ಸ್ನೋಡನ್ ‘ಅಕ್ರಮ ಬಯಲುಗೊಳಿಸಿದವನಲ್ಲ’
ಅಮೆರಿಕ ಕಾಂಗ್ರೆಸ್ ವರದಿ
ವಾಶಿಂಗ್ಟನ್, ಸೆ. 16: ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‌ಎಸ್‌ಎ)ಯ ರಹಸ್ಯ ಮಾಹಿತಿಗಳನ್ನು ಬಹಿರಂಗಗೊಳಿಸಿರುವ ಎಡ್ವರ್ಡ್ ಸ್ನೋಡನ್ ಓರ್ವ ‘‘ಸರಣಿ ಉತ್ಪ್ರೇಕ್ಷೆಗಾರ ಹಾಗೂ ಸುಳ್ಳುಗಾರ’’ ಎಂಬುದಾಗಿ ಆ ದೇಶದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಗುಪ್ತಚರ ಸಮಿತಿಯ ವರದಿಯೊಂದು ಹೇಳಿದೆ.
ಅವರು ‘ಅಕ್ರಮವನ್ನು ಬಯಲುಗೊಳಿಸಿದವರು’ ಎಂಬ ಹೆಗ್ಗಳಿಕೆಗೆ ಹೇಳಿಸಿದವರಲ್ಲ ಎಂದಿದೆ. ಎರಡು ವರ್ಷಗಳ ಕಾಲ ತನಿಖೆ ನಡೆಸಿದ ರಿಪಬ್ಲಿಕನ್ ನೇತೃತ್ವದ ಸಮಿತಿಯು ಮೂರು ಪುಟಗಳ ವರದಿಯೊಂದನ್ನು ಗುರುವಾರ ಬಿಡುಗಡೆಗೊಳಿಸಿದೆ. ಸುಭದ್ರ ಎನ್‌ಎಸ್‌ಎ ಜಾಲಗಳಿಂದ ದಾಖಲೆಗಳನ್ನು ಪಡೆದುಕೊಳ್ಳಲು ಸ್ನೋಡನ್‌ಗೆ ಹೇಗೆ ಸಾಧ್ಯವಾಯಿತು, ದಾಖಲೆಗಳಲ್ಲಿ ಯಾವ ಮಾಹಿತಿಗಳಿದ್ದವು ಹಾಗೂ ಮಾಹಿತಿ ಬಹಿರಂಗ ಯಾವ ರೀತಿಯಲ್ಲಿ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಯಾವ ಹಾನಿ ಮಾಡಿದೆ ಎಂಬುದನ್ನು ವರದಿ ವಿವರಿಸಿದೆ.
Next Story





