೇಕಿಲ್ಲ.
ಲಾಭದಾಯಕ ದಂಧೆಯಾದ ಡ್ರಗ್ ಮಾರ್ಕೆಟ್ ಶಿಥಿಲವಾಗುತ್ತಿರುವ ಆರ್ಥಿಕ ಪರಿಸ್ಥಿತಿಗೆ ಪರ್ಯಾಯ ಎಂಬ ಭರವಸೆಯನ್ನು ಮೂಡಿಸಿರುವ ಹಿನ್ನೆಲೆಯಲ್ಲಿ ಮತ್ತು ಮಾದಕ ವಸ್ತು ವ್ಯಸನದ ಆಳವಾದ ಸಮಸ್ಯೆಗಳನ್ನು ಮಟ್ಟಹಾಕಲು ನೀತಿಮಟ್ಟದಲ್ಲಿ ಹಸ್ತಕ್ಷೇಪದ ಅಗತ್ಯವಿರುವುದರಿಂದ, ಕಟ್ಟುನಿಟ್ಟಿನ ಕಾನೂನುಗಳು ಪರಿಣಾಮಕಾರಿ ನಿರೋಧಾತ್ಮಕ ಕ್ರಮವಾಗಿ ಕಾರ್ಯ ನಿರ್ವಹಿಸುತ್ತವೆ.

ಇಂತಹ ನಿರೋಧಾತ್ಮಕ ಕ್ರಮವು ಶಿಕ್ಷೆಯ ಸಮರ್ಥನೆಗೆ ಅರ್ಹವೇ ಹಾಗೂ ಇಂತಹ ನಿರೋಧಾತ್ಮಕ ಕ್ರಮಗಳನ್ನು ಸೂಚಿಸಲು ಸೂಕ್ತ ಮಾಪಕಗಳು ಇವೆಯೇ ಎನ್ನುವ ಎರಡೂ ಪ್ರಶ್ನೆಗಳೂ ಸೈದ್ಧಾಂತಿಕವಾಗಿವೆ. ಆದರೆ ಯಾವುದೇ ಹಂತದಲ್ಲಿ ನೋಡಿದರೂ, ಇವು ನಿರೀಕ್ಷಿತ ಲಿತಾಂಶ ನೀಡುವಲ್ಲಿ ವಿಲವಾಗಿವೆ ಎಂದೇ ಹೇಳಬೇಕಾಗುತ್ತದೆ.
ಈ ಶಾಸನದ ಜಾರಿ ಅಥವಾ ಅನುಷ್ಠಾನದ ಬಗ್ಗೆ ಪ್ರತಿ ಚರ್ಚೆಗೆ ಖಂಡಿತವಾಗಿಯೂ ಅವಕಾಶ ಇದೆ. ಅದಾಗ್ಯೂ ಕಾನೂನಿನ ಧನಾತ್ಮಕ ಅಂಶಗಳ ಬಗ್ಗೆ ಗಂಭೀರವಾಗಿ ಪರಿಗಣಿಸದಿದ್ದರೂ, ಈ ಶಾಸನದ ಉದ್ದೇಶ, ಚೌಕಟ್ಟು ಮತ್ತಿತರ ಅಂಶಗಳ ಬಗ್ಗೆ ಗಮನ ಹರಿಸದೇ ಇದರ ನಿರೋಧಾತ್ಮಕ ಎಂಬ ಅಂಶ ಮಾತ್ರ ತೀರಾ ಗೊಂದಲಕಾರಿ ಎನ್ನಬಹುದು. ಇದರ ಜತೆಗೆ ಸಾಮಾಜಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೇ ರೂಪಿಸಿದ ಕಾನೂನು, ಆ ಸಮಸ್ಯೆಗೆ ಪರಿಹಾರ ನೀಡುವಲ್ಲಿ ದುರ್ಬಲವಾಗುತ್ತವೆ ಮತ್ತು ಸಾಮಾಜಿಕ ಬದಲಾವಣೆ ಅಥವಾ ಅಪರಾಧ ತಡೆಯುವಲ್ಲಿ ವಿಲವಾಗುತ್ತವೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಎಂದರೆ, ಸಮಸ್ಯೆಯನ್ನು ಸಮರ್ಪಕವಾಗಿ ಅರ್ಥ ಮಾಡಿಕೊಳ್ಳುವುದು. ಈ ಕಾರ್ಯವನ್ನು ನಿರ್ವಹಿಸುವಲ್ಲಿ ಎನ್‌ಡಿಪಿಎಸ್ ಕಾಯ್ದೆ ವಿಲವಾಗಿದೆ ಎಂಬ ಭಾವನೆ ಸಹಜವಾಗಿಯೇ ಮೂಡುತ್ತದೆ. ಈ ಹಿನ್ನೆಲೆಯಲ್ಲಿ ಬಹುಶಃ ನಮ್ಮ ಅಪರಾಧ ಕಾನೂನುಗಳ ದೃಷ್ಟಿಕೋನದ ಕಾರ್ಯತಂತ್ರವನ್ನೇ ಬದಲಿಸುವ ಅಗತ್ಯವಿದೆ.


 

share
ಸಾಕ್ಷಿ
ಸಾಕ್ಷಿ
Next Story
X