ಪುತ್ತೂರು: ‘ಪರ್ಯಾಯ ಶಕ್ತಿಯ ಮೂಲಗಳು’ ವಿಶೇಷ ಉಪನ್ಯಾಸ

ಪುತ್ತೂರು, ಸೆ.16: ಸಾಂಪ್ರದಾಯಿಕ ಶಕ್ತಿಯ ಮೂಲಗಳಿಗೆ ಪರ್ಯಾಯವಾಗಿ ಬಯೋಗ್ಯಾಸ್, ಸೌರಶಕ್ತಿ ಇತ್ಯಾದಿಗಳನ್ನು ಬಳಸುವುದನ್ನು ಜನಪ್ರಿಯಗೊಳಿಸಬೇಕಾಗಿದೆ. ಕಾಲೇಜು ವಿದ್ಯಾರ್ಥಿಗಳು ಈ ಕುರಿತು ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ರಾಷ್ಟ್ರಪ್ರಶಸ್ತಿ ವಿಜೇತ ವಿಜ್ಞಾನ ಶಿಕ್ಷಕ, ಲೇಖಕ ಬದಿಯಡ್ಕ ನವಜೀವನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶಂಕರ ಅವರು ಹೇಳಿದರು.
ಅವರು ಶುಕ್ರವಾರ ಬೆಟ್ಟಂಪಾಡಿಯ ಸರ್ಕಾರಿ ಪ್ರಥಮ ದರ್ಜೆಕಾಲೇಜಿನ ವಿಜ್ಞಾನ ಸಂಘವನ್ನು ಉದ್ಘಾಟಿಸಿ, ‘ಪರ್ಯಾಯ ಶಕ್ತಿಯ ಮೂಲಗಳು’ ಎಂಬ ವಿಚಾರವಾಗಿ ವಿಶೇಷ ಉಪನ್ಯಾಸವನ್ನು ನೀಡಿದರು.
ಬಯೋಗ್ಯಾಸ್ ಮತ್ತು ಸೌರಶಕ್ತಿಯ ಬಳಕೆಯ ಅನೇಕ ವಿಧಾನಗಳನ್ನು ವಿವರಿಸಿದ ಅವರು ನಮ್ಮ ಆಸಕ್ತಿ ಮತ್ತು ಮನೋಭಾವಗಳು ಬದಲಾಗಬೇಕಾದ ಅನಿವಾರ್ಯತೆಯನ್ನು ತಿಳಿಸಿದರು.
ಕಾಲೇಜ್‌ನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ರಸಾಯನ ಶಾಸ್ತ್ರ ವಿಭಾಗದ ಭಿತ್ತಿಪತ್ರಿಕೆ ‘ಕೆಮ್‌ವರ್ಲ್ಡ್’ ನ್ನು ಅನಾವರಣಗೊಳಿಸಲಾಯಿತು. ವಿಜ್ಞಾನ ಸಂಘದ ಸಂಚಾಲಕಿ ಯಶೋಧಾ ಮತ್ತು ಕಾರ್ಯದರ್ಶಿ ಸುಲೋಚನಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅನ್ಸೀರಾ ಸ್ವಾಗತಿಸಿದರು. ಅಶ್ವಿನಿ ವಂದಿಸಿದರು. ಹಸ್ತಾ ಕಾರ್ಯಕ್ರಮ ನಿರೂಪಿಸಿದರು.







