ಆಪಲ್ ಐಫೋನ್ ದರದಲ್ಲಿ ಭಾರೀ ಇಳಿಕೆ
ಹೊಸದಿಲ್ಲಿ, ಸೆ.16: ಐಫೋನ್ 6ಎಸ್, ಐಫೋನ್ 6ಎಸ್ ಪ್ಲಸ್ ಹಾಗೂ ಐಫೋನ್ ಎಸ್‌ಇ ದರಗಳನ್ನು ಆಪಲ್ ಸಂಸ್ಥೆ ಭಾರತದಲ್ಲಿ ಕಡಿತಗೊಳಿಸಿದೆ. ಐಫೋನ್ 6ಎಸ್ ಇದರ ಆರಂಭಿಕ ಬೆಲೆ 50,000 ರೂ. ಆಗಿದ್ದು ಅದರ ಸ್ಟೋರೇಜ್ ಸಾಮರ್ಥ್ಯ ಕೂಡ ದ್ವಿಗುಣವಾಗಿದೆ (32 ಜಿಬಿ). ಅಂತೆಯೇ ಐಫೋನ್ 6ಎಸ್ ಪ್ಲಸ್ 32 ಜಿಬಿ ಇದರ ಆರಂಭಿಕ ಬೆಲೆ 60,000 ರೂ. ಆಗಿದೆ. ಎರಡು ಫೋನುಗಳ ಬೆಲೆಯಲ್ಲೂ 12,000 ರೂ. ರಷ್ಟು ಕಡಿತ ಮಾಡಲಾಗಿದೆ.
ಐಫೋನ್ ಎಸ್‌ಇ 64 ಜಿಬಿ ಬೆಲೆಗಳೂ ಕಡಿಮೆಯಾಗಿವೆ. ಆಪಲ್ ಐಫೋನ್ ಎಸ್ ಹಾಗೂ ಇನ್ನಿತರ ಎರಡು ಐಫೋನುಗಳು ಭಾರತದಲ್ಲಿ ಅಕ್ಟೋಬರ್ 7 ರಂದು ಬಿಡುಗಡೆಯಾಗಲಿದ್ದು, ಬಿಡುಗಡೆಗೆ ಕೆಲವೇ ವಾರಗಳಿರುವಾಗ ಈ ಬೆಲೆ ಕಡಿತವನ್ನು ಘೋಷಿಸಲಾಗಿದೆ.
ಐಫೋನ್ 6ಎಸ್ 128 ಜಿಬಿ ಮಾಡೆಲ್ ಬೆಲೆ ಈಗ 60,000 ರೂ. ಆಗಿದ್ದು ಇದು ಹಿಂದಿನ 82,000 ರೂ. ದರಕ್ಕೆ ಹೋಲಿಸಿದರೆ 22,000 ರೂ. ಕಡಿಮೆಯಾಗಿದೆ. ಐಫೋನ್ 6ಎಸ್ ಪ್ಲಸ್ 128 ಜಿಬಿ ಬೆಲೆ ಈಗ 70,000 ರೂ. ಆಗಿದ್ದರೆ ಅದರ ಮೂಲ ಬೆಲೆ 92,000 ರೂ. ಆಗಿದೆ.
ಈ ವರ್ಷದ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ಆಪಲ್ ನ 4 ಇಂಚಿನ ಐಫೋನ್ ಎಸ್‌ಇ ಬೆಲೆಯಲ್ಲೂ ಕಡಿತ ಮಾಡಲಾಗಿದ್ದು, ಇದರ 64 ಜಿಬಿ ಮಾಡೆಲ್ ಬೆಲೆ 44,000 ರೂ. ಆಗಿದೆ. ಈ ಹಿಂದೆ ಈ ಫೋನಿನ ಬೆಲೆ 49,000 ರೂ. ಆಗಿತ್ತು. ಆದರೆ ಇದೇ ಫೋನಿನ 16 ಜಿಬಿ ಮಾಡೆಲ್ ಬೆಲೆ ಹಿಂದಿನಂತೆಯೇ 39,000 ರೂ. ಇರಲಿದೆ.









