ಡೇವಿಸ್ ಕಪ್: ಸ್ಪೇನ್ ವಿರುದ್ಧ ಭಾರತಕ್ಕೆ ಸೋಲು
ರಾಮ್ ಕುಮಾರ್ , ಮೈನೇನಿ ವಿಫಲ * ಗೆಲುವಿನ ನಗೆ ಬೀರಿದ ಲೊಪೆಝ್, ಫೆರರ್ * ಸ್ಪೇನ್ 2-0 ಮುನ್ನಡೆ

ಹೊಸದಿಲ್ಲಿ, ಸೆ.16: ಭಾರತ ಡೇವಿಸ್ ಕಪ್ ಟೆನಿಸ್ ಪ್ಲೇ ಆಫ್ ಟೂರ್ನಿಯಲ್ಲಿ ಮೊದಲ ದಿನ ನಡೆದ ಎರಡು ಪಂದ್ಯಗಳಲ್ಲೂ ಸೋಲು ಅನುಭವಿಸಿದೆ. ಸ್ಪೇನ್ ಇದರೊಂದಿಗೆ 1-0 ಮುನ್ನಡೆ ಸಾಧಿಸಿದೆ.
ಮೊದಲ ಪಂದ್ಯದಲ್ಲಿ ರಾಮನಾಥನ್ ವಿರುದ್ಧ ಸ್ಪೇನ್‌ನ ಲೊಪೆೆಝ್ ಅವರು 6-4, 6-4, 3-6, 6-1 ಅಂತರದಲ್ಲಿ ಜಯ ಗಳಿಸಿದರು. ಎರಡನೆ ಪಂದ್ಯದಲ್ಲಿ ಭರವಸೆ ಮೂಡಿಸಿದ್ದ ಸಾಕೇತ್ ಮೈನೇನಿ ಅವರು ಡೇವಿಡ್ ಫೆರರ್ ವಿರುದ್ಧ 1-6, 2-6, 1-6 ಅಂತರದಲ್ಲಿ ಸೋಲು ಅನುಭವಿಸಿದರು.
ಮೊದಲ ಪಂದ್ಯದಲ್ಲಿ ವಿಶ್ವದ ಅಗ್ರಶ್ರೇಯಾಂಕದ ಆಟಗಾರರಲ್ಲಿ ಒಬ್ಬರಾಗಿರುವ ರಫೆಲ್ ನಡಾಲ್ ಮತ್ತು ರಾಮ್‌ಕುಮಾರ್ ರಾಮನಾಥನ್ ನಡುವೆ ಹಣಾಹಣಿ ನಿಗದಿಯಾಗಿತ್ತು. ಆದರೆ ನಡಾಲ್ ಹೊಟ್ಟೆ ನೋವಿನ ಕಾರಣದಿಂದಾಗಿ ಆಡುವ ನಿರ್ಧಾರದಿಂದ ಹಿಂದೆ ಸರಿದರು.
ನಡಾಲ್ ಬದಲಿಗೆ ಕಣಕ್ಕಿಳಿದ ಲೊಪೆಝ್ ಅವರು ಚೆನ್ನಾಗಿಯೇ ಆಡಿದರು. ಫ್ರೆಂಚ್ ಓಪನ್‌ನ ಡಬಲ್ಸ್ ಚಾಂಪಿಯನ್ ಲೊಪೆಝ್ ಅವರು ಮೊದಲ ಎರಡು ಸೆಟ್‌ಗಳಲ್ಲಿ 6-4, 6-4 ಅಂತರದಲ್ಲಿ ಮೇಲುಗೈ ಸಾಧಿಸಿ ರಾಮನಾಥನ್ ಅವರನ್ನು ಹಿಂದಿಕ್ಕಿದರು. ಆದರೆ ಮೂರನೆ ಸೆಟ್‌ನಲ್ಲಿ ರಾಮನಾಥನ್ 6-3 ಅಂತರದಲ್ಲಿ ತಿರುಗೇಟು ನೀಡಿದರು. ನಾಲ್ಕನೆ ಸೆಟ್‌ನಲ್ಲಿ ಮತ್ತೆ ರಾಮನಾಥನ್ ಅವರಿಗೆ ಆಘಾತ ನೀಡಿ ವಿಜಯ ಸಾಧಿಸಿದರು.
ಎರಡನೆ ಪಂದ್ಯದಲ್ಲಿ ಮೈನೇನಿ ಸುಲಭವಾಗಿ ಫೆರರ್‌ಗೆ ಶರಣಾದರು. 1 ಗಂಟೆ ಮತ್ತು 27 ನಿಮಿಷಗಳಲ್ಲಿ ಇವರ ನಡುವಿನ ಸೆಣಸಾಟ ಮುಗಿಯಿತು. ವಿಶ್ವದ 203ನೆ ಆಟಗಾರ ರಾಮನಾಥನ್ ಅವರು ಲೊಪೆಝ್ ವಿರುದ್ಧ ಎರಡು ಗಂಟೆ ಮತ್ತು 26 ನಿಮಿಷಗಳ ಕಾಲ ಪೈಪೋಟಿ ನೀಡಿದರು. ‘‘ ಇದೊಂದು ಉತ್ತಮ ಪಂದ್ಯ ಅವರೊಬ್ಬ ಶ್ರೇಷ್ಠ ಹೋರಾಟಗಾರ. ನಾನು ಅವರಿಂದ ಹೋರಾಟ ನಿರೀಕ್ಷಿಸಿದ್ದೆ’’-ಫೆಲಿಸಿಯಾನೊ ಲೊಪೆಝ್.
‘‘ನಾನು ಗೆಲುವಿಗೆ ಶಕ್ತಿ ಮೀರಿ ಶ್ರಮಿಸಿದೆ. ಆದರೆ ಗೆಲ್ಲಲು ಸಾಧ್ಯವಾಗಲಿಲ್ಲ. ಫೆಲಿ(ಲೊಪೆಝ್) ಚೆನ್ನಾಗಿ ಆಡಿದರು’’ -ರಾಮ್‌ಕುಮಾರ್ ರಾಮನಾಥನ್.
,,,,,,,







