ಕೊಲ್ಲೂರು, ಸೆ.15: ಎದೆನೋವಿನ ಚಿಕಿತ್ಸೆಗೆ ಸೆ.14ರಂದು ಬೆಳಗ್ಗೆ ವಂಡ್ಸೆಯ ಐತಾಳ್ ಕ್ಲಿನಿಕ್‌ಗೆ ಹೋಗಿದ್ದ ಕೆರಾಡಿ ಗ್ರಾಮದ ಹಯ್ಯಾಂಗಾರು ನಿವಾಸಿ ಗೋವಿಂದ ನಾಯ್ಕ ಎಂಬವರ ಪತ್ನಿ ರತ್ನಾ ನಾಯ್ಕ(56) ಎಂಬವರು ಕ್ಲಿನಿಕ್‌ನಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.