ಉಪ್ಪಿನಂಗಡಿ: ಇಖಾಮ ಕಾರ್ಯಾಗಾರ ಮತ್ತು ಈದ್ ಸ್ನೇಹ ಕೂಟ

ಉಪ್ಪಿನಂಗಡಿ, ಸೆ.16:ಸುನ್ನೀ ಸ್ಟೂಡೆಂಟ್ ಫೆಡರೇಶನ್ ಉಪ್ಪಿನಂಗಡಿ ಸೆಕ್ಟರ್ ಇದರ ಅಧೀನದಲ್ಲಿ ಕಾರ್ಯಾಚರಿಸುವ ಇಖಾಮ ಟೀಮ್ ವತಿಯಿಂದ ಇಲ್ಲಿನ ನೂರುಲ್ ಉಲಮಾ ಫೌಂಡೇಶನ್ ಹಾಲ್ ಮಠದಲ್ಲಿ ಇಖಾಮ ಕಾರ್ಯಾಗಾರ, ಈದ್ ಸಮ್ಮಿಲನ ಹಾಗೂ ಸನ್ಮಾನ ಕಾರ್ಯಕ್ರಮ ಸೆಕ್ಟರ್ ಅಧ್ಯಕ್ಷ ಮಸೂದ್ ಸಅದಿ ಅಧ್ಯಕ್ಷತೆಯಲ್ಲಿ ನಡೆಯಿತು.
ಕರ್ನಾಟಕ ಜಂಯ್ಯತ್ತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಯು.ಕೆ ವಳವುರು ಸಅದಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ನೂರಾರು ಸಂಘಟನೆಗಳು ತಲೆಯೆತ್ತಿರುವ ಆಧುನಿಕ ಯುಗದಲ್ಲಿ ಸೈನ್ಯದಂತೆ ಬೆಳೆಯುತ್ತಿರುವ ಇಖಾಮ ಸಂಘಟನೆಯ ಕಾರ್ಯಗಳು ಪ್ರಶಂಶನೀಯವಾದುದೆಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಂ ಸಿದ್ದೀಕ್ ಮೋಂಟುಗೋಳಿ ಮಾತನಾಡಿ, ಇಸ್ಲಾಂ ಶಾಂತಿ ಮತ್ತು ಸೌಹಾರ್ದತೆಯ ಧರ್ಮ. ಇತರ ಧರ್ಮದಲ್ಲಿರುವವರ ಕೆಟ್ಟ ಭಾವನೆಯನ್ನು ನೀಗಿಸುವಂತಗಲೂ ಇತರ ಧರ್ಮೀಯರನ್ನೂ ಜತೆಗೂಡಿಸಿ ಬೃಹತ್ ಸ್ನೇಹಕೂಟವನ್ನು ಆಯೋಜಿಸಬೇಕು. ಯಾವುದಕ್ಕೂ ಸಿದ್ದ ಎಂಬ ನಿಟ್ಟಿನಲ್ಲಿ ಬೆಳೆದು ಬಂದ ಉಪ್ಪಿನಂಗಡಿಯ ಇಖಾಮ ಕಾರ್ಯಾಚರಣೆ ರಾಜ್ಯಕ್ಕೇ ಮಾದರಿಯಾಗಬೇಕೆಂದು ಅಭಿಪ್ರಾಯಪಟ್ಟರು.
ಎ.ಕೆ ರಝಾ ಅಂಜದಿ ಮಾತನಾಡಿ, ಪರಸ್ಪರ ಸ್ನೇಹ ಮತ್ತು ಪರಿಚಯ ಅತ್ಯಗತ್ಯವಾಗಿದೆ. ಇಬ್ರಾಹಿಮೀ ಇತಿಹಾಸವನ್ನು ಸಾರುವ ಈದ್ ಸಂಗಮ ನಮ್ಮೆಲ್ಲರ ಕರ್ಯಚರಣೆಗೆ ಆಧಾರವಾಗಿದೆಯೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನೂರುಲ್ ಉಲಮಾ ಸಾಹಿತ್ಯ ಪುರಸ್ಕಾರಕ್ಕೆ ಭಾಜನರಾದ, ಧಾರ್ಮಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿಯವರನ್ನು ಸನ್ಮಾನಿಸಲಾಯಿತು.
ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷ ಶರೀಫ್ ಸಖಾಫಿ ಕುಪ್ಪೆಟ್ಟಿ, ಕಾರ್ಯಾದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ, ನೆಲ್ಯಾಡಿ ಸೆಕ್ಟರ್ ಅಧ್ಯಕ್ಷ ಅಬ್ದುರ್ರಹ್ಮಾನ್ ಮದನಿ, ಮೂರುಗೋಳಿ ಸೆಕ್ಟರ್ ಅಧ್ಯಕ್ಷ ಇಸಾಕ್ ಮದನಿ, ಎಸ್ ವೈಎಸ್ ಅಧ್ಯಕ್ಷ ಎಂ.ಎಚ್. ಖಾದರ್ ಹಾಜಿ, ಅಬೂಬಕರ್ ಹಾಜಿ ಕುದ್ಲೂರು, ಬೆಳ್ತಂಗಡಿ ಡಿವಿಷನ್ ಕಾರ್ಯದರ್ಶಿ ಹಾರಿಸ್ ನಾಳ, ಕೆಸಿಎಫ್ ಕಾರ್ಯಕರ್ತ ಹೈದರ್ ಅಲೀ ಅಳಕೆಮಜಲ್ ಹಾಗೂ ಉಲಮಾ ಉಮರಾ ನೇತಾರರು, ಕಾರ್ಯಕರ್ತರೂ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಅಸೈಯದ್ ಸಾದಾತ್ ತಂಙಳ್ ಕರುವೇಲ್ ದುಆಶಿರ್ವಾಚನಗೈದರು. ಸೆಕ್ಟರ್ ಇಖಾಮ ಅಮೀರ್ ಎಂ.ಎಂ ಆತೂರು ಸ್ವಾಗತಿಸಿ, ಸೆಕ್ಟರ್ ಉಪಾಧ್ಯಕ್ಷ ಲತೀಫಿ ಕುಂತೂರು ವಂದಿಸಿದರು.







