ಲಿಬಿಯದಲ್ಲಿ ಒತ್ತೆ ಸೆರೆಯಲ್ಲಿದ್ದ ಭಾರತೀಯರಿಬ್ಬರ ರಕ್ಷಣೆ: ಸುಶ್ಮಾ
ಹೊಸದಿಲ್ಲಿ, ಸೆ.15: ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಲಿಬಿಯದಲ್ಲಿ ಒತ್ತೆ ಸೆರೆಯಲ್ಲಿದ್ದ ಇಬ್ಬರು ಭಾರತೀಯರನ್ನು ರಕ್ಷಿಸಲಾಗಿದೆಯೆಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಇಂದು ತಿಳಿಸಿದ್ದಾರೆ.
2015ರ ಜು.29ರಿಂದ ಲಿಬಿಯದಲ್ಲಿ ಒತ್ತೆ ಸೆರೆಯಲ್ಲಿದ್ದ ಆಂಧ್ರ ಪ್ರದೇಶದ ಟಿ.ಗೋಪಾಲಕೃಷ್ಣನ್ ಹಾಗೂ ತೆಲಂಗಾಣದ ಸಿ.ಬಲರಾಮ ಕೃಷ್ಣನ್ ಎಂಬವರನ್ನು ರಕ್ಷಿಸಲಾಗಿದೆಯೆಂದು ತಿಳಿಸಲು ತಾನು ಸಂತೋಷ ಪಡುತ್ತೇನೆಂದು ಅವರು ಟ್ವೀಟಿಸಿದ್ದಾರೆ.
ಲಿಬಿಯದ ಸಿರ್ತೆ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಅವರನ್ನು ಐಸಿಸ್ ಉಗ್ರರು ಅಪಹರಿಸಿದ್ದರು.
Next Story





