ಬರಲಿದೆ ಹೊಸ ತಂತ್ರಜ್ಞಾನದ, ಪರಿಸರ ಸ್ನೇಹಿ ಫ್ರಿಜ್ ?

ಹೊಸದಿಲ್ಲಿ, ಸೆ.16: ಎಚ್‌ಎಫ್‌ಸಿಗಳಿಗೆ ಪರ್ಯಾಯವಾಗಿ ಮುಂದಿನ ತಲೆಮಾರಿನ, ಫ್ರಿಜ್, ಎಸಿ ಮೊದಲಾದ ತಾತ್ಕಾಲಿಕ ಶೀತಲೀಕರಣ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಮಹತ್ವಾಕಾಂಕ್ಷಿ ಸಹಭಾಗಿತ್ವದ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮವೊಂದನ್ನು ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಘೋಷಿಸಿವೆ.
ಈಗ ಉಪಯೋಗಿಸಲಾಗುತ್ತಿರುವ ಶೀತಕಾರಕ ಅನಿಲಗಳಿಂದ ಓರೆನ್ ಪದರ ಹಾಗೂ ಹವಾಮಾನದ ಮೇಲಾಗುತ್ತಿರುವ ಪರಿಣಾಮವನ್ನು ನಿವಾರಿಸಲು, ದೀರ್ಘಾವಧಿ ತಂತ್ರಜ್ಞಾನ ಪರಿಹಾರವನ್ನು ಅಭಿವೃದ್ಧಿಪಡಿಸುವ ಈ ಕ್ರಮವು ಸರಕಾರ, ಸಂಶೋಧನಾ ಸಂಸ್ಥೆಗಳು, ಕೈಗಾರಿಕೆ ಹಾಗೂ ನಾಗರಿಕ ಸಮಾಜಗಳನ್ನು ಒಟ್ಟುಗೂಡಿಸಲಿದೆ.
ಈ ಕಾರ್ಯಕ್ರಮದೊಂದಿಗೆ ಭಾರತವು ಭೂಮಿಯ ಸ್ವಾಭಾವಿಕ ಜೈವಿಕ ವ್ಯವಸ್ಥೆಯ ರಕ್ಷಣೆಗೆ ಇತರ ಎಲ್ಲ ರಾಷ್ಟ್ರಗಳೊಂದಿಗೆ ಕೆಲಸ ಮಾಡುವ ತನ್ನ ಬದ್ಧತೆಯನ್ನು ಮರು ದೃಢೀಕರಿಸುತ್ತವೆ.
ವೈಜ್ಞಾನಿಕ ಮತ್ತು ಔದ್ಯಮಿಕ ಸಂಶೋಧನ ಮಂಡಳಿ ಹಾಗೂ ಅದರ ಸಂಯೋಜಿತ ಸಂಸ್ಥೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಾತಾವರಣ ಮತ್ತು ಸಾಗರ ವಿಜ್ಞಾನ ಕೇಂದ್ರ ಹಾಗೂ ಈ ಕ್ಷೇತ್ರದ ಪ್ರಮುಖ ಕೈಗಾರಿಕೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುಖ್ಯಸಂಸ್ಥೆಗಳಾಗಿವೆ
ಯೋಜನೆಯ ಕುರಿತು ಏಕಾಭಿಪ್ರಾಯಕ್ಕೆ ಬರಲು ಹಾಗೂ ಮಾರ್ಗನಕ್ಷೆಯ ಕುರಿತು ನಿರ್ಧರಿಸಲು ಅದರ ಸದಸ್ಯರು ಈಗಾಗಲೇ ಹಲವು ಸುತ್ತು ಸಮಾಲೋಚನೆ ನಡೆಸಿದ್ದಾರೆ.
ವೈಯಕ್ತಿಕ ಮಟ್ಟದಲ್ಲಿ ಭಾರತವು ಸಣ್ಣದೊಂದು ಇಂಗಾಲದ ಹೆಜ್ಜೆ ಗುರುತನ್ನು ಪಡೆದಿದೆ. ಅದರ ತಾಳಿಕೆಯ ಜೀವನ ಶೈಲಿಯು, ಒಟ್ಟಾರೆ ಹಸಿರು ಮನೆಅನಿಲ ಹಾಗೂ ಓರೆನ್ ಕಡಿಮೆಗೊಳಿಸುವ ವಸ್ತುಗಳ ವಿಸರ್ಜನೆಯಲ್ಲಿ ಇತರ ಶ್ರೀಮಂತ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಕೊಡುಗೆಯನ್ನು ಕಡಿಮೆ ಮಾಡಿದೆ.







