ಬೃಹತ್ ವಾಹನಗಳಿಂದಲೇ ಸುಂಕ ಸಂಗ್ರಹಿಸಿ ರಸ್ತೆ ಅಭಿವೃದ್ಧಿ: ಮೊಯ್ದಿನ್ ಬಾವ

ಮಂಗಳೂರು, ಸೆ.16: ಕೈಗಾರಿಕಾ ವಲಯದ ಬೃಹತ್ ಕಂಪೆನಿಗಳಿಗೆ ತೆರಳುವ ಬೃಹತ್ ವಾಹನಗಳ ಮೂಲಕ ಟೋಲ್ ಸಂಗ್ರಹಿಸಿ 25 ರಿಂದ 30 ಕೋಟಿ ರೂ. ವೆಚ್ಚದಲ್ಲಿ ಸುರತ್ಕಲ್ ಮತ್ತು ಎಂಆರ್‌ಪಿಎಲ್ ನಡುವಿನ ರಸ್ತೆಯನ್ನು ಅಭಿವೃದ್ದಿಪಡಿಸಲಾಗುವುದು ಎಂದು ಶಾಸಕ ಮೊಯ್ದಿನ್ ಬಾವ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ರಸ್ತೆಯಲ್ಲಿರುವ ರೈಲ್ವೆ ಸೇತುವೆಯೊಂದಿಗೆ ಹೊಸ ರೈಲ್ವೆ ಸೇತುವೆ ನಿರ್ಮಾಣಕ್ಕೆ 70 ಲಕ್ಷ ರೂ.ವೆಚ್ಚದಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
ಗುಡ್ಲಕೊಪ್ಪಕ್ಕೆ ಹೋಗುವ ರಸ್ತೆ, ಬೈಕಂಪಾಡಿ ಕೈಗಾರಿಕಾ ವಲಯದ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ನಝೀರ್ ಬಜಾಲ್ ಉಪಸ್ಥಿತರಿದ್ದರು.
Next Story





