ಬೀದರ್‌ನಲ್ಲಿ ಖಾಸಗಿ ಬಸ್‌ಗೆ ಬೆಂಕಿ; 3 ವರ್ಷದ ಮಗು ಸಜೀವ ದಹನ

ಬೀದರ‍್ ,ಸೆ. 16: ಖಾಸಗಿ ಬಸ್ಸೊಂದಕ್ಕೆ ಬೆಂಕಿ ಬಿದ್ದ ಪರಿಣಾಮವಾಗಿ ಮೂರು ವರ್ಷದ ಮಗುವೊಂದು ಸಜೀವ ದಹನವಾದ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ನಲ್ಲಿ ನಡೆದಿದೆ.
ಬೆಂಕಿಗೆ ಮೂರು ವರುಷದ ಮಗು ಬಲಿಯಾಗಿದೆ, ನಾಲ್ವರಿಗೆ ಗಾಯವಾಗಿದೆ. ಶಿರಡಿಯಿಂದ ಹೈದ್ರಾಬಾದ್‍ಗೆ ಹೊರಟಿದ್ದ ಖಾಸಗಿ ಬಸ್ ಗೆ ಇಂದು ಬೆಳಗಿನ ಜಾವ 6 ಗಂಟೆಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ. ಈ ಅವಘಡದಲ್ಲಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಈ ಬಸ್‍ನಲ್ಲಿ 40ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
ಹುಮ್ನಾಬಾದ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ..
Next Story





