ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಮಣಿಪಾಲ, ಸೆ.15: ಹಿರೇಬೆಟ್ಟು ಗ್ರಾಮದ ವಿದ್ಯಾರಣ್ಯ ನಗರ ನಿವಾಸಿ ವೆಂಕಟೇಶ್ ಪ್ರಭು(70) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಸೆ.14ರಂದು ರಾತ್ರಿ ವೇಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರೆಂದು ತಿಳಿದು ಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಜೆಕಾರು: ವಿಪರೀತ ಸಾಲ ಮಾಡಿ ಆರ್ಥಿಕ ಮುಗ್ಗಟ್ಟಿನಿಂದ ಜೀವನದಲ್ಲಿ ಜಿಗುಪ್ಸೆಗೊಂಡ ದೊಂಡೆರಂಗಡಿ ಕುಕ್ಕುಜೆಯ ಬಾಬು ಶೆಟ್ಟಿ ಎಂಬವರ ಮಗ ವಿಶ್ವನಾಥ ಶೆಟ್ಟಿ(42)ಸೆ.14ರಂದು ಮನೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





