ಅಂಬೇಡ್ಕರ್ ನಿವಾಸ ಯೋಜನೆಗೆ ಅರ್ಜಿ ಆಹ್ವಾನ
ಉಡುಪಿ, ಸೆ.15: ಇಲ್ಲಿನ ನಗರಸಭಾ ವ್ಯಾಪ್ತಿಯಲ್ಲಿ 2016-17ನೆ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಮನೆ ನಿರ್ಮಿಸಲು ಸ್ವಂತ ನಿವೇಶನ ಹೊಂದಿದ ಮಹಿಳೆ (ಗಂಡನ ಹೆಸರಿನಲ್ಲಿ ನಿವೇಶನ ಇದ್ದರೆ ಗಂಡನ ಒಪ್ಪಿಗೆ ಪತ್ರದೊಂದಿಗೆ), ವಿಧುರ, ಅಂಗವಿಕಲ ಹಾಗೂ ಹಿರಿಯ ನಾಗರಿಕರು ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಹ ಫಲಾನುಭವಿಗಳು ಸೂಕ್ತ ದಾಖಲೆಗಳೊಂದಿಗೆ ವಸತಿ ಸೌಲಭ್ಯ ಪಡೆಯಲು ನಗರಸಭಾ ಕಚೇರಿಗೆ ಅ.14ರೊಳಗೆ ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ನಗರಸಭಾ ಪೌರಾಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ನಾಳೆ ಬೀಚ್ ಕ್ಲೀನಿಂಗ್ ಮೆಷಿನ್ ಉದ್ಘಾಟನೆ
ಉಡುಪಿ, ಸೆ.15:ರಾಜ್ಯ ಸರಕಾರದ ಚ್ಯಾಲೆಂಜ್ ಫಂಡ್ ಅನುದಾನದಲ್ಲಿ ಖರೀದಿಸಿದ ‘ಬೀಚ್ ಕ್ಲೀನಿಂಗ್ ಮೆಷಿನ್’ನ ಉದ್ಘಾಟನೆ ಸೆ.17ರಂದು ಸಂಜೆ 6ಕ್ಕೆ ಮಲ್ಪೆಬೀಚ್‌ನಲ್ಲಿ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮೆಷಿನ್‌ನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





