ಪತ್ರಕರ್ತೆ ನಾಝಿಯಾ ಕೌಸರ್‌ಗೆ ಅಭಿನಂದನೆ

ಮಂಗಳೂರು,ಸೆ.16: ಟಿ.ವಿ.ವಾಹಿನಿಯ ಪತ್ರಕರ್ತೆ ನಾಝೀಯಾ ಕೌಸರ್‌ರಿಗೆ ಪತ್ರಿಕೆಯೊಂದು ಮಾಧ್ಯಮ ಪ್ರಶಸ್ತಿ ನೀಡಿರುವ ಹಿನ್ನೆಲೆಯಲ್ಲಿ ಯು.ಟಿ.ಖಾದರ್ ವಾಟ್ಸಪ್ ಬಳಗದ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಗರದಲ್ಲಿಂದು ನಡೆಯಿತು.
ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಅಬುಧಾಬಿ ಬ್ಯಾರೀಸ್ ವೆಲ್ಫೇರ್ ಫೋರಂನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ಉಳ್ಳಾಲ ನಗರಸಭಾ ಉಪಾಧ್ಯಕ್ಷೆ ಚಿತ್ರಾ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದರು.
ಉಳ್ಳಾಲ ನಗರಸಭೆಯ ಅಧ್ಯಕ್ಷ ಕುಂಞಿ ಮೋನು, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಯು.ಕೆ.ಮೋನು ಮೊದಲಾದವರು ಉಪಸ್ಥಿತರಿದ್ದರು. ಬಿ.ಎ.ಮುಹಮ್ಮದಾಲಿ ಕಾರ್ಯಕ್ರಮವನ್ನು ನಿರೂಪಿಸಿದರು.
Next Story





