ಮೊದಲ ದಿನ ಭಾರತಕ್ಕೆ ಹಾರ್ದಿಕ್ ಪಾಂಡ್ಯ ಆಸರೆ
ಚತುರ್ದಿನ ಟೆಸ್ಟ್ ಪಂದ್ಯ
ಬ್ರಿಸ್ಬೇನ್, ಸೆ.15: ಆಸ್ಟ್ರೇಲಿಯ ಎ ತಂಡದ ವಿರುದ್ಧ ಗುರುವಾರ ಇಲ್ಲಿ ಆರಂಭವಾದ ಎರಡನೆ ಚತುರ್ದಿನ ಟೆಸ್ಟ್ ಪಂದ್ಯದಲ್ಲಿ ಔಟಾಗದೆ 79 ರನ್ ಗಳಿಸಿದ ಹಾರ್ದಿಕ್ ಪಾಂಡ್ಯ ಭಾರತ ಎ ತಂಡಕ್ಕೆ ಆಸರೆಯಾಗಿದ್ದಾರೆ.
ಮಳೆಬಾಧಿತ ಮೊದಲ ದಿನದಾಟ ಕೊನೆಗೊಂಡಾಗ ಭಾರತ 9 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿದೆ. ಇಲ್ಲಿನ ಅಲನ್ ಬಾರ್ಡರ್ ಫೀಲ್ಡ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮಂದ ಬೆಳಕು ಹಾಗೂ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು. ಈ ನಡುವೆ ಆತಿಥೇಯ ಆಸ್ಟ್ರೇಲಿಯ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಭಾರತದ ಪರವಾಗಿ ಪಾಂಡ್ಯ ಪ್ರಮುಖ ಕಾಣಿಕೆ ನೀಡಿದರೆ, ಬಾಲಂಗೋಚಿ ಜಯಂತ್ ಯಾದವ್(28 ರನ್) ಎರಡಂಕೆ ದಾಟಿದರು.
ದಕ್ಷಿಣ ಆಸ್ಟ್ರೇಲಿಯದ ವೇಗಿ ಕೇನ್ ರಿಚರ್ಡ್‌ಸನ್(2-27) ಬೇಗನೆ ಫೈಝ್ ಫಝಲ್(0) ವಿಕೆಟ್ ಕಬಳಿಸಿದರು. ಕರುಣ್ ನಾಯರ್(1) ರನೌಟಾದರು. ಆಸ್ಟ್ರೇಲಿಯ 11 ರನ್‌ಗೆ 4 ವಿಕೆಟ್ ಕಳೆದುಕೊಂಡ ಭಾರತ ಎ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಭಾರತದ ನಾಯಕ ನಮನ್ ಓಜಾ(19) ತಂಡವನ್ನು ಆಧರಿಸಲು ವಿಫಲರಾದರು.
Next Story





