ಸೆ.18ರಂದು ಉಳ್ಳಾಲದಲ್ಲಿ ಕುರ್‌ಆನ್ ಪಬ್ಲಿಕ್ ಪರೀಕ್ಷೆ

ಮಂಗಳೂರು, ಸೆ.16: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್‌ನ ಅಧೀನ ಸಂಸ್ಥೆಯಾದ ಸಲಫಿ ಎಜುಕೇಶನ್ ಬೋರ್ಡ್, ಕರ್ನಾಟಕ ಸಲಫಿ ಫೌಂಡೇಶನ್ ರಿಯಾದ್ ಘಟಕ ಮತ್ತು ಮುಜಾಹಿದ್ ಗರ್ಲ್ಸ್ ಮೂವ್‌ಮೆಂಟ್ (ಕನ್ನಡ ವಿಭಾಗ) ರಿಯಾದ್ ಇವುಗಳ ಜಂಟಿ ಆಶ್ರಯದಲ್ಲಿ ಸೆ. 18ರಂದು ಪೂರ್ವಾಹ್ನ 10:30ಕ್ಕೆ ಉಳ್ಳಾಲದ ಇಸ್ಲಾಹೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ.
ಅಂದು ಸಂಪೂರ್ಣ ಕುರ್‌ಆನ್ ಅರ್ಥ ಮತ್ತು ವ್ಯಾಖ್ಯಾನಗಳ ಅಧ್ಯಯನ ಮತ್ತು ಪರೀಕ್ಷಾ ಯೋಜನೆಯಡಿ ಅಲ್ ಮುಲ್ಕ್ ಹಾಗೂ ಅಲ್ ಖಲಂ ಎಂಬ ಎರಡು ಅಧ್ಯಾಯಗಳ 2ನೆ ಹಂತದ ಪಬ್ಲಿಕ್ ಪರೀಕ್ಷೆ ನಡೆಯಲಿದೆ ಎಂದು ಯೋಜನೆಯ ಸಂಚಾಲಕಿ ಉಮ್ಮು ಅರ್ಶದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





