ತಮಿಳುನಾಡು ಬಂದ್;ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಎಂಡಿಎಂಕೆ ಮುಖ್ಯಸ್ಥ ವೈಕೋ ಬಂಧನ

ಚೆನ್ನೈ, ಸೆ.16: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಿದ ವಿಚಾರದಲ್ಲಿ ಕರ್ನಾಟಕದಲ್ಲಿ ಕಂಡು ಬಂದಿರುವ ಪ್ರತಿಭಟನೆಯನ್ನು ವಿರೋಧಿಸಿ ಶುಕ್ರವಾರ ತಮಿಳುನಾಡು ಬಂದ್ ಆಚರಿಸಲಾಗುತ್ತಿದ್ದು,ತಿರುಚಿ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಎಂಡಿಎಂಕೆ ಮುಖ್ಯಸ್ಥ ವೈಕೋ ಮತ್ತು ಅವರ ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ.
ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಮತ್ತು ಅವರ ಬೆಂಬಲಿಗರು ಎಗ್ಮೋರ್ ರೈಲು ನಿಲ್ದಾಣದಲ್ಲಿ ರ‍್ಯಾಲಿ ನಡೆಸುತ್ತಿದ್ದಾಗ ಪೊಲೀಸರು ವಶಕ್ಕೆ ತೆಗೆದುಕೊಂಡರು.
ಪ್ರಮುಖ ವಿರೋಧ ಪಕ್ಷಗಳಾದ ಡಿಎಂಕೆ, ಕಾಂಗ್ರೆಸ್, ಡಿಎಂಡಿಕೆ, ಟಿಎಂಸಿ ಮತ್ತು ಪಿಎಂಕೆ ಪಕ್ಷಗಳು ಬೆಂಬಲ ಸೂಚಿಸಿವೆ. ತಮಿಳುನಾಡಿನಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ..
ವಿವಿಧ ಆಟೋ ಸಂಘಟನೆಗಳು ,ಪೆಟ್ರೋಲ್ ಬಂಕ್ ಮಾಲೀಕರು ಬಂದ್ ಗೆ ಬೆಂಬಲ ನೀಡಿವೆ. ಪೆಟ್ರೋಲ್ ಬಂಕ್‌ಗಳು ಬಂದ್ ಆಗಿದೆ.
ಬಂದ್ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಮಿಳುನಾಡು ಸರಕಾರ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದೆ.
ಹೈಲೈಟ್ಸ್
*ವೆಲ್ಲೂರಿನ ಕಟ್ಪಾಡಿಯ ಬೇಕರಿಗೆ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ.
*ನಟ ರಜನಿಕಾಂತ್ ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಯಾವುದೇ ಪ್ರತಿಕ್ರಿಯೆ ನೀಡಕ್ಕಾಗಿ ನಟ ರಜನಿಕಾಂತ್ ಅವರಿಗೆ ಇಂದು ಮಕ್ಕಳ ಕಟ್ಚಿ (ತಮಿಝಗಮ್) ಕಾರ್ಯಕರ್ತರು ಉಪ್ಪಿನ ಪೊಟ್ಟಣಗಳನ್ನು ರೈಲು ಮೂಲಕ ಕಳುಹಿಸಿದರು.
*ಕೊಯಂಬತ್ತೂರಿನ ದಕ್ಷಿಣ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ತಮಿಳುನಾಡು ವರ್ತಕ ಸಂಘಟನೆಯ 32 ಮಂದಿ ಸದಸ್ಯರನ್ನು ಪೊಲೀಸರು ಬಂಧಿಸಿದರು.
*ಮಾಜಿ ಸಚಿವ ಡಿಎಂಕೆಯ ತಿರುವನ್ನಾಮಲೈ ಇ.ವಿ.ವೇಲು ಸೇರಿದಂತೆ ನೂರಾರು ಮಂದಿ ನಗರದ ಪ್ರಧಾನ ಅಂಚೆ ಕಚೇರಿ ಮಂದೆ ಧರಣಿ ನಡೆಸಿದರು.
*ಚೆನ್ನೈನ ಕೊರುಕ್ಕುಪೆಟ್ ರೈಲ್ವೆ ನಿಲ್ದಾಣದಲ್ಲಿ ಡಿಎಂಕೆ ಕಾರ್ಯಕರ್ತರು ರೈಲು ತಡೆಗೆ ಯತ್ನ ನಡೆಸಿದರು.
*ಕನಾಟಕದ ಗಡಿ ಭಾಗದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ.ಗಡಿ ಭಾಗದಲ್ಲಿ ಬಸ್ ಗಳ ಓಡಾಟವಿಲ್ಲದೆ ಜನರು ಪರಡಾಡುವಂತಾಗಿದೆ.
*ಕಾಂಚಿಪುರಂನಲ್ಲಿ ಸರಕಾರಿ ಮತ್ತು ಖಾಸಗಿ ಬಸ್‌ಗಳ ಓಡಾಟ ಎಂದಿನಂತೆ ಇದೆ.
*ಕೊಯಂಬತ್ತೂರಿನಲ್ಲೂ ಬಂದ್‌ನಿಂದ ಬಸ್‌ಗಳ ಓಡಾಟಕ್ಕೆ ಧಕ್ಕೆಯಾಗಿಲ್ಲ.
*ಸಿಂಗನಲ್ಲೂರಿನಲ್ಲಿ ಡಿಎಂಕೆ ಎಂಎಲ್‌ಎ ಕಾರ್ತಿಕ್ ನೇತೃತ್ವದಲ್ಲಿ ರೈಲು ತಡೆಗೆ ಯತ್ನ ನಡೆಯಿತು.
*ಸೈದಾಪೇಟೆ ರೈಲು ನಿಲ್ದಾಣದಲ್ಲಿ ಡಿಎಂಕೆ ಎಂಎಲ್‌ಎ ಹಾಗೂ ಚೆನ್ನೈನ ಮಾಜಿ ಮೇಯರ‍್ ಎಂ.ಸುಬ್ರಹ್ಮಣ್ಯಮ್ ನೇತೃತ್ವದಲ್ಲಿ ೫೦೦ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
*ಚೆನ್ನೈನ ರೈಲು ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
*ಅಂಗಡಿ ಮುಂಗಟ್ಟು ಗಳು ಮುಚ್ಚಿದ್ದು,ವರ್ತಕರು ಬಂದ್‌ಗೆ ಬೆಂಬಲ ನೀಡಿದ್ದಾರೆ.







