ವಿದ್ಯುತ್ ಸ್ಪರ್ಶದಿಂದ ಕಾರ್ಮಿಕ ಮೃತ್ಯು
ಮಂಗಳೂರು, ಸೆ. 16: ಕಬ್ಬಿಣದ ಏಣಿಯೊಂದು ಹೊತ್ತುಕೊಂಡು ಹೋಗುತ್ತಿದ್ದಾಗ ಹೈಟೆನ್ಷನ್ ತಂತಿಗೆ ತಗುಲಿ ಓರ್ವ ಕಾರ್ಮಿಕ ವಿದ್ಯುತ್ ಆಘಾತಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ಘಟನೆಯಲ್ಲಿ ಇನ್ನೋರ್ವ ಕಾರ್ಮಿಕ ಗಾಯಗೊಂಡಿದ್ದಾರೆ.
ಮೃತ ಕಾರ್ಮಿಕನನ್ನು ಪೈಂಟಿಂಗ್ ಕೆಲಸ ನಿರ್ವಹಿಸುತ್ತಿದ್ದ ಅಸ್ಸಾಂ ಮೂಲದ ಸಿಯಾರಾಮ್ ಎಂದು ಗುರುತಿಸಲಾಗಿದೆ. ಮತ್ತೋರ್ವ ಕಾರ್ಮಿಕ ರಾಜನ್ ಎಂಬಾತ ಗಂಭೀರ ಗಾಯಗೊಂಡಿದ್ದಾನೆ.
ಮನೆಯೊಂದರ ಪೈಟಿಂಗ್ ಕೆಲಸ ನಿರ್ವಹಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಒಂದು ಗೋಡೆಗೆ ಸುಣ್ಣ ಬಳಿದು ಮತ್ತೊಂಡೆದೆ ಸುಣ್ಣ ಬಳಿಯಬೇಕಾಗಿದ್ದರಿಂದ ಏಣಿಯನ್ನು ಇಬ್ಬರು ಕಾರ್ಮಿಕರು ಸಾಗಿಸುತ್ತಿದ್ದರೆಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಸಮೀಪದಲ್ಲೇ ಹಾದು ಹೋಗಿದ್ದ ಹೈಟೆನ್ಶನ್ ತಂತಿಗೆ ಸಿಲುಕಿ ಈ ರ್ಘಟನೆ ನಡೆದಿದೆ. ಘಟೆಯಲ್ಲಿ ಸಿಯಾರಾಮ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ರಾಜನ್ ಕರೆಂಟ್ ಶಾಕ್‌ನಿಂದ ತುಸು ದೂರಕ್ಕೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾನೆ.
ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರೂ, ಸಿಯಾರಾಜ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





