ಕೃಷಿಕರು ಸಹಕಾರಿ ಸಂಘದ ಪ್ರಯೋಜನ ಪಡೆಯಲಿ: ಜಯಪಾಲ್
ವಾರ್ಷಿಕ ಮಹಾಸಭೆ

ಮೂಡಿಗೆರೆ, ಸೆ.16: ರೈತರ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕೃಷಿ ಪತ್ತಿನ ಸಹಕಾರಿ ಸಂಘಗಳ ಪ್ರಯೋಜನವನ್ನು ಕೃಷಿಕರು ಪಡೆಯಬೇಕು ಎಂದು ಅಧ್ಯಕ್ಷ ಬಿದರಹಳ್ಳಿ ಜಯಪಾಲ್ ತಿಳಿಸಿದರು.
ಅವರು ಸಮೀಪದ ಬಿದರಹಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಕೃಷಿಕರು ಮತ್ತು ಗ್ರಾಮೀಣ ಭಾಗದ ಆರ್ಥಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸಂಘ ಸ್ಥಾಪಿತವಾಗಿದೆ. ಸಂಘವು ರೈತರು ಮತ್ತು ಕೃಷಿಕರಿಗೆ ಕಾಲಕಾಲಕ್ಕೆ ಬಿತ್ತನೆ ಮಾಡಲು ಅಲ್ಪ ಪ್ರಮಾಣದ ಬಡ್ಡಿ ರಹಿತ ಸಾಲ ನೀಡುತ್ತಿದೆ. ಜೊತೆಗೆ ಕುಟುಂಬದಸಮಗ್ರ ಅಭಿವೃದ್ಧಿಗಾಗಿ ಕಡಿಮೆ ಬಡ್ಡಿ ದರದಲ್ಲಿಯೂಸಾಲ ನೀಡುತ್ತಿದೆ ಎಂದು ತಿಳಿಸಿದರು.
ಇದನ್ನು ಫಲಾನುಭವಿಗಳು ಯಾವುದೇ ರೀತಿಯ ದುಂದು ವೆಚ್ಚ ಮಾಡದೆ ಆರ್ಥಿಕ ಅಭಿವೃದ್ಧ್ದಿಗೆ ಬಳಸಿಕೊಳ್ಳಬೇಕು. ಈ ಬಾರಿ ಸಹಕಾರಿ ಸಂಘವು 9,14,399 ರೂ. ಲಾಭ ಗಳಿಸಿದ್ದು, ಶೇರುದಾರರಿಗೆ ಶೇ.5 ರಷ್ಟು ಲಾಭಾಂಶ ಘೋಷಿಸಲಾಗಿದೆ. ಸರ್ವಸದಸ್ಯರು ಸಹಕಾರಿ ಸಂಘದ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದುವಿನಂತಿಸಿದರು.
ಸಭೆಯಲ್ಲಿ ವರ್ಷದ ಆಯ-ವ್ಯಯವನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು.
ಮಹಾ ಸಭೆಯಲ್ಲಿ ಉಪಾಧ್ಯಕ್ಷ ಸಂತೋಷ್ ಮುಗ್ರಹಳ್ಳಿ, ನಿರ್ದೇಶಕ ಸುಂದರೇಶ್, ಸಂದೀಪ, ರಾಕೇಶ್, ಆಸಿಫ್ ಇಕ್ಬಾಲ್, ಕಸ್ತೂರಿ, ಹನೀಫ್, ಫಾತಿಮಾ, ರಾಧಾಕೃಷ್ಣ, ಅಣ್ಣಪ್ಪ, ಮುಹಮ್ಮದ್ ಮತ್ತು ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಮತ್ತಿತರಿದ್ದರು.







