ಜಾಗತಿಕ ತೈಲ ದರ ಸ್ಥಿರವಾಗಿದ್ದರೂ ಭಾರತದಲ್ಲೇಕೆ ರಾಕೆಟ್‌ನಂತೆ ಆಕಾಶಕ್ಕೆ ಹಾರುತ್ತಿದೆ?
.jpg)
▬ ನವೆಂಬರ್ 2014ರಲ್ಲಿ ತೈಲ ಬ್ಯಾರಲ್‌ಗೆ ಇದ್ದದ್ದು 106 ಡಾಲರ್..ಈಗ 43 ಡಾಲರ್
▬ ಆದರೆ ಈಗಲೂ ಭಾರತದಲ್ಲಿ ಪೆಟ್ರೋಲ್ ಬೆಲೆ ನವೆಂಬರ್ 2014ರಲ್ಲಿದ್ದಷ್ಟೇ ಇದೆ
▬ ಸರಕಾರಕ್ಕೆ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲವೇ?
▬ ಕುತೂಹಲಕಾರಿ ಅಂಕಿ ಅಂಶಗಳು, ವಿಶ್ಲೇಷಣೆ
ಗುರುವಾರ ಪೆಟ್ರೋಲ್ ದರ ಲೀಟರ್‌ಗೆ 0.58 ರೂಪಾಯಿ ಹೆಚ್ಚಿದೆ ಹಾಗೂ ಡೀಸೆಲ್ ಬೆಲೆ 0.31 ರೂಪಾಯಿ ಇಳಿದಿದೆ. ಇದು ಕಳೆದ ಎರಡು ವಾರಗಳಲ್ಲಿ ಆಗುತ್ತಿರುವ ಎರಡನೇ ದರ ಪರಿಷ್ಕರಣೆ. ಇದೀಗ ದೆಹಲಿಯಲ್ಲಿ ಪೆಟ್ರೋಲ್ ದರ 64.21 ರೂಪಾಯಿ ಹಾಗೂ ಡೀಸೆಲ್ ದರ 52.59 ರೂಪಾಯಿ. ಆಸಕ್ತಿದಾಯಕ ವಿಚಾರವೆಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಳೆದ ಕೆಲ ತಿಂಗಳಿಂದ ಸ್ಥಿರವಾಗಿಯೇ ಇದೆ. ಆದರೆ ಭಾರತದಲ್ಲಿ ಹಾಗಿಲ್ಲ.
ಆಗಸ್ಟ್ 31ರಂದು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿತ್ತು. ಪೆಟ್ರೋಲ್ ದರವನ್ನು ಲೀಟರ್‌ಗೆ 3.38 ರೂಪಾಯಿ ಹಾಗೂ ಡೀಸೆಲ್ ದರವನ್ನು 2.67 ರೂಪಾಯಿ ಹೆಚ್ಚಿಸಲಾಗಿತ್ತು. ರೂಪಾಯಿ ಹಾಗೂ ಡಾಲರ್ ದರದಲ್ಲಿ ಆಗಿರುವ ಬದಲಾವಣೆಯಿಂದಾಗಿ ಈ ದರ ಪರಿಷ್ಕರಿಸಲಾಗಿದೆ ಎಂದು ತೈಲ ಕಂಪೆನಿಗಳು ಹೇಳುತ್ತವೆ. ಆದರೆ ಇದರ ಆಳಕ್ಕೆ ಇಳಿದು ನೋಡಿದರೆ ಆರ್ಥಿಕತೆ ಹಾಗೂ ಜನರ ಭಾವನೆಗಳ ಮೇಲೆ ಭಾರೀ ಪರಿಣಾಮ ಬೀರುವ ಈ ಬೆಲೆ ಏರಿಕೆಯನ್ನು ತಡೆಯಲು ಸರ್ಕಾರಕ್ಕೆ ಎಲ್ಲ ಅವಕಾಶವೂ ಇತ್ತು.
ಕಳೆದ ಎರಡು ವರ್ಷಗಳಿಂದ ಅಮೆರಿಕ ಭಾರೀ ಪ್ರಮಾಣದ ತೈಲ ಉತ್ಪಾದಿಸಿದೆ. ಯೂರೊ ವಲಯ ಹಾಗೂ ಪ್ರಮುಖ ಮಾರುಕಟ್ಟೆಗಳಾದ ಬ್ರೆಜಿಲ್ ಹಾಗೂ ಚೀನಾದಲ್ಲಿ ಆರ್ಥಿಕತೆಯ ನಿಧಾನ ಪ್ರಗತಿ ಇದ್ದರೂ ಅಮೆರಿಕದ ಉತ್ಪಾದನೆ ಅಧಿಕವಾಗಿತ್ತು, ದಶಕಗಳ ಬಳಿಕ ಇರಾನ್ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಗೆ ಲಗ್ಗೆ ಇಟ್ಟದ್ದು ಕೂಡಾ ಕಚ್ಚಾ ತೈಲ ಬೆಲೆ ಕುಸಿತಕ್ಕೆ ಕಾರಣವಾಗಿತ್ತು. ಭಾರತದ ಪರಿಸ್ಥಿತಿಗೆ ಅನುಗುಣವಾಗಿ 2014ರ ನವೆಂಬರ್‌ನಲ್ಲಿ ಪ್ರತಿ ಬ್ಯಾರಲ್‌ಗೆ 106 ಡಾಲರ್ ಇದ್ದ ಬೆಲೆ 2016ರ ಜನವರಿ ವೇಳೆಗೆ 26 ಡಾಲರ್‌ಗೆ ಇಳಿದಿದ್ದು, ಶೇಕಡಾ 75ರಷ್ಟು ಇಳಿಕೆ ಕಂಡಿದೆ.
ತೈಲದ ಮೇಲೆ ಅತ್ಯಧಿಕ ಅಬಕಾರಿ ಸುಂಕ ಹಾಗೂ ವ್ಯಾಟ್ ವಿಧಿಸುವ ಕಾರಣದಿಂದ ಸರಕಾರ ದೊಡ್ಡ ಪ್ರಮಾಣದ ಆದಾಯ ಗಳಿಸುತ್ತಿದ್ದು, ಬೆಲೆಯನ್ನು ಸರಿಸುಮಾರು ಒಂದೇ ಮಟ್ಟದಲ್ಲಿ ಕಾಪಾಡಿಕೊಂಡು ಬಂದಿದೆ. ಈ ಕಾರಣದಿಂದ 2014ರ ನವೆಂಬರ್‌ನಲ್ಲಿ ಇದ್ದ ಬೆಲೆ ಈಗಲೂ ಇದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 2014ರ ನವೆಂಬರ್‌ನಲ್ಲಿ ಇದ್ದ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 106 ಡಾಲರ್ ಇದ್ದುದು ಈಗ 43 ಡಾಲರ್‌ಗೆ ಕುಸಿದಿದೆ.
ಕುತೂಹಲಕಾರಿ ಅಂಶವೆಂದರೆ ಉತ್ಪನ್ನದ ಬೆಲೆಗಿಂತಲೂ ಅಧಿಕ ಪ್ರಮಾಣದ ತೆರಿಗೆಯನ್ನು ಗ್ರಾಹಕರು ಸರಕಾರಕ್ಕೆ ಪಾವತಿಸುತ್ತಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಗ್ರಾಹಕರು ಕ್ರಮವಾಗಿ 57 ಶೇಕಡ ಹಾಗೂ 55 ಶೇಕಡಾ ತೆರಿಗೆ ಪಾವತಿಸುತ್ತಿದ್ದಾರೆ.
ಪರಿಸರ ಲಾಭದ ಕಾರಣಕ್ಕಾಗಿ ಅಧಿಕ ಬೆಲೆಯನ್ನು ಕಾಪಾಡಿಕೊಂಡು ಬರಲಾಗಿದೆ ಎಂದು ಕಳೆದ ಎರಡು ವರ್ಷಗಳಿಂದ ಸರಕಾರ ವಾದಿಸುತ್ತಲೇ ಬಂದಿದೆ. ಆದ್ದರಿಂದ ತೈಲ ಸರಕಾರದ ಪಾಲಿಗೆ ಕಾಮಧೇನುವಾಗಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ ನಿಧಿಯನ್ನು ಒದಗಿಸುತ್ತಲೇ ಬಂದಿದೆ..
ಭಾರತದ ಪರಿಸ್ಥಿತಿ ಸರಿಸುಮಾರು ಯೂರೋಪಿಯನ್ ದೇಶಗಳ ಪರಿಸ್ಥಿತಿಗೆ ಸಮಾನವಾಗಿದ್ದು, ತೈಲ ಆಮದು ವ್ಯಾಪಾರಿ ಶಿಲ್ಕನ್ನು ಋಣಾತ್ಮಕವಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅರ್ಥಶಾಸ್ತ್ರಜ್ಞರ ವಾದದಂತೆ, ಅಧಿಕ ಬೆಲೆ ಉಳಿಸುವ ಕಾರಣದಿಂದ ಬಳಕೆ ಕಡಿಮೆಯಾಗಿ, ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಉಂಟಾಗುತ್ತದೆ. ಇದರ ಜತೆಗೆ ಬೆಲೆ ನಿಯಂತ್ರಣ ರದ್ದುಪಡಿಸುವ ಮೂಲಕ ಸಬ್ಸಿಡಿ ಕಡಿತಗೊಳಿಸಲಾಗಿದೆ ಎನ್ನುವುದು ಸರಕಾರದ ಸಮರ್ಥನೆ. ಆದರೆ ಇಷ್ಟು ಅಧಿಕ ಬೆಲೆಯಲ್ಲಿ ಸಬ್ಸಿಡಿ ಬಹುತೇಕ ಇಲ್ಲ ಎಂದೇ ಹೇಳಬಹುದು. ಸರಕಾರ ತೈಲ ಕಂಪೆನಿಗಳಿಗೆ ನೀಡುವ ವೆಚ್ಚ ಕೂಡಾ ಸಬ್ಸಿಡಿಯನ್ನು ಒಳಗೊಂಡಿಲ್ಲ.
ಒಟ್ಟಿನಲ್ಲಿ ವಿತ್ತೀಯ ಕೊರತೆಯನ್ನು ಕಡಿತಗೊಳಿಸುವ ಸಲುವಾಗಿ ಅಬಕಾರಿ ಸುಂಕವನ್ನು ನಿರಂತರವಾಗಿ ಹೆಚ್ಚಿಸುವುದು ಅಪಾಯಕಾರಿ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಿದಂತೆಲ್ಲ ತೈಲ ಕಂಪೆನಿಗಳು ಈ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುತ್ತವೆ. ಇದಕ್ಕೆ ಬದಲಾಗಿ ಸರಕಾರ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಅದಕ್ಕೆ ಪರಿಹಾರ ಒದಗಿಸುವುದಿಲ್ಲ. ಇದರಿಂದಾಗಿ ಗ್ರಾಹಕರಿಗೆ ಮತ್ತಷ್ಟು ಹೊರೆ ಬೀಳುತ್ತದೆ.
ಅಬಕಾರಿ ಸುಂಕ ಇಳಿಕೆಯಾಗುವ ಪರಿಸ್ಥಿತಿಯೇ ಇಲ್ಲದಾದಾಗ, ಗ್ರಾಹಕರಲ್ಲಿ ವಿಲೇವಾರಿ ಮಾಡುವ ಆದಾಯ ಕೂಡಾ ಹೆಚ್ಚುತ್ತದೆ. ಇದು ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಎಲ್ಲ ವಲಯಗಳಲ್ಲಿ ಆದಾಯ ಹೆಚ್ಚುತ್ತದೆ. ಇದರಿಂದ ಹಣದುಬ್ಬರ ದರ ಕೂಡಾ ಕಡಿತಗೊಂಡು ಭಾರತೀಯ ರಿಸರ್ವ್ ಬ್ಯಾಂಕ್ ಬೆಂಚ್‌ಮಾರ್ಕ್ ದರವನ್ನು ಮತ್ತು ಸಾಲದ ಮೇಲಿನ ವೆಚ್ಚವನ್ನು ಇಳಿಸುತ್ತದೆ. ಭವಿಷ್ಯದ ದೃಷ್ಟಿಕೋನವನ್ನು ನೋಡುವುದಾದರೆ, ಈ ಹೆಚ್ಚಳ ಪ್ರವೃತ್ತಿಯನ್ನು 2017ರ ಆರಂಭದವರೆಗೂ ಅಂದರೆ ಮುಂದಿನ ಚುನಾವಣಾ ಸಂದರ್ಭದ ವರೆಗೂ ಮುಂದುವರಿಸಲಿದೆ. ಈ ಹಂತದಲ್ಲಿ ಮತದಾರರನ್ನು ಓಲೈಸುವ ಸಲುವಾಗಿ ಸ್ವಲ್ಪಮಟ್ಟಿಗೆ ಇಳಿಸುವ ಸಾಧ್ಯತೆಯನ್ನು ಮಾರುಕಟ್ಟೆ ತಜ್ಞರು ಅಂದಾಜಿಸುತ್ತಾರೆ. ಅದುವರೆಗೆ ಗ್ರಾಹಕರಿಗೆ ನಿರಾಳವಾಗುವ ಅವಕಾಶ ಇಲ್ಲ.
ಕೃಪೆ: ದ ಇಂಡಿಯನ್ ಎಕ್ಸ್‌ಪ್ರೆಸ್







