ಬಾಲಕಿಗೆ ಲೈಂಗಿಕ ಕಿರುಕುಳ: ಬಿಜೆಪಿ ಕಾರ್ಯಕರ್ತನ ಬಂಧನ

ಕಾಸರಗೋಡು, ಸೆ.16: ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪೆರ್ಲದ ಸಣ್ಣ ಜ್ಯುವೆಲ್ಲರಿ ಮಳಿಗೆಯೊಂದರ ಮಾಲಕ, ಬಿಜೆಪಿ ಕಾರ್ಯಕರ್ತ ಚಿದಾನಂದ ಆಚಾರ್ಯ (48) ಬಂಧಿತ ಆರೋಪಿ.
ತನ್ನ ಅಂಗಡಿಗೆ ಬರುತ್ತಿದ್ದ ಪರಿಚಯದ ಬಾಲಕಿಯೋರ್ವಳಿಗೆ ಈತ ಸೆ.13ರಂದು ಕಿರುಕುಳ ನೀಡಿದ್ದ ಎನ್ನಲಾಗಿದೆ. ಈ ಬಗ್ಗೆ ಬಾಲಕಿ ಮನೆಮಂದಿಗೆ ವಿಷಯ ತಿಳಿಸಿದ್ದು, ಮನೆಮಂದಿ ಚೈಲ್ಡ್ ಲೈನ್ ಸಂಸ್ಥೆಗೆ ದೂರು ನೀಡಿದ್ದರು ಎನ್ನಲಾಗಿದೆ. ಚೈಲ್ಡ್ ಲೈನ್ ಸಂಸ್ಥೆಯು ಘಟನೆಯ ಕುರಿತು ಬದಿಯಡ್ಕ ಠಾಣಾ ಪೊಲೀಸರಿಗೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡ ಪೊಲೀಸರು ಇಂದು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
Next Story





