Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕನ್ನಡದ ಮೇಲಿನ ಪ್ರೇಮವೆಂದರೆ ತಮಿಳರನ್ನು...

ಕನ್ನಡದ ಮೇಲಿನ ಪ್ರೇಮವೆಂದರೆ ತಮಿಳರನ್ನು ದ್ವೇಷಿಸುವುದಲ್ಲ

ವಾರ್ತಾಭಾರತಿವಾರ್ತಾಭಾರತಿ16 Sept 2016 12:14 AM IST
share
ಕನ್ನಡದ ಮೇಲಿನ ಪ್ರೇಮವೆಂದರೆ ತಮಿಳರನ್ನು ದ್ವೇಷಿಸುವುದಲ್ಲ

ಸರಕಾರಗಳನ್ನು ಜನರು ಆರಿಸಿರಬಹುದು. ಆದರೆ ಸರಕಾರದ ತೀರ್ಮಾನಗಳು ಮಾತ್ರ ಜನರ ತೀರ್ಮಾನವಾಗಬೇಕು ಎಂದೇನಿಲ್ಲ. ಆದುದರಿಂದಲೇ ಒಂದು ದೇಶದ ಅಥವಾ ಒಂದು ರಾಜ್ಯದ ಸರಕಾರದ ನಿರ್ಧಾರ ಅಥವಾ ಧೋರಣೆಗಳನ್ನು ಆ ನಾಡಿನ ಜನರ ಧೋರಣೆಯೆಂದು ಭಾವಿಸಿ ಅವರನ್ನು ದ್ವೇಷಿಸುವಂತಾಗಬಾರದು. ಅಂತಿಮವಾಗಿ ಎರಡು ದೇಶಗಳನ್ನು ಅಥವಾ ರಾಜ್ಯಗಳನ್ನು ಪ್ರತಿನಿಧಿಸುವುದು ಅಲ್ಲಿಯ ನೃತ್ಯ, ಕ್ರೀಡೆ, ವಿಜ್ಞಾನ, ಪ್ರಗತಿಪರ ಚಿಂತನೆ ಇತ್ಯಾದಿಗಳು ಮಾತ್ರ. ಇದು ಪಾಕಿಸ್ತಾನಕ್ಕೆ ಸಂಬಂಧಿಸಿಯೂ ಅನ್ವಯವಾಗುತ್ತದೆ. ಹಾಗೆಯೇ ನಮ್ಮ ನೆರೆಯ ರಾಜ್ಯ ತಮಿಳುನಾಡಿಗೆ ಸಂಬಂಧಿಸಿಯೂ ಅನ್ವಯವಾಗುತ್ತದೆ. ಸರಕಾರದ ರಾಜಕೀಯ ನಿರ್ಧಾರಗಳು ದೇಶಗಳನ್ನು, ರಾಜ್ಯಗಳನ್ನು ವಿಭಜಿಸುತ್ತ ಹೋದರೆ, ಜನಸಾಮಾನ್ಯರ ಚಟುವಟಿಕೆಗಳು ಅವುಗಳನ್ನು ಬೆಸೆಯುತ್ತ ಹೋಗುತ್ತವೆ. ಈ ಹಿನ್ನೆಲೆಯಲ್ಲಿಯೇ ಇತ್ತೀಚೆಗೆ ರಮ್ಯಾ ಅವರು, ಪಾಕಿಸ್ತಾನದ ಜನರು ಒಳ್ಳೆಯವರು ಎಂಬ ಹೇಳಿಕೆಗಳನ್ನು ನೀಡಿದ್ದರು. ಅದಕ್ಕೆ ವಿರೋಧ ವ್ಯಕ್ತಪಡಿಸಿದವರೆಲ್ಲ ಒಂದು ಸರಕಾರ, ಒಂದು ಪಕ್ಷದ ಹಿನ್ನೆಲೆಯವರಾಗಿರುವುದರಿಂದ ಜನಸಾಮಾನ್ಯರ ಒಳಮನಸ್ಸು ಅವರಿಗೆ ಅರ್ಥವಾಗಲಿಲ್ಲ. ಪಾಕಿಸ್ತಾನದ ಖ್ಯಾತ ಹಾಡುಗಾರರಿಗೆ ಭಾರತದಲ್ಲಿ ಅಭಿಮಾನಿಗಳಿದ್ದಾರೆ. ಭಾರತದ ಕ್ರಿಕೆಟ್ ತಾರೆಯರಿಗೆ ಪಾಕಿಸ್ತಾನದಲ್ಲಿ ಅಪಾರ ಅಭಿಮಾನಿಗಳಿದ್ದಾರೆ.

ಇಲ್ಲಿಯ ಸಿನೆಮಾಗಳನ್ನು ಅಲ್ಲಿಯ ಜನರು ಮುಗಿಬಿದ್ದು ನೋಡುತ್ತಾರೆ. ಅಲ್ಲಿಯ ಜನರೂ ನಾವು ಅನುಭವಿಸುವ ಸಮಸ್ಯೆಗಳನ್ನೇ ಅನುಭವಿಸುತ್ತಿರುತ್ತಾರೆ. ಬೆಲೆಯೇರಿಕೆಯಿಂದ ಅವರೂ ನಿಟ್ಟುಸಿರು ಬಿಡುತ್ತಾರೆ. ನಾವೂ ಕೂಡ. ಹಾಗೆಯೇ ದುಡಿಮೆ, ಬೆವರು, ಸಂಕಟ, ನೋವು, ಖುಷಿ ಎಲ್ಲವೂ ಒಂದೇ ರೀತಿಯಿರುತ್ತವೆ. ಗಡಿಯಲ್ಲಿ ಯುದ್ಧವಾದಾಕ್ಷಣ ಅಥವಾ ಕಾವೇರಿ ವಿವಾದ ಸ್ಫೋಟವಾದಾಕ್ಷಣ ಬೇರೆ ದೇಶದ ಅಥವಾ ಬೇರೆ ರಾಜ್ಯದ ಶ್ರೀಸಾಮಾನ್ಯರನ್ನು ಶತ್ರುವಿನಂತೆ ನೋಡುವ ಜನರು ಇದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಅವರು ಅಲ್ಲಿನ ಸರಕಾರದ ಬಲಿಪಶುಗಳೇ ಹೊರತು ಪ್ರತಿನಿಧಿಗಳಲ್ಲ ಎನ್ನುವುದನ್ನು ನಾವು ಕಂಡುಕೊಂಡಾಗ ಮಾತ್ರ ಅನಗತ್ಯ ಭಾವೋದ್ವೇಗದಿಂದ ಸಂಭವಿಸುವ ನಾಶ, ನಷ್ಟಗಳಿಂದ ಪಾರಾಗಬಹುದು.

   ಕಾವೇರಿ ವಿವಾದ ಸ್ಫೋಟವಾದಾಗಲೆಲ್ಲ ಬಲಿಪಶುಗಳಾಗುವುದು ಬೆಂಗಳೂರಿನಲ್ಲಿ ಬದುಕು ಹುಡುಕಿಕೊಂಡು ಬಂದ ಅಮಾಯಕ ತಮಿಳರು. ಇವರಿಗೆ ಥಳಿಸಿದರೆ, ಇವರನ್ನು ಬೆದರಿಸಿದರೆ ಅಲ್ಲಿನ ಸರಕಾರ ಬಾಗುತ್ತದೆ ಎಂದು ತಿಳಿದುಕೊಂಡು ತಮಿಳು ದ್ವೇಷದ ಮೂಲಕ ಕನ್ನಡ ಪ್ರೇಮವನ್ನು ಎತ್ತಿ ಹಿಡಿಯುವ ನಕಲಿ ಹೋರಾಟಗಾರರು ಈ ಸಂದರ್ಭದಲ್ಲೇ ತಲೆಯೆತ್ತುತ್ತಾರೆ. ಹಿಂಸೆ, ಜನದ್ರೋಹದಲ್ಲಿ ತೊಡಗಿರುವ ಅವರನ್ನು ಕಾವೇರಿ ನೀರಿಗಾಗಿ ಆಕ್ರೋಶಗೊಂಡ ರೈತರು ಎಂಬಂತೆ ಮಾಧ್ಯಮಗಳು ಬಿಂಬಿಸತೊಡಗುತ್ತವೆ.

ಈ ಮೂಲಕ ದುಷ್ಕರ್ಮಿಗಳೆಲ್ಲ ಸಾಮಾಜಿಕ ಹೋರಾಟಗಾರರು, ನೊಂದ ಕೃಷಿಕರಾಗಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಾರೆ. ಆದರೆ ಆಳದಲ್ಲಿ ಇವರು ಕನ್ನಡ ಪ್ರೇಮಿಗಳೂ ಅಲ್ಲ, ಕೃಷಿಕರೂ ಅಲ್ಲ. ಕನ್ನಡದ ವೌಲ್ಯಗಳ ಕುರಿತಂತೆ ಇವರಿಗೆ ಎಳ್ಳಷ್ಟ್ಟೂ ಕಾಳಜಿಯಿಲ್ಲ. ಹಾಗೆಯೇ ರೈತರ ನೋವು-ನಲಿವಿನ ಕುರಿತಂತೆಯೂ ಇವರಿಗೆ ಅರಿವಿಲ್ಲ. ನಮ್ಮ ರೈತರ, ಕಾರ್ಮಿಕರ ನೋವಿನ ಅರಿವಿದ್ದಿದ್ದರೆ, ಹಗಲುರಾತ್ರಿ ನಿದ್ರೆಯಿಲ್ಲದೆ ದುಡಿಯುವ ಲಾರಿ ಕಾರ್ಮಿಕರ ಮೇಲೆ, ಚಾಲಕರ ಮೇಲೆ ಇವರು ಯಾವ ಕಾರಣಕ್ಕೂ ಹಲ್ಲೆ ನಡೆಸುತ್ತಿರಲಿಲ್ಲ. ಈ ಹೋರಾಟಗಾರರ ಮೊದಲ ಬಲಿಪಶುಗಳು ಇಂತಹ ಲಾರಿ ಚಾಲಕರೇ ಆಗಿದ್ದಾರೆ ಅಥವಾ ಬೀದಿ ವ್ಯಾಪಾರಿಗಳು. ಆದರೆ ಇವರೋ ಹೊಟ್ಟೆಪಾಡಿಗಾಗಿ ತಮ್ಮ ಕುಟುಂಬವನ್ನು ತೊರೆದು ಲಾರಿ ಏರಿ ಬಂದವರು. ತಮ್ಮ ಲಾರಿಗಳಲ್ಲಿ ಸಾಗಿಸಿಕೊಂಡು ಬಂದ ದಿನಸಿಗಳು ಅಥವಾ ಇನ್ನಿತರ ಸರಕುಗಳು ಕನ್ನಡಿಗರ ಜೀವನದ ಮೂಲಭೂತ ಅಗತ್ಯದ ವಸ್ತುಗಳೇ ಆಗಿರಬಹುದು. ಇಂತಹ ಅಮಾಯಕರಿಗೆ ಥಳಿಸುವ ಮೂಲಕ ಸರಕಾರ ಬೆದರುತ್ತದೆ ಎನ್ನುವುದು ದೊಡ್ಡ ತಪ್ಪು.

ಈ ದಾಳಿಯನ್ನೂ ನೆರೆಯ ರಾಜ್ಯದ ಸರಕಾರ ತನ್ನ ರಾಜಕೀಯ ಲಾಭಕ್ಕಾಗಿ ಬಳಸುತ್ತದೆ. ‘ಕನ್ನಡಿಗರು ನೋಡಿ, ಅದೆಷ್ಟು ಅಸಹಿಷ್ಣುಗಳು?’ ಎಂದು ಮತ್ತೆ ನಮ್ಮ ಮೇಲೆಯೇ ಗೂಬೆ ಕೂರಿಸುತ್ತದೆ. ವೀಡಿಯೊಗಳಲ್ಲಿ ಹರಿದಾಡುವ ಇಂತಹ ಕೃತ್ಯಗಳನ್ನು ಇಡೀ ವಿಶ್ವವೇ ನೋಡಿ, ಸಕಲ ಕನ್ನಡಿಗರಿಗೆ ಉಗಿಯುತ್ತದೆ. ನಿಜಕ್ಕೂ ಅಮಾಯಕರ ಮೇಲೆ ದಾಳಿ ನಡೆಸುವವರ ಉದ್ದೇಶ ಇನ್ನಾವುದೋ ಆಗಿರುತ್ತದೆ. ಇಲ್ಲಿನ ಸರಕಾರವನ್ನು ಅಸ್ಥಿರಗೊಳಿಸಲು ಕೆಲವೊಮ್ಮೆ ವಿರೋಧ ಪಕ್ಷಗಳ ನಾಯಕರೇ ಈ ಗೂಂಡಾಗಳನ್ನು ಛೂ ಬಿಟ್ಟಿರುತ್ತಾರೆ. ಅಥವಾ ಗಲಭೆ ಸೃಷ್ಟಿಸಿ ಅಂಗಡಿ ಮುಂಗಟ್ಟುಗಳನ್ನು ದೋಚುವ ಯೋಜನೆಯನ್ನೂ ಕ್ರಿಮಿನಲ್‌ಗಳು ರೂಪಿಸಿರುತ್ತಾರೆ. ಇದೇ ಸಂದರ್ಭದಲ್ಲಿ ಇಲ್ಲಿ ತಮಿಳರ ಮೇಲೆ ಹಲ್ಲೆ ನಡೆದರೆ, ಚೆನ್ನೈಯಲ್ಲಿರುವ ಸಾವಿರಾರು ಕನ್ನಡಿಗರ ಮೇಲೆಯೂ ಹಲ್ಲೆ ನಡೆಯುತ್ತದೆ ಎನ್ನುವುದನ್ನು ನಾವು ಮರೆಯುತ್ತಿದ್ದೇವೆ.

 ಮಾತುಮಾತಿಗೆ ಬೆಂಗಳೂರನ್ನು ತಮಿಳರು ಶೋಷಿಸುತ್ತಿದ್ದಾರೆ ಎಂದು ಆರೋಪಿಸುವಾಗ, ಮುಂಬೈಯಲ್ಲಿ ಬದುಕು ಕಟ್ಟಿಕೊಂಡಿರುವ ಸಹಸ್ರಾರು ಕನ್ನಡಿಗರನ್ನು ನಾವು ನೆನೆಯಬೇಕು. ಅಲ್ಲಿ ಕನ್ನಡಿಗರ ವಿರುದ್ಧ ಇಂತಹದೇ ದ್ವೇಷ ರಾಜಕಾರಣವನ್ನು ಶಿವಸೇನೆಯವರು ಮಾಡುತ್ತ ಬಂದಿದ್ದಾರೆ. ಇಲ್ಲಿ ನಾವು ತಮಿಳರನ್ನು ದ್ವೇಷಿಸುವುದು ಸರಿಯೆಂದಾದರೆ, ಅಲ್ಲಿ ಮರಾಠಿಗರು ಕನ್ನಡಿಗರನ್ನು ದ್ವೇಷಿಸುವುದೂ ಸರಿ ಎಂದಾಗುತ್ತದೆ. ಆದುದರಿಂದ, ದ್ವೇಷಕ್ಕೆ ದ್ವೇಷ ಖಂಡಿತ ಔಷಧವಲ್ಲ. ಕನ್ನಡಿಗರು ಪರಂಪರೆಯ ವೌಲ್ಯಗಳನ್ನು ಕಾಪಾಡಿಕೊಳ್ಳಬೇಕಾದುದು ಇಂತಹ ಉದ್ವಿಗ್ನ ಸಂದರ್ಭದಲ್ಲೇ ಆಗಿದೆ. ಇಷ್ಟಕ್ಕೂ ತಮಿಳರಿಗೆ ನಾವು ಬೆಂಗಳೂರಿನಲ್ಲಿ ಆಶ್ರಯ ಕೊಟ್ಟಿದ್ದರೆ ಅಲ್ಲಿ ತಮಿಳರು ಕನ್ನಡಿಗ ಮಹಿಳೆಯೊಬ್ಬರನ್ನು ಮುಖ್ಯಮಂತ್ರಿ ಮಾಡಿದ್ದಾರೆ ಎನ್ನುವ ಅವರ ಹಿರಿಮೆಯನ್ನು ಮರೆಯಬಾರದು. ರಜನಿಕಾಂತ್‌ರಂತಹ ಕನ್ನಡಿಗನನ್ನು ತಮ್ಮ ಶ್ರೇಷ್ಠನಟನಾಗಿ ಬೆಳೆಸಿದ್ದಾರೆ ಎಂಬ ಅವರ ಹೃದಯವೈಶಾಲ್ಯವನ್ನು ನಾವು ಮರೆಯಬಾರದು. ಇಂದು ಕಾವೇರಿ ನೀರಿನ ರಾಜಕೀಯ ಉಲ್ಬಣಾವಸ್ಥೆಗೆ ತಲುಪಿರುವುದು ಕನ್ನಡ ಮೂಲದ ಜಯಲಲಿತಾ ಮೂಲಕ ಎನ್ನುವುದನ್ನು ನಾವು ನೆನಪಿನಲ್ಲಿಡಬೇಕು.

ಕಾವೇರಿಯ ಕುರಿತಂತೆ ದುರ್ಬಲ ರಾಜಕೀಯ ಮಾಡಿದರೆ ಎಲ್ಲಿ ತಮಿಳರು ತನ್ನನ್ನು ಅನುಮಾನದಿಂದ ನೋಡಬಹುದೋ ಎಂಬ ಐಡೆಂಟಿಟಿಯ ಸಮಸ್ಯೆ ಜಯಲಲಿತಾರನ್ನು ಕಾಡುತ್ತಿರಬಹುದು. ಬಹುಶಃ ಆಕಾರಣಕ್ಕಾಗಿಯೇ ಅವರು ಪದೇಪದೇ ಕಾವೇರಿ ವಿಷಯದಲ್ಲಿ ಕನ್ನಡಿಗರಿಗೆ ವಿರೋಧವಾಗಿ ನಡೆದುಕೊಳ್ಳುತ್ತಿದ್ದಾರೆ.

ಇವೆಲ್ಲದರ ನಡುವೆಯೂ ಕೆಲವು ಆಶಾದಾಯಕ ಘಟನೆಗಳು ನಮ್ಮ ನಡುವೆಯೇ ನಡೆದಿದೆ. ಬೆಂಗಳೂರಿನ ಗಲಭೆಯಲ್ಲಿ ಸಿಲುಕಿಕೊಂಡ ನೂರಾರು ತಮಿಳರಿಗೆ ಕನ್ನಡಿಗರು ಕಾವಲಾಗಿ ನಿಂತರು. ಲಾರಿ ಚಾಲಕರಿಗೆ ಕರ್ನಾಟಕದ ಲಾರಿ ಚಾಲಕರು ರಕ್ಷಣೆಯನ್ನು ನೀಡಿದರು. ದುಡಿಮೆ ಮಾಡುವವರಿಗೆ ಭಾಷೆಯ ಗಡಿಗಳಿಲ್ಲ ಎನ್ನುವುದನ್ನು ಅವರು ಸಾಬೀತು ಮಾಡಿದರು. ಇದು ತಮಿಳುನಾಡಿನಲ್ಲಿಯೂ ನಡೆದಿದೆ. ಕಾವೇರಿ ಗಲಭೆಯ ಬೆಂಕಿಯಲ್ಲಿ ಅರಳಿದ ಹೂವುಗಳು ಇವು. ಈ ಹೂವುಗಳನ್ನು ಬಾಡದಂತೆ ನೋಡಿಕೊಳ್ಳುವುದು ಉಭಯ ರಾಜ್ಯಗಳ ಶ್ರೀಸಾಮಾನ್ಯರ ಹೊಣೆಯಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X