ಸೆ.17-18: ನ್ಯಾಶನಲ್ ನ್ಯುರೋ ಮಿಷನ್ ‘ನ್ಯುರೋವಸ್ಕೋನ್’ ಸಮಾವೇಶ
ಉಡುಪಿ, ಸೆ.15: ನ್ಯಾಶನಲ್ ನ್ಯುರೋ ಮಿಷನ್ ಉಡುಪಿ-ಮಣಿಪಾಲ ಮತ್ತು ಉಡುಪಿ ಆದರ್ಶ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಸೆ.17 ಮತ್ತು 18ರಂದು ಸೆರೆಬ್ರೊ ವ್ಯಾಸ್ ಕುಲಾರ್ ಸೊಸೈಟಿ ಆಫ್ ಇಂಡಿಯಾ ಇದರ 16ನೆ ವಾರ್ಷಿಕ ಸಮಾವೇಶ ‘ನ್ಯುರೋವಸ್ಕೋನ್-2016’ವು ಮಣಿಪಾಲದ ಕಂಟ್ರಿ ಇನ್ ಹೊಟೇಲನ ಸಭಾಂಗಣದಲ್ಲಿ ನಡೆಯಲಿದೆ.
ದೇಶ ವಿದೇಶಗಳ ನರರೋಗ ಶಸ್ತ್ರ ಚಿಕಿತ್ಸಾ ತಜ್ಞರು ನರರೋಗ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಇತ್ತೀಚೆಗೆ ಆವಿಷ್ಕರಿಸಲ್ಪಟ್ಟ ನೂತನ ವಿಚಾರ ಸಂಶೋಧನೆಗಳನ್ನು ಹಾಗೂ ತಂತ್ರಜ್ಞಾನದ ಬಗ್ಗೆ ವಿಸ್ತೃತ ಚರ್ಚೆ ಈ ಸಮಾವೇಶದಲ್ಲಿ ನಡೆಸಲಿದ್ದಾರೆ ಎಂದು ಸಮಾವೇಶದ ಸಂಘಟನಾ ಕಾರ್ಯದರ್ಶಿ ನ್ಯುರೋ ಸರ್ಜನ್ ಡಾ.ಜಸ್‌ಪ್ರೀತ್ ಸಿಂಗ್ ದಿಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸೆ.17ರಂದು ಸಂಜೆ 6ಕ್ಕೆ ನಡೆಯುವ ಸಮಾವೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದಾರೆ. ಅಂತಾರಾಷ್ಟ್ರೀಯ ನರರೋಗ ತಜ್ಞ ಫಿನ್‌ಲ್ಯಾಂಡ್‌ನ ಪ್ರೊ.ಜುಹಾ ಹರ್ನೆಸ್‌ನಿಮಿ, ಜಪಾನ್‌ನ ಪ್ರೊ.ಹಿರೇಟೋಶಿ ಸಾನೋ ಹಾಗೂ ಇಂಗ್ಲೆಂಡನ ಡಾ.ಅನಿಲ್ ಗೋಲ್ಕರ್ ಉಪನ್ಯಾಸ ನೀಡಲಿರುವರು ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾವೇಶದ ಅಧ್ಯಕ್ಷ ನರರೋಗ ಶಸ್ತ್ರಚಿಕಿತ್ಸಾ ತಜ್ಞ ಪ್ರೊ.ಎ.ರಾಜಾ, ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್, ಡಾ.ಗಣೇಶ್ ಕುಮಾರ್ ಮನೋಹರನ್ ಉಪಸ್ಥಿತರಿದ್ದರು.





